Site icon Vistara News

Virat Kohli: ತೆಂಡೂಲ್ಕರ್ ಆಯ್ತು ಈಗ ಕೊಹ್ಲಿ ಸರದಿ; ಡೀಪ್‌ಫೇಕ್ ಮೂಲಕ ಬೆಟ್ಟಿಂಗ್ ಆ್ಯಪ್​​ ಪ್ರಚಾರ

Virat Kohli Deepfake

ಮುಂಬಯಿ: ಇತ್ತೀಚೆಗೆ ಸಚಿನ್‌ ತೆಂಡೂಲ್ಕರ್‌(Sachin Tendulkar) ಅವರ ಡೀಪ್‌ಫೇಕ್‌(Deepfake) ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಬೆಟ್ಟಿಂಗ್​ ಗೇಮಿಂಗ್ ಆ್ಯಪ್​ಗಳಲ್ಲಿ ಯುವ ಜನರನ್ನು ಉತ್ತೇಜಿಸುವಂತೆ ಪ್ರಚಾರ ಮಾಡುತ್ತಿರುವ ವಿಡಿಯೊವೊಂದು ಕಲ ದಿನಗಳ ಹಿಂದೆ ಭಾರಿ ವೈರಲ್​ ಆಗಿತ್ತು. ಬಾರಿ ಸುದ್ದಿಯಾಗಿತ್ತು. ಈ ಬಗ್ಗೆ ಸಚಿನ್​ ಕಳವಳ ವ್ಯಕ್ತಪಡಿಸಿದ್ದರು. ಇದೀಗ ವಿರಾಟ್​ ಕೊಹ್ಲಿಯ(Virat Kohli) ಡೀಪ್‌ಫೇಕ್‌ ವಿಡಿಯೊ ವೈರಲ್​ ಆಗಿದೆ.

ವಿರಾಟ್ ಕೊಹ್ಲಿ ಬೆಟ್ಟಿಂಗ್​ ಆ್ಯಪ್​ಗಳಲ್ಲಿ ಯುವ ಜನರನ್ನು ಉತ್ತೇಜಿಸುವಂತೆ ಪ್ರಮೋಷನ್ ಮಾಡುತ್ತಿವ ಡೀಪ್‌ಫೇಕ್‌ ವಿಡಿಯೊವೊಂದು(deepfake videos) ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ನಕಲಿ ವಿಡಿಯೋದಲ್ಲಿ ಕೊಹ್ಲಿ ಕೇವಲ ಮೂರು ದಿನದಲ್ಲಿ 1 ಸಾವಿರ ರೂ. ಬಂಡವಾಳ ಹಾಕಿ 81 ಸಾವಿರ ರೂ. ಪಡೆದಿರುವುದಾಗಿ ಹೇಳಿದ್ದಾರೆ.

ತಂತ್ರಜ್ಞಾನದ ದುರ್ಬಳಕೆ ಆಗುತ್ತಿರುವುದನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ದೂರುಗಳು ಹಾಗೂ ಎಚ್ಚರಿಕೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಡೀಪ್‌ಫೇಕ್‌ ಹಾಗೂ ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಯಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಚಿನ್​ ಹೇಳಿದ್ದರು.

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೊ ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿತ್ತು. ಪ್ರಮುಖ ಸೆಲೆಬ್ರಿಟಿಗಳು ಕೃತ್ಯವನ್ನು ಖಂಡಿಸಿದ್ದರ ಜತೆಗೆ ಕ್ರಮಕ್ಕೆ ಆಗ್ರಹಿಸಿದ್ದರು. ಇದಾದ ನಂತರ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ 465 (ನಕಲು), 469 (ಗೌರವಕ್ಕೆ ಧಕ್ಕೆ), ಮಾಹಿತಿ ತಂತ್ರಜ್ಞಾನ ಕಾಯ್ದೆ (2000)ಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣದ ಪ್ರಮುಖ ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದರು. ರಶ್ಮಿಕಾ ಮಂದಣ್ಣ ಅವರ ಬಳಿಕ ಕತ್ರಿನಾ ಕೈಫ್‌, ಕಾಜೋಲ್‌, ಆಲಿಯಾ ಭಟ್‌ ಸೇರಿ ಹಲವರ ಡೀಪ್‌ಫೇಕ್‌ ವಿಡಿಯೊಗಳು ಸುದ್ದಿಯಾಗಿದ್ದವು.

ಇದನ್ನೂ ಓದಿ  Deepfake Scam: ಡೀಪ್‌ಫೇಕ್‌ ಬಳಸಿ ಕಂಪನಿಗೆ 200 ಕೋಟಿ ರೂ. ವಂಚಿಸಿದ ದುಷ್ಟರು! ಹೇಗೆ?

ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಚಿಂತನೆ


ಡೀಪ್‌ಫೇಕ್‌ ವಿಡಿಯೊಗಳು ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ವಿಡಿಯೊ ಪಸರಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಡೀಪ್‌ಫೇಕ್‌ ಈಗ ಸಮಾಜಕ್ಕೆ ಮಾರಕವಾಗುತ್ತಿದೆ. ಇದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ, ಕ್ಷಿಪ್ರವಾಗಿ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಇದರ ದಿಸೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಡೀಪ್‌ಫೇಕ್‌ ನಿಯಂತ್ರಣದ, ಕ್ರಮ ತೆಗೆದುಕೊಳ್ಳುವುದರ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮುಂಬರುವ ಡಿಸೆಂಬರ್‌ನಲ್ಲಿ ಇದರ ಕುರಿತು ಮತ್ತಷ್ಟು ಚರ್ಚಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನೂ ಇದಕ್ಕಾಗಿ ಬಳಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Exit mobile version