Site icon Vistara News

Virat Kohli: ಇನ್​ಸ್ಟಾಗ್ರಾಮ್​ ಗಳಿಕೆಯಲ್ಲೂ ಕೊಹ್ಲಿಯೇ ಕಿಂಗ್​! 1 ಪೋಸ್ಟ್​ಗೆ ಇಷ್ಟು ಮೊತ್ತ

Virat Kohli,Cristiano Ronaldo and Lionel Messi

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಕ್ರಿಕೆಟ್​ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ದಾಖಲೆಯನ್ನು ಹೊಂದಿದ್ದಾರೆ. ಇನ್​ಸ್ಟಾಗ್ರಾಮ್​(Instagram) ಖಾತೆಯಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಏಷ್ಯಾದ ಮತ್ತು ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾಗಿರುವ ಅವರು ಇದರಿಂದ ಗಳಿಸುವ ಆಧಾಯದ ವಿಚಾರದಲ್ಲಿಯೂ ಮುಂದಿದ್ದಾರೆ.

2023ರ ಸಾಲಿನಲ್ಲಿ ವಿರಾಟ್​ ಕೊಹ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಪ್ರತಿಯೊಂದು ಪ್ರಾಯೋಜಿತ ಪೋಸ್ಟ್‌ಗೆ 14 ಕೋಟಿ ರೂ.ಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೊಹ್ಲಿಯನ್ನು ಬಿಟ್ಟು ಏಷ್ಯಾ ಖಂಡದಲ್ಲೇ ಸಿನಿಮಾ, ರಾಜಕೀಯ ಸೇರಿ ಯಾವ ವಿಭಾಗದಲ್ಲೂ ಹೆಚ್ಚು ಫಾಲೋವರ್ಸ್(Virat Kohli Instagram followers)​ ಹೊಂದಿಲ್ಲ. ನೂರರ ಗಡಿಯೇ ದಾಟಿಲ್ಲ. ನಟಿ ಪ್ರಿಯಾಂಕ ಚೋಪ್ರಾ(Priyanka Chopra) ಅವರು 87 ಮಿಲಿಯನ್​ ಫಾಲೋವರ್ಸ್​ಗಳೊಂದಿಗೆ ಭಾರತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಕಳೆದ ವರ್ಷ ಇನ್​ಸ್ಟಾಗ್ರಾಮ್ ಖಾತೆಯಿಂದ ಬರೋಬ್ಬರಿ 302 ಕೋಟಿ ಗಳಿಸಿದ್ದಾರೆ. ಸದ್ಯ ಕೊಹ್ಲಿ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್​ಗಳ ಸಂಖ್ಯೆ 256 ಮಿಲಿಯನ್​. ಜಾಗತಿಕ ಮಟ್ಟದಲ್ಲಿ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಹಿರಿಮೆಯೂ ಕೊಹ್ಲಿ ಪಾಲಿಗಿದೆ. ವಿಶ್ವ ಮಟ್ಟದಲ್ಲಿ ಕೊಹ್ಲಿ 14ನೇ ಸ್ಥಾನದಲ್ಲಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊಗೆ ಅಗ್ರಸ್ಥಾನ

ಅತಿ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದವರ ಪಟ್ಟಿಯಲ್ಲಿ ಪೋರ್ಚುಗಲ್​ ತಂಡದ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರಿಗೆ ಮೊದಲ ಸ್ಥಾನ. ಅವರು 600 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಅವರು ಈ ಮಾಧ್ಯಮದಿಂದ ಗಳಿಸಿಸುವ ನಿವ್ವಳ ಮೌಲ್ಯ 4,176 ಕೋ.ರೂ ಎಂದು ಅಂದಾಜಿಸಲಾಗಿದೆ. 2ನೇ ಸ್ಥಾನದಲ್ಲಿ ಅಜೆಂಟೀನಾ ತಂಡದ ನಾಯಕ, ಫಿಫಾ ವಿಶ್ವಕಪ್​ ವಿಜೇತ ಲಿಯೋನೆಲ್​ ಮೆಸ್ಸಿ (Lionel Messi) ಕಾಣಿಸಿಕೊಂಡಿದ್ದಾರೆ ಅವರು 482 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ Virat Kohli: ಚಾರ್ಟರ್‌ ಫ್ಲೈಟ್‌ ಬಳಸಿ ಟ್ರೋಲ್​ ಆದ ಕಿಂಗ್​ ಕೊಹ್ಲಿ

ದಾಖಲೆ ಬರೆದ ರೊನಾಲ್ಡೊ

ಪೋರ್ಚುಗಲ್​ ತಂಡದ ಸ್ಟಾರ್​ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಎತ್ತರ ಏರಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ 600 ಮಿಲಿಯನ್ ಫಾಲೋವರ್ಸ್ ಗಳನ್ನು ಪಡೆದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಈ ಹಿಂದೆಯೇ ಈ ಮೈಲುಗಲ್ಲು ತಲುಪುವ ಎಲ್ಲ ಅವಕಾಶ ರೊನಾಲ್ಡೊ ಅವರಿಗಿತ್ತು. ಆದರೆ 2020ರಲ್ಲಿ ಇನ್​ಸ್ಟಾಗ್ರಾಮ್​ ಕಾತೆಯಲ್ಲಿ ಆದ ಕೆಲ ತಾಂತ್ರಿಕ ದೋಷದಿಂದಾಗಿ ಅವರ ಹಲವು ಅನುಯಾಯಿಗಳ ಸಂಖ್ಯೆ ಡಿಲೀಟ್​ ಆಗಿದ್ದವು.

ಬ್ರೆಜಿಲ್ ತಂಡದ ಫುಟ್ಬಾಲಿಗ ನೇಮರ್ ಜೂನಿಯರ್ ಅವರು ಇನ್​ಸ್ಟಾಗ್ರಾಮ್​ನಲ್ಲಿ 211 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಕ್ರೀಡಾಪಟುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಫ್ರಾನ್ಸ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಕಿಲಿಯಾನ್​ ಎಂಬಪ್ಪೆ 107 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಮಾಜಿ ಇಂಗ್ಲೆಂಡ್ ಫುಟ್ಬಾಲ್ ಆಟಗಾರ ಡೇವಿಡ್ ಬೇಕ್ ಹ್ಯಾಮ್ ಅವರು 81.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

Exit mobile version