Site icon Vistara News

Virat Kohli: ಶಾರುಖ್, ಸಲ್ಮಾನ್ ಹಿಂದಿಕ್ಕಿ ಮೌಲ್ಯಯುತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ ಕಿಂಗ್​ ಕೊಹ್ಲಿ

Virat Kohli

Virat Kohli: Kohli is India's most valued celebrity followed by Ranveer Singh

ಮುಂಬೈ: ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ(Virat Kohli) ಅವರು ಭಾರತದ ಅತ್ಯಂತ ಮೌಲ್ಯಯುತ, ಜನಪ್ರಿಯ ಸೆಲೆಬ್ರಿಟಿ(Kohli is India’s most valued celebrity) ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. 2023ರಲ್ಲಿ ಕೊಹ್ಲಿ 1900 ಕೋಟಿ ರೂ. ಬ್ರಾಂಡ್​ ಮೌಲ್ಯ ಹೊಂದಿದ್ದಾರೆ. ನಿವೃತ್ತ ಕ್ರಿಕೆಟಿಗ ಎಂಎಸ್ ಧೋನಿ(MS Dhoni) 799 ಕೋಟಿ ರೂ. ಮೌಲ್ಯದೊಂದಿಗೆ ಪಟ್ಟಿಯಲ್ಲಿ ಏಳನೇ, ಸಚಿನ್ ತೆಂಡೂಲ್ಕರ್(Sachin Tendulkar) 760 ಕೋಟಿ ರೂ. ಬ್ರಾಂಡ್ ಮೌಲ್ಯದೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.

2022ರಲ್ಲಿ ವಿರಾಟ್​ ಕೊಹ್ಲಿ ಅವ ಬ್ರಾಂಡ್ ಮೌಲ್ಯ 1,474 ಕೋಟಿ ರೂ. ಇತ್ತು. ಈ ವರ್ಷದಲ್ಲಿ ಅವರ ಒಟ್ಟಾರೆ ಬ್ರಾಂಡ್ ಮೌಲ್ಯ ಅಂದಾಜು 29 ಪ್ರತಿಶತದಷ್ಟು ಏರಿಕೆ ಕಂಡಿದೆ. ಬಾಲಿವುಡ್​ ನಟ ರಣವೀರ್ ಸಿಂಗ್(Ranveer Singh) ದ್ವಿತೀಯ ಸ್ಥಾನಿಯಾಗಿದ್ದಾರೆ. ಅವರ ಬ್ರಾಂಡ್ ಮೌಲ್ಯ 1,692 ಕೋಟಿ ರೂ. ಶಾರುಖ್ ಖಾನ್(Shah Rukh Khan) 1,006 ಕೋಟಿ ರೂ.ಗಳ ಒಟ್ಟು ಬ್ರಾಂಡ್ ಮೌಲ್ಯದೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ 930 ಕೋಟಿ ರೂ. ಮೌಲ್ಯದೊಂದಿಗೆ 2022ರಲ್ಲಿನ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ನಟಿ ಆಲಿಯಾ ಭಟ್ 842 ಕೋಟಿ ರೂ. ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ, ದೀಪಿಕಾ ಪಡುಕೋಣೆ 800 ಕೋಟಿ ರೂ. ಮೌಲ್ಯದೊಂದಿಗೆ 6ನೇ ಸ್ಥಾನ ತಲುಪಿದ್ದಾರೆ. ಸಲ್ಮಾನ್ ಖಾನ್ 680 ಕೋಟಿ ರೂ. ಮೌಲ್ಯದೊಂದಿಗೆ 2023ರಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ Euro 2024: ಅಂತಿಮ ಹಂತದಲ್ಲಿ ಗೋಲು ಬಾರಿಸಿ ಪೋರ್ಚುಗಲ್​ಗೆ ರೋಚಕ ಗೆಲುವು ತಂದ ಫ್ರಾನ್ಸಿಸ್ಕೊ

ವಿಶ್ವಕಪ್​ನಲ್ಲಿ ಕೊಹ್ಲಿ ವಿಫಲ


ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದರು. ಇದರಲ್ಲೊಂದು ಗೋಲ್ಡನ್​ ಡಕ್​ ಕೂಡ ಒಳಗೊಂಡಿದೆ. ಮಹತ್ವದ ಸೂಪರ್​-8 ಸುತ್ತಿನ ಪಂದ್ಯದಲ್ಲಾದರೂ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಬೇಕಿದೆ. ಭಾರತ ನಾಳೆ ನಡೆಯುವ ಸೂಪರ್​-8 ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಬಾರ್ಬಡೋಸ್​ನಲ್ಲಿ ನಡೆಯಲಿದೆ.

ನಿಧಾನಗತಿ ಪಿಚ್ ಕಾರಣ!


ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್​ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವುದು ಎನ್ನುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್​ನಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ.

Exit mobile version