Site icon Vistara News

Virat kohli : ಜಾಗತಿಕ ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲೂ ಕೊಹ್ಲಿಗೆ ಮುಂಚೂಣಿ ಸ್ಥಾನ

Virat kohli

ಬೆಂಗಳೂರು: ವಿರಾಟ್ ಕೊಹ್ಲಿಯ ಜನಪ್ರಿಯತೆಗೆ ಭಾರತದಲ್ಲಿ ಯಾರೂ ಸರಿಸಮಾನರಲ್ಲ. ಅವರಿಗೆ ಅಷ್ಟೊಂದು ಅಭಿಮಾನಿಗಳಿದ್ದಾರೆ. ಅವರು ಇತ್ತೀಚೆಗೆ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು (49) ಶತಕಗಳನ್ನು ಗಳಿಸಿದ ಸಚಿನ್​ ತಂಡೂಲ್ಕರ್ ಅವರ ಸಾಧನೆಯನ್ನು ಮೀರಿಸಿದ್ದಾರೆ. ಇದೀಗ ಅವರ ಸಾಧನೆಗಳ ಕಿರೀಟಕ್ಕೆ ಹೊಸ ಗರಿಯೊಂದು ಸೇರ್ಪಡೆಯಾಗಿದೆ. ಸ್ಟಾರ್ ಬ್ಯಾಟರ್​ ಕ್ರೀಡಾ ಇತಿಹಾಸದಲ್ಲಿ ಸಾರ್ವಕಾಲಿಕ ಅಗ್ರ 10 ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮುಹಮ್ಮದ್ ಅಲಿ, ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ, ಮೈಕ್ ಟೈಸನ್, ಉಸೇನ್ ಬೋಲ್ಟ್ ಮತ್ತು ಸೆರೆನಾ ವಿಲಿಯಮ್ಸ್ ಅವರಂತಹ ಕ್ರೀಡಾಪಟುಗಳು ಈ ಪಟ್ಟಿಯಲ್ಲಿದ್ದಾರೆ. ಕೊಹ್ಲಿ ಈ ಪಟ್ಟಿಯಲ್ಲಿರುವ ಅಥ್ಲೀಟ್​ಗಳ ಪೈಕಿ ಏಕೈಕ ಕ್ರಿಕೆಟರ್​.

ಪಬ್ಟಿ ಸ್ಪೋರ್ಟ್ಸ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಲಿಸ್ಟ್​​ನಲ್ಲಿ ಕ್ರಿಕೆಟ್ ಶ್ರೇಷ್ಠ 5 ನೇ ಸ್ಥಾನದಲ್ಲಿದ್ದಾರೆ. ಆಘಾತಕಾರಿ ವಿಷಯವೆಂದರೆ ವಿರಾಟ್ ಕೊಹ್ಲಿ ಆಯಾ ಕ್ರೀಡೆಗಳ ಗೋಟ್​ (greatest of all time) ಪಟ್ಟಿಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ. ಉಸೇನ್ ಬೋಲ್ಟ್ (ಸಾರ್ವಕಾಲಿಕ ಶ್ರೇಷ್ಠ ವೇಗದ ಓಟಗಾರ ) , ಮೈಕ್​ ಟೈಸನ್​​ ((ಸಾರ್ವಕಾಲಿಕ ಅತ್ಯುತ್ತಮ ಹೆವಿವೇಯ್ಟ್ ಬಾಕ್ಸರ್)) ಲೆಬ್ರಾನ್ ಜೇಮ್ಸ್ (ಅತ್ಯಂತ ನಿಪುಣ ಬ್ಯಾಸ್ಕೆಟ್ಬಾಲ್ ಆಟಗಾರ), ಸೆರೆನಾ ವಿಲಿಯಮ್ಸ್ (ಓಪನ್ ಯುಗದ ಅತ್ಯಂತ ಯಶಸ್ವಿ ಟೆನಿಸ್ ಆಟಗಾರ್ತಿ) ಮತ್ತು ಮೈಕೆಲ್ ಫೆಲ್ಪ್ಸ್ (ಸಾರ್ವಕಾಲಿಕ ಅತ್ಯಂತ ಯಶಸ್ವಿ ಒಲಿಂಪಿಕ್ ಈಜುಪಟು) ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ ಎಂಬುದೇ ಅಚ್ಚರಿ.

ವಿರಾಟ್ ಕೊಹ್ಲಿಯ ಸಾಧನೆಯ ಪಟ್ಟಿ

ಬೆಂಗಳೂರಿನಲ್ಲಿದ್ದಾರೆ ಕೊಹ್ಲಿ

ಭಾನುವಾರ (ನವೆಂಬರ್ 12) ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಭಾರತೀಯ ಕ್ರಿಕೆಟ್ ತಂಡ ನವೆಂಬರ್ 6 ರಂದು ಬೆಂಗಳೂರಿಗೆ ತಲುಪಿದೆ. ಅವರೆಲ್ಲರೂ ಟೀಮ್ ಇಂಡಿಯಾ ನೀಡಿರುವ ಹೋಟೆಲ್​ನಲ್ಲಿ ತಂಗಿದ್ದಾರೆ. ಈ ಹೋಟೆಲ್​ಗಳಲ್ಲಿ ತಂಡದ ಸದಸ್ಯರು ಮಾತ್ರ ಹೋಟೆಲ್​​ನಲ್ಲಿ ಉಳಿಯಬಹುದಾದರೂ ವಿರಾಟ್ ಕೊಹ್ಲಿ (Virat kohli) ಜತೆ ಪತ್ನಿ ಅನುಷ್ಕಾ ಶರ್ಮಾ ಇರುವುದನ್ನು ಕಂಡಿದ್ದಾರೆ. ಪಾಪರಾಜಿಗಳು ಅದರ ವಿಡಿಯೊವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಇದನ್ನೂ ಓದಿ: ನನ್ನ ಮಗನನ್ನು ಕ್ರಿಕೆಟ್ ಆಡಲು ಕಳುಹಿಸುವುದಿಲ್ಲ; ಮಾಜಿ ಕ್ರಿಕೆಟಿಗನ ಆಘಾತಕಾರಿ ಹೇಳಿಕೆ

ಬಾಲಿವುಡ್ ನಟಇ ಕಪ್ಪು ಒನ್ ಪೀಸ್ ಡ್ರೆಸ್​​ನಲ್ಲಿ ಕಾಣಿಸಿಕೊಂಡರೆ, ಕೊಹ್ಲಿ ಕೂಡ ಕಪ್ಪು ಶರ್ಟ್ ಧರಿಸಿಕೊಂಡು ಹೋಟೆಲ್​ನಿಂದ ಹೊರಗೆ ಬಂದಿದ್ದರು. ಸ್ಟಾರ್​ ದಂಪತಿಗಳು ಎತ್ತ ಕಡಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಬಾಡಿಗಾರ್ಡ್​ಗಳ ಜತೆಗೆ ನಡೆಯುತ್ತಿರುವುದು ಕಂಡು ಬಂದಿದೆ.

ಅನುಷ್ಕಾ ಮತ್ತು ಕೊಹ್ಲಿ ಡಿನ್ನರ್ ಡೇಟ್ ಅಥವಾ ಕ್ಯಾಶುಯಲ್ ವಿಹಾರಕ್ಕಾಗಿ ಹೊರಗೆ ಹೋಗುತ್ತಿರಬಹುದು ಎಂದು ಹೇಳಲಾಗಿದೆ. ವೀಡಿಯೊವನ್ನು ಕೊಹ್ಲಿಯ ಅಭಿಮಾನಿಯೊಬ್ಬರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾ ಗುರುವಾರ ಮತ್ತು ನಾಳೆ ತರಬೇತಿ ಅವಧಿಯನ್ನು ಹೊಂದಿರುತ್ತದೆ. ಕೊಹ್ಲಿ ತರಬೇತಿಯಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Exit mobile version