ಮೆಲ್ಬೋರ್ನ್: ಟಿ20 ವಿಶ್ವ ಕಪ್‌ನ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಕಠಿಣ ಅಭ್ಯಾಸ ನಡೆಸುತ್ತಿದೆ. ಪಾಕ್ ವಿರುದ್ಧ ಭಾನುವಾರ ಭಾರತ ಈ ಬಾರಿಯ ವಿಶ್ವ ಕಪ್‌ನ ಮೊದಲ ಪಂದ್ಯವನ್ನಾಡಲಿದೆ. ಈ ಪಂದ್ಯಕ್ಕೂ ಮುನ್ನ ಕೊಹ್ಲಿ ನೆಟ್‌ನಲ್ಲಿ ಭರ್ಜರಿ ತಾಲೀಮು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳ ಗುಂಪು ವಿರಾಟ್ ಕೊಹ್ಲಿ ಏಕಾಗ್ರತೆಗೆ ಅಡ್ಡಿ ಪಡಿಸಿದೆ. ಈ ವೇಳೆ ಅಭಿಮಾನಿಗಳಿಗೆ ಕೊಹ್ಲಿ ಬೈದಿರುವ ವಿಡಿಯೊ ವೈರಲ್ ಆಗಿದೆ.
ನೆಟ್‌ನಲ್ಲಿ ವಿರಾಟ್ ಕೊಹ್ಲಿ ಥ್ರೋಡೌನ್ ಎಸೆತಗಳಿಗೆ ಅಭ್ಯಾಸವನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ನೆಟ್ಸ್‌ನ ಹಿಂದೆ ನಿಂತ ಅಭಿಮಾನಿಗಳ ಗುಂಪಿನಲ್ಲಿ ಒಬ್ಬ ಅಭಿಮಾನಿ “ಸ್ಟೇಡಿಯಂನಿಂದ ಆಚೆಗೆ ಬಾರಿಸಿ” ಎಂದು ಜೋರಾಗಿ ಕಿರುಚಾಡಲು ಆರಂಭಿಸಿದ್ದಾನೆ. ಇದು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಕಿರಿಕಿರಿಯುಂಟು ಮಾಡಿತ್ತು. ಹೀಗಾಗಿ ತಕ್ಷಣವೇ ವಿರಾಟ್ ಕೊಹ್ಲಿ, ಈ ರೀತಿ ವರ್ತನೆಯಿಂದ ನನ್ನ ಏಕಾಗ್ರತೆ ತಪ್ಪುತ್ತಿದೆ ಎಂದು ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಕೆ ನೀಡಿದ್ದಾರೆ.
“ಇದು ಅಭ್ಯಾಸದ ಸಮಯ, ಮಾತಾಡಬೇಡಿ. ಏಕಾಗ್ರತೆ ತಪ್ಪುತ್ತದೆ. ಈ ರೀತಿಯ ವರ್ತನೆ ನನಗೆ ಇಷ್ಟವಿಲ್ಲ” ಎಂದು ವಿರಾಟ್ ಕೊಹ್ಲಿ, ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಆಡಿದ ಮಾತಿಗೆ ಅಭಿಮಾನಿಗಳು ಕೂಡ ಸಮ್ಮತಿ ಸೂಚಿಸಿದ್ದು ವಿಶ್ರಾಂತಿಯಲ್ಲಿರುವಾಗ ನಾವು ಮಾತನಾಡುತ್ತೇವೆ. ನಾವು ಕಿಂಗ್ ಪರವಾಗಿಯೇ ಇದ್ದೇವೆ. ಕೊಹ್ಲಿ ಯಾವತ್ತಿಗೂ ಕಿಂಗ್” ಎಂದು ಹೇಳಿದ್ದಾರೆ.
ಇದನ್ನೂ ಓದಿ | T20 World Cup | ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವೆ ಎಂದ ಆಸೀಸ್ ಬ್ಯಾಟರ್