Site icon Vistara News

Virat Kohli: ಶತಕ ಬಾರಿಸಿದರೂ ಕಳಪೆ ದಾಖಲೆ ಬರೆದ ವಿರಾಟ್​ ಕೊಹ್ಲಿ

Virat Kohli

ಜೈಪುರ: ಶನಿವಾರ ನಡೆದ ಐಪಿಎಲ್​(IPL 2024) ಮುಖಾಮುಖಿಯಲ್ಲಿ ರಾಜಸ್ಥಾನ್​ ರಾಯಲ್ಸ್​(Rajasthan Royals) ವಿರುದ್ಧ ವಿರಾಟ್​ ಕೊಹ್ಲಿ(Virat Kohli) ಶತಕ ಬಾರಿಸಿದರೂ ಕೂಡ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಇದುವರೆಗಿನ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ನಿಧಾನಗತಿಯ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಕೊಹ್ಲಿ ಶತಕ ಬಾರಿಸಿ ಐಪಿಎಲ್​ನಲ್ಲಿ ತಮ್ಮ 8ನೇ ಶತಕ ದಾಖಲಿಸಿದರು. 72 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿದರು. 12 ಬೌಂಡರಿ ಮತ್ತು 4 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿತ್ತು. ಆದರೆ, ಐಪಿಎಲ್​ ಇತಿಹಾಸದಲ್ಲಿ ಶತಕ ಪೂರೈಸಲು ಅತಿ ಹೆಚ್ಚು ಎಸೆತಗಳನ್ನು ತೆಗೆದುಕೊಂಡ ಆಟಗಾರರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನಕ್ಕೇರಿದರು. ಕೊಹ್ಲಿಗೂ ಮುನ್ನ ಈ ಕೆಟ್ಟ ದಾಖಲೆ ಮನೀಶ್ ಪಾಂಡೆ ಹೆಸರಿನಲ್ಲಿತ್ತು. 2009ರಲ್ಲಿ ನಡೆದ 2ನೇ ಆವೃತ್ತಿಯ ಐಪಿಎಲ್​ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧದ ಪಂದ್ಯದಲ್ಲಿ ಪಾಂಡೆ 67 ಎಸೆತಗಳಿಂದ ಶತಕ ಪೂರೈಸಿದ್ದರು. ಇದೀಗ ಕೊಹ್ಲಿ ಕೂಡ 67 ಎಸೆತಗಳಿಂದ ಶತಕ ಬಾರಿಸಿ ಈ ಕೆಟ್ಟ ದಾಖಲಯಲ್ಲಿ ತಾವು ಕೂಡ ಪಾಲು ದಾರರಾಗಿದ್ದಾರೆ. ಸಾರಸ್ಯವೆಂದರೆ ಉಭಯ ಆಟಗಾರರು ಕೂಡ ಆರ್​ಸಿಬಿ ತಂಡದ ಪರ ಆಡುವಾಗಲೇ ಈ ಕೆಟ್ಟ ದಾಖಲೆ ಬರೆದಿರುವುದು.

ವಿರಾಟ್ ಕೊಹ್ಲಿಯ ಆಮೆಗತಿಯ ಬ್ಯಾಟಿಂಗ್​ ನಿಂದಾಗಿಯೇ ಆರ್​ಸಿಬಿ ದೊಡ್ಡ ಮೊತ್ತಕ್ಕೆ ಹಿನ್ನಡೆಯಾಗುತ್ತಿದೆ ಎಂದು ಸ್ವತಃ ಆರ್​ಸಿಬಿ ಅಭಿಮಾನಿಗಳೇ ಟೀಕೆ ವ್ಯಕ್ತಮಾಡುತ್ತಿದ್ದಾರೆ. ಇವರ ಈ ನಿಧಾನ ಗತಿಯ ಬ್ಯಾಟಿಂಗ್​ನಿಂದ ಸ್ಲಾಗ್​ ಓವರ್​ಗಳಲ್ಲಿ ಹೊಡಿ-ಬಡಿ ಆಟಗಾರರಿಗೆ ಹೆಚ್ಚು ಎಸೆತಗಳು ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ IPL 2024: ಈ ಬಾರಿಯ ಐಪಿಎಲ್​ನಲ್ಲಿ ಭಾರೀ ಭದ್ರತಾ ವೈಫಲ್ಯ; ಕೊಹ್ಲಿ ಪ್ರಾಣಕ್ಕೆ ಮತ್ತೆ ಕುತ್ತು

ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಆರ್​​ಸಿಬಿ ಬ್ಯಾಟಿಂಗ್​ ಇನ್ನಿಂಗ್ಸ್​ನ 19ನೇ ಓವರ್​ನಲ್ಲಿ​ ಆರ್​ಸಿಬಿ ಕೇವಲ ಮೂರು ರನ್​ ಮಾತ್ರ ಕಲೆಕಾಹಿತು. ಇದಕ್ಕೆ ಕಾರಣ ಕೊಹ್ಲಿ. ಶತಕ ಬಾರಿಸುವ ಸಲುವಾಗಿ ಅವರು ರಕ್ಷಣಾತ್ಮಕ ಆಟವಾಡಿದರು. ಒಂದೊಮ್ಮೆ ಶತಕದ ಚಿಂತೆ ಬಿಟ್ಟು ಬ್ಯಾಟ್​ ಬೀಸುತ್ತಿದ್ದರೆ ಕನಿಷ್ಠ 10 ರನ್​ ಬರುತ್ತಿತ್ತು. ಆಗ ಪಂದ್ಯವನ್ನು ಕೂಡ ಗೆಲ್ಲುವ ಅವಕಾಶವೂ ಇರುತ್ತಿತ್ತು. ಸೋಲಿನ ಬಳಿಕ ನಾಯಕ ಡು ಪ್ಲೆಸಿಸ್​ ಕೂಡ ಅಂತಿಮ ಓವರ್​ನಲ್ಲಿ ರನ್​ ಗಳಿಕೆ ಕುಂಠಿತವಾದದ್ದು ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದರು.

ಅತಿ ಹೆಚ್ಚು ಎಸೆತಗಳಿಂದ ಶತಕ ಬಾರಿಸಿದ ಆಟಗಾರರು


ಮನೀಷ್‌ ಪಾಂಡೆ- 67 ಎಸೆತ (2009ರಲ್ಲಿ ಡೆಕ್ಕನ್​ ಚಾರ್ಜಸ್​ ವಿರುದ್ಧ)

ವಿರಾಟ್​ ಕೊಹ್ಲಿ-67 ಎಸೆತ (2024ರಲ್ಲಿ ರಾಜಸ್ಥಾನ್​ ವಿರುದ್ಧ)

ಸಚಿನ್​ ತೆಂಡೂಲ್ಕರ್​-66 ಎಸೆತ (2011ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ)

ಡೇವಿಡ್​ ವಾರ್ನರ್​-66 ಎಸೆತ (2010ರಲ್ಲಿ ಕೆಕೆಆರ್​ ವಿರುದ್ಧ)

ಜಾಸ್​ ಬಟ್ಲರ್​-66 ಎಸೆತ (2022ರಲ್ಲಿ ಮುಂಬೈ ವಿರುದ್ಧ)

Exit mobile version