Site icon Vistara News

Virat Kohli: ವಿರಾಟ್​ ಕೊಹ್ಲಿ ಗೈರಿನ ಹಿಂದಿರುವ ನೈಜ ಕಾರಣ ತಿಳಿಸಿದ ನೆಟ್ಟಿಗ!

Virat Kohli's absence!

ಮುಂಬಯಿ: ವೈಯಕ್ತಿಕ ಕಾರಣ ನೀಡಿ ವಿರಾಟ್​ ಕೊಹ್ಲಿ(Virat Kohli) ಅವರು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಿಂದ(india vs england test series) ಹೊರಗುಳಿದಿದ್ದಾರೆ. ಆದರೆ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಆದರೆ ಕೆಲ ನೆಟ್ಟಿಗರು ಅವರು ಸರಣಿಯಿಂದ ಹಿಂದೆ ಸರಿಯಲು ಪತ್ನಿ ಅನುಷ್ಕಾ ಶರ್ಮ(Anushka Sharma) ಪ್ರೆಗ್ನೆನ್ಸಿಯ ಸಮಸ್ಯೆಯೇ ಕಾರಣ ಎಂದು ಹೇಳಲಾರಂಭಿಸಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಟಾಕ್​ಗಳು ಪದೇ ಪದೇ ಕೇಳಿಬಂದಿತ್ತು.  ಸಂದರ್ಶವೊಂದರಲ್ಲಿ ಮಾತನಾಡಿದ್ದ ​ಡಿ ವಿಲಿಯರ್ಸ್​, ‘ನನಗೆ ತಿಳಿದಿರುವಂತೆ ವಿರಾಟ್ ಕೊಹ್ಲಿ ಕುಟುಂಬದ ಜತೆ ಸಮಯ ಕಳೆಯಲು ಬಯಸಿದ್ದಾರೆ. ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕುಟುಂಬಕ್ಕೆ ಸಮಯ ನೀಡುವುದು ಕೊಹ್ಲಿಗೆ ಬಿಟ್ಟ ವಿಚಾರ ಎಂದು ಹೇಳಿದ್ದರು. ಇದಾದ ಬಳಿಕ ವಿಲಿಯರ್ಸ್ 2 ದಿನಗಳ ಅಂತರದಲ್ಲಿ ತಮ್ಮ ಹೇಳಿಕೆ ಸುಳ್ಳೆಂದು ಹೇಳಿದ್ದರು. ಅಲ್ಲದೆ 2 ಬಾರಿ ವಿರಾಟ್​ ಕೊಹ್ಲಿ ಅಭಿಮಾನಿಗಳು ಮತ್ತು ಕೊಹ್ಲಿ ಜತೆ ಕ್ಷಮೆ ಕೋರಿದ್ದರು.

ಅನುಷ್ಕಾಗೆ ಪ್ರೆಗ್ನೆನ್ಸಿಯಲ್ಲಿ ಸಮಸ್ಯೆ?


ಅಭಿಷೇಕ್ ತ್ರಿಪಾಠಿ ಎಂಬವರು ಅನುಷ್ಕಾಗೆ ಪ್ರೆಗ್ನೆನ್ಸಿಯಲ್ಲಿ ಸಮಸ್ಯೆಯಿದೆ. ಇದೇ ಕಾರಣಕ್ಕೆ ಕೊಹ್ಲಿ ಕುಟುಂಬದ ಜತೆಗಿರಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಅನುಷ್ಕಾ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಸುದ್ದಿ ಎಷ್ಟರಮಟ್ಟಿಗೆ ಅಧಿಕೃತ ಎಂದು ತಿಳಿದುಬಂದಿಲ್ಲ. ವಿಲಿಯರ್ಸ್ ಅವರು ಕೊಹ್ಲಿ ಮತ್ತು ಅನುಷ್ಕಾ 2ನೇ ಮಗುವಿನ ನಿರೀಕ್ಷೆ ಸುದ್ಧಿ ಸುಳ್ಳು ಎಂದು ಕ್ಷಮೆ ಕೋರಿದ್ದನ್ನು ನೋಡುವಾಗ ಹಲವು ಅನುಮಾನ ಮೂಡಿದೆ.

ಕೆಲ ದಿನಗಳ ಹಿಂದೆ ಪಾಕಿಸ್ತಾನದ ಕೆಲ ಮಾಧ್ಯಮಗಳು ವಿರಾಟ್​ ಕೊಹ್ಲಿ ತಾಯಿ ಅಸೌಖ್ಯದಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿತ್ತು. ಆದರೆ ಕೊಹ್ಲಿಯ ಸಹೋದರ ಈ ವದಂತಿಯನ್ನು ತಳ್ಳಿ ಹಾಕಿದ್ದರು. ತಾಯಿ ಆರೋಗ್ಯವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದರು.

ಕೇವಲ ವೈಯಕ್ತಿಕ ಕಾರಣ ಎಂದು ಮಾತ್ರ ಕೊಹ್ಲಿ ಹೇಳಿದ್ದರೂ ಇದರ ಹಿಂದೆ ಯಾವುದೋ ಬಲವಾದ ಕಾರಣವಿದೆ. ಇದನ್ನು ಕೊಹ್ಲಿ ಹೈಡ್​ ಮಾಡಿದ್ದಾರೆ. . ಇದೇ ಮೊದಲ ಬಾರಿಗೆ ತಮ್ಮ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ಸಂಪೂರ್ಣವಾಗಿ ಅಲಭ್ಯರಾಗುತ್ತಿರುವುದು.

ವಿರಾಟ್ ಕೊಹ್ಲಿ ಗೈರಿನ ವಿಚಾರದಲ್ಲಿ ಮಾಧ್ಯಮದವರು ಮತ್ತು ಅಭಿಮಾನಿಗಳು ಅವರ ಖಾಸಗಿತನಕ್ಕೆ ಧಕ್ಕೆ ನೀಡಬಾರದೆಂದು ಬಿಸಿಸಿಐ ಮನವಿ ಮಾಡಿಕೊಂಡಿತ್ತು. ಇಂಗ್ಲೆಂಡ್​ ತಂಡದ ಮಾಜಿ ವೇಗಿ ಸ್ಟುವರ್ಟ್​ ಬ್ರಾಡ್ ಕೂಡ ಕೊಹ್ಲಿಯ ನಿರ್ಧಾರವನ್ನು ಗೌರವಿಸಬೇಕು ಎಂದು ಹೇಳಿದ್ದರು.

ಭಾರತ ಟೆಸ್ಟ್​ ತಂಡ


ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ಕೆಎಸ್ ಭರತ್ (ವಿಕೆಟ್​ ಕೀಪರ್​), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್​ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

Exit mobile version