Site icon Vistara News

Asia Cup | ಹೈವೋಲ್ಟೇಜ್‌ ಪಂದ್ಯಕ್ಕೂ ಮುನ್ನ ವಿರಾಟ್‌ ಕೊಹ್ಲಿ-ಬಾಬರ್‌ ಆಜಂ ಭೇಟಿ ಆಗಿದ್ದೇಕೆ?

India

ದುಬೈ: ಏಷ್ಯಾ ಕಪ್‌ (Asia Cup) ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಆಗಸ್ಟ್‌ ೨೭ರಂದು ಪಾಕಿಸ್ತಾನವನ್ನು ಎದುರಿಸಲುವುದರಿಂದ ಈ ಹೈವೋಲ್ಟೇಜ್‌ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ಈಗಾಗಲೇ ಭಾರತ ತಂಡವು ದುಬೈ ತಲುಪಿದ್ದು, ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಇನ್ನು ವಿಶ್ವದಲ್ಲೇ ಅಗ್ರೆಸ್ಸಿವ್‌ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ಪಾಕ್‌ ತಂಡದ ನಾಯಕ ಬಾಬರ್‌ ಆಜಂ ಭೇಟಿಯಾಗಿದ್ದಾರೆ.

ಬಹುತೇಕ ತಂಡಗಳು ದುಬೈಗೆ ಆಗಮಿಸಿದ್ದು, ಆಟಗಾರರು ಕ್ರೀಡಾಂಗಣದಲ್ಲಿ ಬೆವರು ಹರಿಸುತ್ತಿದ್ದಾರೆ. ಇದೇ ವೇಳೆ ವಿರಾಟ್‌ ಕೊಹ್ಲಿ ಹಾಗೂ ಬಾಬರ್‌ ಆಜಂ ಭೇಟಿಯಾಗಿ, ಉಭಯ ಕುಶಲೋಪರಿ ನಡೆಸಿದ್ದಾರೆ. ಹಾಗೆಯೇ ಅಫಘಾನಿಸ್ತಾನದ ಆಟಗಾರ ರಶೀದ್‌ ಖಾನ್‌ ಅವರನ್ನೂ ವಿರಾಟ್‌ ಕೊಹ್ಲಿ ಭೇಟಿಯಾಗಿದ್ದಾರೆ. ಚಾಹಲ್‌ ಹಾಗೂ ಹಾರ್ದಿಕ್‌ ಪಾಂಡ್ಯ ಅವರೂ ರಶೀದ್‌ ಖಾನ್‌ ಜತೆ ಚರ್ಚಿಸುವ ವಿಡಿಯೊವನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದೆ.

ವಿರಾಟ್‌ ಕೊಹ್ಲಿ ಹಾಗೂ ಬಾಬರ್‌ ಆಜಂ ಆತ್ಮೀಯ ಸ್ನೇಹಿತರಾಗಿದ್ದಾರೆ. ಇತ್ತೀಚೆಗೆ ವಿರಾಟ್‌ ಕೊಹ್ಲಿ ಅವರ ಫಾರ್ಮ್‌ ಬಗ್ಗೆ ಟೀಕೆಗಳು ವ್ಯಕ್ತವಾದಾಗ ಬಾಬರ್‌ ಆಜಂ ಕೊಹ್ಲಿ ಪರ ನಿಂತಿದ್ದರು. ಅಷ್ಟರಮಟ್ಟಿಗೆ ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ.

ಇದನ್ನೂ ಓದಿ | Virat Kohli | ಪಾಕ್‌ ವಿರುದ್ಧ ವಿರಾಟ್‌ ಕೊಹ್ಲಿ ಕಮ್‌ಬ್ಯಾಕ್‌ ಮಾಡಲು ಆಗಲ್ಲ ಎಂದು ವಸೀಂ ಅಕ್ರಮ್ ಹೇಳಲು ಕಾರಣವೇನು?

Exit mobile version