Site icon Vistara News

Virat Kohli: ಟಿ20 ವಿಶ್ವಕಪ್​ಗೆ ವಿರಾಟ್​ ಕೊಹ್ಲಿ ಅನುಮಾನ; ಆಯ್ಕೆ ಸಮಿತಿ ಯೋಜನೆ ಏನು?

virat kohli

ಮುಂಬಯಿ: ವೆಸ್ಟ್​ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್(ICC T20 World Cup 2024)​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ(Virat Kohli) ಅವಕಾಶ ಸಿಗುವುದು ಬಹುತೇಖ ಅನುಮಾನ ಎಂದು ವರದಿಯಾಗಿದೆ. ಬಿಸಿಸಿಐ ಜಯ್​ ಶಾ(Jay Shah) ಕೂಡ ಕೊಹ್ಲಿ ಆಯ್ಕೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಆಯ್ಕೆ ಸಮಿತಿಯ ನಿರ್ಧಾರವೇ ಫೈನಲ್​ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಬಳಿಕ ವಿರಾಟ್​ ಕೊಹ್ಲಿ ಭಾರತ ಪರ ಟಿ 20 ಆಡಿದ್ದು ಇದೇ ವರ್ಷಾರಂಭದಲ್ಲಿ ತವರಿನಲ್ಲಿ ನಡೆದ ಅಫಘಾನಿಸ್ತಾನ ವಿರುದ್ಧದ ಸರಣಿಯಲ್ಲಿ. ವಿಶ್ವಕಪ್​ಗೆ ಆಯ್ಕೆ ಮಾಡುವ ಉದ್ದೇಶದಿಂದಲೇ ಕೊಹ್ಲಿ ಮತ್ತು ರೋಹಿತ್​ಗೆ ಈ ಸರಣಿಯಲ್ಲಿ ಆಯ್ಕೆ ಸಮಿತಿ ಅವಕಾಶ ನೀಡಿತ್ತು ಎನ್ನಲಾಗಿದೆ. ರೋಹಿತ್ ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾದರೂ ಬಳಿಕ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. ಆದರೆ ಕೊಹ್ಲಿ ವಿಫಲರಾಗಿದ್ದರು.

ಅಫಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಕೇವಲ 29 ರನ್ ಗಳಿಸಿದ್ದರು. ಹೀಗಾಗಿ ಅವರನ್ನು ಟಿ20 ವಿಶ್ವಕಪ್ ಗೆ ಪರಿಗಣಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೊಹ್ಲಿ ಕೂಡ ಮೊದಲಿನಂತೆ ಟಿ20ಯಲ್ಲಿ ಅಬ್ಬರ ಬ್ಯಾಟಿಂಗ್​ ನಡೆಸುತ್ತಿಲ್ಲ. ಟಿ20 ವಿಶ್ವಕಪ್ ನಡೆಯುವ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಎನ್ನುವ ಕಾರಣಕ್ಕೆ ಆಯ್ಕೆ ಸಮಿಯಿ ಅವರನ್ನು ಹೊರಗಿಡುವ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ Yashasvi Jaiswal: ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್​

ಆಯ್ಕೆ ಸಮಿತಿ ಮತ್ತು ಬಿಸಿಸಿಐ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ಸೋಲಿನ ಬಳಿಕವೇ ಪ್ರಮುಖ ನಿರ್ಧಾರ ಕೈಗೊಂಡಿತ್ತು. ಹಿರಿಯ ಆಟಗಾರರನ್ನು ತಂಡದಿಂದ ಬಿಟ್ಟು ಯುವ ಆಟಗಾರರನ್ನು ಮಾತ್ರ ಟಿ20 ಸರಣಿಗೆ ಪರಿಗಣಿಸುವ ಯೋಜನೆ ಜಾರಿಗೆ ತಂದಿತ್ತು. ಇದೇ ಕಾರಣಕ್ಕೆ ಅಂದಿನ ಟಿ20 ವಿಶ್ವಕಪ್​ ಬಳಿಕ ಭಾರತ ಆಡಿದ ಹಲವು ಟಿ20 ಸರಣಿಗೆ ಹಿರಿಯ ಆಟಗಾರರನ್ನು ಆಯ್ಕೆ ಮಾಡದ್ದು. ಆದರೆ, ಈ ಅಫಘಾನಿಸ್ತಾನ ಸರಣಿಯಲ್ಲಿ ಅವಕಾಶ ನೀಡಿತ್ತು. ಅದು ಕೂಡ ಕೊಹ್ಲಿ ಮತ್ತು ರೋಹಿತ್​ಗೆ ಮಾತ್ರ. ಉಳಿದ ಯಾವುದೇ ಆಟಗಾರರಿಗೆ ಅವಕಾಶ ನೀಡಿರಲಿಲ್ಲ. ಒಟ್ಟಾರೆ ಕೊಹ್ಲಿ ಐಪಿಎಲ್​ನಲ್ಲಿ ತೋರುವ ಪ್ರದರ್ಶನದ ಮೇಲೆ ಅವರ ಟಿ20 ವಿಶ್ವಕಪ್​ ಭವಿಷ್ಯ ಅಡಗಿದೆ ಎಂದರೂ ತಪ್ಪಾಗಲಾರದು.

Exit mobile version