Site icon Vistara News

Virat Kohli : ಕೊಹ್ಲಿಗೆ ಎಲ್ಲೇ ಹೋದರೂ ಅಭಿಮಾನಿಗಳು; ವಿಂಡೀಸ್​ನಲ್ಲೂ ಮುತ್ತಿಗೆ ಹಾಕಿದ ಫ್ಯಾನ್ಸ್​

Virat Kohli

ಬೆಂಗಳೂರು: ಅದು ಭಾರತವಾಗಿರಲಿ, ಆಸ್ಟ್ರೇಲಿಯಾವೇ (Virat Kohli) ಇರಲಿ, ದಕ್ಷಿಣ ಆಫ್ರಿಕಾ ಅಥವಾ ವೆಸ್ಟ್ ಇಂಡೀಸ್ ಆಗಿರಲಿ. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿಗೆ ಎಲ್ಲರೂ ಒಂದೇ. ಅದುವೇ ಅವರ ಜನಪ್ರಿಯತೆ. ಅಭಿಮಾನಿಗಳಿಂದ ಹಿಡಿದು ಆಟಗಾರರವರೆಗೆ ಎಲ್ಲರೂ ಈ ಲೆಜೆಂಡರಿ ಬ್ಯಾಟ್ಸ್​ಮನ್​ ಜತೆ ಸೆಲ್ಫಿ ಅಥವಾ ಆಟೋಗ್ರಾಫ್ ಪಡೆಯಲು ಬಯಸುತ್ತಾರೆ. ಅಂತೆಯೇ ವೆಸ್ಟ್​ ಇಂಡೀಸ್​​ ಪ್ರವಾಸದಲ್ಲಿರುವ ಟೀಮ್​ ಇಂಡಿಯಾದ (Team India) ಜತೆಗಿರುವ ವಿರಾಟ್​ ಕೊಹ್ಲಿಗೆ ಡೊಮಿನಿಕಾದಲ್ಲಿ ಸ್ಥಳೀಯ ಆಟಗಾರರು ಮತ್ತು ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಆಟಗಾರರು ಕೊಹ್ಲಿಯನ್ನು ಭೇಟಿಯಾಗಿ ಅವರೊಂದಿಗೆ ಸಂವಹನ ನಡೆಸಿದ ವೀಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ.

ಆಟೋಗ್ರಾಫ್​​ಗಳನ್ನು ಪಡೆದ ನಂತರ ಸ್ಥಳೀಯ ಆಟಗಾರರೊಬ್ಬರು ಸಾರ್ವಕಾಲಿಕ ನನ್ನ ಅತ್ಯಂತ ನೆಚ್ಚಿನ ಬ್ಯಾಟರ್ ವಿರಾಟ್​ ಕೊಹ್ಲಿ ಎಂದ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೊಹ್ಲಿ ಅಭಿಮಾನಿಗಳು “ವಿಶ್ವ ಕ್ರಿಕೆಟ್​​ನ ರಾಯಭಾರಿ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ಅವರನ್ನು ಗೋಟ್​ (ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​) ಎಂದು ಬಣ್ಣಿಸಿದ್ದಾರೆ. ಇನ್ನೂ ಹಲವು ಬಳಕೆದಾರರು ಭಾರತದ ಮಾಜಿ ನಾಯಕನ ಸರಳತೆಯನ್ನು ಶ್ಲಾಘಿಸಿದ್ದಾರೆ.

ಎಲ್ಲರ ಕಣ್ಣು ಕೊಹ್ಲಿ ಮೇಲೆ

ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್ ಮತ್ತು ಅಭ್ಯಾಸ ಪಂದ್ಯದಲ್ಲಿ ವಿಫಲವಾದ ನಂತರ ಎಲ್ಲರ ಕಣ್ಣುಗಳು ವಿರಾಟ್ ಕೊಹ್ಲಿಯ ಮೇಲೆ ನೆಟ್ಟಿವೆ. ಬಲಗೈ ಬ್ಯಾಟರ್​​ ಸೀಮಿತ ಓವರ್​​ಗಳ ಸ್ವರೂಪದಲ್ಲಿ ಉತ್ತಮ ಫಾರ್ಮ್​ನಲ್ಲಿ ಇದ್ದರೂ ಇನ್ನೂ ಟೆಸ್ಟ್ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೋಡುತ್ತಿಲ್ಲ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲೂ ಕೊಹ್ಲಿ ಅಹಮದಾಬಾದ್​ನಲ್ಲಿ ಕೇವಲ ಒಂದು ಟೆಸ್ಟ್ ಶತಕವನ್ನು ಮಾತ್ರ ಗಳಿಸಿದ್ದರು.

ಟೆಸ್ಟ್ ಕ್ರಿಕೆಟ್​​ನಲ್ಲಿ 35ರ ಹರೆಯದ ವಿರಾಟ್​ ಕೊಹ್ಲಿ ಸರಾಸರಿ 50ಕ್ಕಿಂತ ಕಡಿಮೆಯಾಗಿದೆ. ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರಿ ಸ್ಕೋರ್ ಮಾಡಲು ಉತ್ಸುಕರಾಗಿದ್ದಾರೆ. 2020ರಲ್ಲಿ ಲೆಜೆಂಡರಿ ಬ್ಯಾಟರ್​ ಕೇವಲ 19.33 ಸರಾಸರಿಯನ್ನು ಹೊಂದಿದ್ದಾರೆ ಹಾಗೂ ಟೆಸ್ಟ್ ಶತಕ ಗಳಿಸಲು ವಿಫಲರಾಗಿದ್ದಾರೆ. 2021ರಲ್ಲಿ ಕೊಹ್ಲಿ 11 ಟೆಸ್ಟ್ ಪಂದ್ಯಗಳಲ್ಲಿ 536 ರನ್ ಗಳಿಸಿದರೆ, 2022 ರಲ್ಲಿ ಆರು ಟೆಸ್ಟ್ ಪಂದ್ಯಗಳಲ್ಲಿ 265 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Virat Kohli: ವಿರಾಟ್​ ಕೊಹ್ಲಿಗೆ ಜೂನ್​ 20 ಮರೆಯಲಾಗದ ದಿನ; ಯಾವ ಕಾರಣಕ್ಕೆ?

ವಿದೇಶಿ ಪರಿಸ್ಥಿತಿಗಳಲ್ಲಿ ಭಾರತವು ಹೆಣಗಾಡಲು ಕೊಹ್ಲಿಯ ಫಾರ್ಮ್ ಕುಸಿತವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆರ್​​ಸಿಬಿ ಬ್ಯಾಟರ್​ ಹೊರಟರೆ ಭಾರತವನ್ನು ತಡೆಯುವುದು ಕಷ್ಟ. ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ 14 ಟೆಸ್ಟ್ ಪಂದ್ಯಗಳಲ್ಲಿ 822 ರನ್ ಗಳಿಸಿದ್ದಾರೆ. ಕಳೆದ ಬಾರಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮುಖಾಮುಖಿಯಾದಾಗ ಬಲಗೈ ಬ್ಯಾಟರ್​ ದ್ವಿಶತಕ ಬಾರಿಸಿದ್ದರು. ಕೊಹ್ಲಿ ಈ ಬಾರಿಯೂ ಆ ಫಾರ್ಮ್ ಅನ್ನು ಹೊಡೆಯುವ ಗುರಿಯನ್ನು ಹೊಂದಿದ್ದಾರೆ.

Exit mobile version