ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರು ಕ್ರಿಕೆಟ್ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಏಷ್ಯಾದ ಮತ್ತು ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅವರು 250 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಈ ಮೂಲಕ ರೊನಾಲ್ಡೊ ಮತ್ತು ಮೆಸ್ಸಿ ಅವರ ಸಾಲಿಗೆ ಸೇರಿದ್ದಾರೆ.
ವಿರಾಟ್ ಕೊಹ್ಲಿಯನ್ನು ಬಿಟ್ಟು ಏಷ್ಯಾ ಖಂಡದಲ್ಲೇ ಸಿನಿಮಾ, ರಾಜಕೀಯ ಸೇರಿ ಯಾವ ವಿಭಾಗದಲ್ಲೂ ಇಷ್ಟು ಫಾಲೋವರ್ಸ್ ಹೊಂದಿಲ್ಲ. ನೂರರ ಗಡಿಯೇ ದಾಟಿಲ್ಲ. ನಟಿ ಪ್ರಿಯಾಂಕ ಚೋಪ್ರಾ(Priyanka Chopra) ಅವರು 87 ಮಿಲಿಯನ್ ಫಾಲೋವರ್ಸ್ಗಳೊಂದಿಗೆ ಭಾರತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಕಳೆದ ವರ್ಷ ಇನ್ಸ್ಟಾಗ್ರಾಮ್ ಖಾತೆಯಿಂದ ಬರೋಬ್ಬರಿ 302 ಕೋಟಿ ಗಳಿಸಿದ್ದಾರೆ. ಕೊಹ್ಲಿ ಈವರೆಗೂ ತಮ್ಮ ಇನ್ಸ್ಟಾಗ್ರಾಮ್ನಲ್ಲಿ 1601 ಪೋಸ್ಟ್ ಹಾಕಿದ್ದಾರೆ. ಅವರು ಹಾಕುವ ಒಂದು ಪೋಸ್ಟ್ಗೆ 8.69 ಕೋಟಿ ರೂ. ಸಿಗುತ್ತದೆ.
ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದವರ ಪಟ್ಟಿಯಲ್ಲಿ ಪೋರ್ಚುಗಲ್ ತಂಡದ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರಿಗೆ ಮೊದಲ ಸ್ಥಾನ. ಅವರು 585 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. 2ನೇ ಸ್ಥಾನದಲ್ಲಿ ಅಜೆಂಟೀನಾ ತಂಡದ ನಾಯಕ, ಫಿಫಾ ವಿಶ್ವಕಪ್ ವಿಜೇತ ಲಿಯೋನೆಲ್ ಮೆಸ್ಸಿ (Lionel Messi) ಕಾಣಿಸಿಕೊಂಡಿದ್ದಾರೆ ಅವರು 462 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ Virat Kohli: ಶತಕ ಹೊಡೆದಿದ್ದು ವಿರಾಟ್ ಕೊಹ್ಲಿ, ಟ್ರೋಲ್ ಆಗಿದ್ದು ಗೌತಮ್ ಗಂಭೀರ್!
ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರು ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದರು. ಐಪಿಎಲ್ನಲ್ಲಿ ಅತ್ಯಧಿಕ ರನ್ ಮತ್ತು ಶತಕ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಕೊಹ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆಡಲು ಲಂಡನ್ ತಲುಪಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಈ ಫೈನಲ್ ಪಂದ್ಯ ಜೂನ್ 7ರಿಂದ ಲಂಡನ್ನ ಓವಲ್ ಮೈದಾನದಲ್ಲಿ ಆರಂಭವಾಗಲಿದೆ.