Site icon Vistara News

ಬಾಕ್ಸಿಂಗ್​ ಡೇ ಟೆಸ್ಟ್;​ 10 ದಿನ ಮುಂಚಿತವಾಗಿ ಹರಿಣಗಳ ನಾಡಿಗೆ ತೆರಳಿದ ಕಿಂಗ್​ ಕೊಹ್ಲಿ

virat kohli travel south africa

ಮುಂಬಯಿ: ಏಕದಿನ ವಿಶ್ವಕಪ್ ಟೂರ್ನಿಯ​ ಬಳಿಕ ಸರಿ ಸುಮಾರು ಒಂದು ತಿಂಗಳ ವಿಶ್ರಾಂತಿಯಲ್ಲಿದ್ದ ಟೀಮ್ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಮತ್ತೆ ಕ್ರಿಕೆಟ್​ ಆಡಲು ಮುಂದಾಗಿದ್ದಾರೆ. ಇದೇ ತಿಂಗಳ ಕೊನೆಯ ವಾರದಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಸರಣಿ ಆರಂಭಕ್ಕೂ 10 ದಿನ ಮುಂಚಿತವಾಗಿ ಕೊಹ್ಲಿ ಏಕಾಂಗಿಯಾಗಿ ದಕ್ಷಿಣ ಆಫ್ರಿಕಾಗೆ ಪ್ರವಾಸ ಬೆಳೆಸಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್‌ ಆಡಲು ವಿರಾಟ್​ ಕೊಹ್ಲಿ ದಕ್ಷಿಣ ಆಫ್ರಿಕಾಗೆ ಪ್ರವಾಸ ಬೆಳೆಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಏಕದಿನ ಸರಣಿಯಿಂದ ಹೊರಗುಳಿದ ಕೊಹ್ಲಿ ಕೇವಲ 2 ಪಂದ್ಯಗಳ ಟೆಸ್ಟ್​ನಲ್ಲಿ ಮಾತ್ರ ಆಡಲಿದ್ದಾರೆ. ಇತ್ತಂಡಗಳ ನಡುವಿನ ಟೆಸ್ಟ್​ ಸರಣಿ ಡಿಸೆಂಬರ್​ 26 ರಿಂದ ಆರಂಭವಾಗಲಿದೆ. ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ ಕೂಡ ಈ ಪಂದ್ಯದ ಮೂಲಕ ಮತ್ತೆ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ.

ವಿರಾಟ್ ಕೊಹ್ಲಿ ಕಂದು ಬಣ್ಣದ ಜಾಕೆಟ್ ಮತ್ತು ಡಫಲ್ ಬ್ಯಾಗ್‌ನೊಂದಿಗೆ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಡುವುದನ್ನು ಈ ವಿಡಿಯೊದಲ್ಲಿ ಕಾಣಬಹುದು. ಇದೇ ವೇಳೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಗಳೊಂದಿಗೆ ಸೆಲ್ಫಿಗೂ ಪೋಸ್ ನೀಡಿದರು.

35 ವರ್ಷದ ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್​ ಸೋಲಿನ ಬಳಿಕ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ಕಾಲ ಕಳೆದಿದ್ದರು. ಇದೀಗ ಮತ್ತೆ ಕ್ರಿಕೆಟ್​ನತ್ತ ಮುಖ ಮಾಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಅಭೂತಪೂರ್ವ ಬ್ಯಾಟಿಂಗ್​ ಪ್ರದರ್ಶನ ತೋರಿದ ಕೊಹ್ಲಿ ಟೂರ್ನಿಯಲ್ಲಿ ಅತ್ಯಧಿಕ ರನ್​ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. 11 ಪಂದ್ಯಗಳನ್ನು ಆಡಿ ಒಟ್ಟು 765 ರನ್​ ಬಾರಿಸಿದ್ದರು.

ಇದನ್ನೂ ಓದಿ Virat Kohli: ಕಾನೂನು ಪ್ರವೇಶ ಪರೀಕ್ಷೆಯಲ್ಲೂ ಕಿಂಗ್​ ಕೊಹ್ಲಿಯದ್ದೇ ಹವಾ

ಭಾರತ ಟೆಸ್ಟ್​ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್​, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಮೊಹಮದ್ ಶಮಿ, ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಪ್ರಸಿದ್ಧ್​ ಕೃಷ್ಣ.

ಗೂಗಲ್​ ಸರ್ಚ್​ನಲ್ಲಿಯೂ ಕೊಹ್ಲಿಯದ್ದೇ ಹವಾ!

ಸರ್ಚ್ ಇಂಜಿನ್ ದೈತ್ಯ ‘ಗೂಗಲ್’ ತನ್ನ ಸಂಪೂರ್ಣ 25 ವರ್ಷಗಳ ಇತಿಹಾಸದಲ್ಲಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಕ್ರಿಕೆಟಿಗ ವಿಷಯಕ್ಕೆ ಬಂದಾಗ ವಿರಾಟ್ ಕೊಹ್ಲಿ ಹೆಸರು ಅಗ್ರಸ್ಥಾನದಲ್ಲಿದೆ. ಆದರೂ ಕೂಡ ಪಾಕ್​ನಲ್ಲಿ ಅವರ ಹೆಸರು ಸರ್ಚ್​ ಮಾಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಗೂಗಲ್​ನಲ್ಲಿ ಕೊಹ್ಲಿಯನ್ನು ಸರ್ಚ್​ ಮಾಡುದಕ್ಕಿಂತ ಅವರನ್ನು ನೇರವಾಗಿ ನೋಡುವುದೇ ಪಾಕ್​ ಅಭಿಮಾನಿಗಳ ಗುರಿಯಾಗಿದ್ದಿರಲೂಬಹುದು. ಇದೇ ಕಾರಣಕ್ಕೆ ಅವರು ಸರ್ಚ್​ ಆಗದಿರಲು ಕಾರಣವಿರಬಹುದು.

Exit mobile version