Site icon Vistara News

Virat Kohli: ‘ಕೊಹ್ಲಿ ಕೊ ಬೌಲಿಂಗ್​ ದೋ’ ನ್ಯೂಯಾರ್ಕ್​ ಸ್ಟೇಡಿಯಂನಲ್ಲಿ ಮೊಳಗಿದ ಅಭಿಮಾನಿಗಳ ಕೂಗು

Virat Kohli

Virat Kohli: 'Kohli ko bowling do' chants echo at New York stadium

ನ್ಯೂಯಾರ್ಕ್​: ಟೀಮ್​ ಇಂಡಿಯಾದ(Team India) ಘಾತಕ ಬೌಲಿಂಗ್​ ದಾಳಿಗೆ ನೆಲಕಚ್ಚಿದ ಐರ್ಲೆಂಡ್(India vs Ireland)​, ಕೇವಲ 96 ರನ್​ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತ್ತು. ಇದೇ ಪಂದ್ಯದಲ್ಲಿ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ(virat kohli) ಅವರಿಗೆ ಬೌಲಿಂಗ್​ ನೀಡುವಂತೆ ಪ್ರೇಕ್ಷಕರು ವಿಶೇಷವಾಗಿ ಮನವಿ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್(viral video) ಆಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಐರ್ಲೆಂಡ್​ ತಂಡದ ಬ್ಯಾಟರ್​ಗಳು ಭಾರತೀಯ ಬೌಲರ್​ಗಳ ಬಿಗಿ ದಾಳಿಗೆ ಸತತವಾಗಿ ವಿಕೆಟ್​ ಕಳೆದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಭಾರತೀಯ ಅಭಿಮಾನಿಗಳು ಗ್ಯಾಲರಿಯಿಂದ ಜೋರಾಗಿ ಹಿಂದಿಯಲ್ಲಿ “ಕೊಹ್ಲಿ ಕೊ ಬೌಲಿಂಗ್​ ದೋ….ಕೊಹ್ಲಿ ಕೊ ಬೌಲಿಂಗ್​ ದೋ” ಎಂದು ಕೊಹ್ಲಿಗೆ ಬೌಲಿಂಗ್​ ನೀಡುವಂತೆ ಆಗ್ರಹಿಸಿದ್ದಾರೆ. ಇದರ ವಿಡಿಯೊ ವೈರಲ್​ ಆಗಿದೆ.

ಅಭಿಮಾನಿಗಳು ವಿರಾಟ್​ ಅವರಿಗೆ ಬೌಲಿಂಗ್​ ನೀಡುವಂತೆ ಆಗ್ರಹಿಸಲು ಒಂದು ಕಾರಣವಿದೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್​ ನಡೆಸಿ ವಿಕೆಟ್​ ಕಿತ್ತು ಮಿಂಚಿದ್ದರು. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ​ನಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರನ್ನು ಔಟ್ ಮಾಡಿದ್ದರು. ಇದು 9 ವರ್ಷಗಳ ನಂತರ ಕೊಹ್ಲಿಗೆ ಲಭಿಸಿದ ವಿಕೆಟ್ ಆಗಿತ್ತು.

ಇದನ್ನೂ ಓದಿ Rohit Sharma: ಹಲವು ದಾಖಲೆಗಳ ಸರದಾರನಾದ ಹಿಟ್​ಮ್ಯಾನ್​ ರೋಹಿತ್​

ವಿರಾಟ್​ ಕೊಹ್ಲಿ ಕೂಡ ಬೌಲಿಂಗ್​ ಅನುಭವವನ್ನು ಹೊಂದಿದ್ದಾರೆ. 2015ರ ವಿಶ್ವಕಪ್​ನಲ್ಲಿ ಆಸೀಸ್​ ವಿರುದ್ಧ ಮತ್ತು ಇದಕ್ಕೂ ಮುನ್ನ 2011ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಬೌಲಿಂಗ್​ ನಡೆಸಿದ್ದರು. ಇಲ್ಲಿ ತಲಾ ಓವರ್ ಬೌಲಿಂಗ್​ ನಡೆಸಿ ವಿಕೆಟ್​ ಪಡೆಯದಿದ್ದರೂ ಉತ್ತಮ ರನ್​ ಕಂಟ್ರೋಲ್​ ಮಾಡಿದ್ದರು. ಏಕದಿನದಲ್ಲಿ ಕೊಹ್ಲಿ 5 ವಿಕೆಟ್​, ಟಿ20 ಮತ್ತು ಐಪಿಎಲ್​ನಲ್ಲಿಯೂ ತಲಾ 4 ವಿಕಟ್​ ಪಡೆದ ಸಾಧನೆ ಮಾಡಿದ್ದಾರೆ. ಹೀಗಾಗಿ ಕೊಹ್ಲಿಗೆ ಬೌಲಿಂಗ್​ ನೀಡುವಂತೆ ಅಭಿಮಾನಿಗಳು ಆಗ್ರಹಿಸಿದ್ದಾರೆ. ಕಳೆದ ವರ್ಷ ಏಕದಿನ ವಿಶ್ವಕಪ್​ನಲ್ಲಿಯೂ ಅಭಿಮಾನಿಗಳು ಕೊಹ್ಲಿಗೆ ಬೌಲಿಂಗ್ ನೀಡುವಂತೆ ಆಗ್ರಹಿಸಿದ್ದರು.

ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಆರಂಭಿನಾಗಿ ಕಣಕ್ಕಿಳಿದ ಕೊಹ್ಲಿ ಕೇವಲ 1 ರನ್​ ಗಳಿಸಿ ವಿಫಲರಾದರು. ಇದಕ್ಕೂ ಮುನ್ನ ಐಪಿಎಲ್​ನಲ್ಲಿ ಕೊಹ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸಿ ಟೂರ್ನಿಯಲ್ಲೇ ಅತ್ಯಧಿಕ ರನ್​ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಭಾರತ ಮುಂದಿನ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಕೊಹ್ಲಿಯ ಮೇಲೆ ಹೆಚ್ಚಿನ ಭರವಸೆ ಇರಿಸಲಾಗಿದೆ. ಕೊಹ್ಲಿ ಪಾಕಿಸ್ತಾನ ವಿರುದ್ಧ ಇದುವರೆಗೂ ಉತ್ತಮ ಪ್ರದರ್ಶನ ತೋರಿದ್ದಾರೆ. 2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಏಕಾಂಗಿಯಾಗಿ ಹೋರಾಡಿ ಪಾಕ್​ಗೆ ಸೋಲುಣಿಸಿದ್ದರು.

Exit mobile version