ನವ ದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat KOhli) ಮತ್ತೊಂದು ಗಮನಾರ್ಹ ಮೈಲಿಗಲ್ಲನ್ನು ಸಾಧಿಸುವ ಹೊಸ್ತಿಲಲ್ಲಿದ್ದಾರೆ. ಅವರು ಶೀಘ್ರದಲ್ಲೇ 500 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಆಟಗಾರರ ವಿಶೇಷ ಗುಂಪಿಗೆ ಸೇರಲಿದ್ದಾರೆ. ಈ ಸಾಧನೆ ಮಾಡಿದ ಭಾರತದ 10ನೇ ಆಟಗಾರ ಹಾಗೂ 4ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಸಚಿನ್ ತೆಂಡೂಲ್ಕರ್ 664 ಪಂದ್ಯಗಳನ್ನು ಆಡಿದ್ದು ಈ ಪಟ್ಟಿಯ ಅಗ್ರಸ್ಥಾನಿ ಎನಿಸಿಕೊಂಡಿದ್ದಾರೆ. ಮಹೇಲಾ ಜಯವರ್ಧನೆ 652 ಪಂದ್ಯಗಳನ್ನು ಆಡಿ ನಂತರದ ಸ್ಥಾನದಲ್ಲಿದ್ದಾರೆ. ಧೋನಿ (538 ಪಂದ್ಯಗಳು) ಮತ್ತು ರಾಹುಲ್ ದ್ರಾವಿಡ್ (509 ಪಂದ್ಯಗಳು) ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮತ್ತಿಬ್ಬರು ಭಾರತೀಯರು.
ಕೊಹ್ಲಿ ಅವರ 500ನೇ ಪಂದ್ಯದ ಸಾಧನೆಯು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಆಡಲು ಇಳಿದಾಗ ದಾಖಲೆಯಾಗಲಿದೆ. ಜುಲೈ 20 ರಂದು ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಈ ಹಣಾಹಣಿ ಆರಂಭವಾಗಲಿದೆ. ಹೀಗಾಗಿ ಈ ಪಂದ್ಯವು ಕೊಹ್ಲಿಗೆ ಅಪಾರ ಮಹತ್ವವನ್ನು ನೀಡಲಿದೆ. ಏಕೆಂದರೆ ಈ ಪಂದ್ಯದಲ್ಲಿ ಅವರ ಪ್ರದರ್ಶನವನ್ನು ನಿಜವಾಗಿಯೂ ಸ್ಮರಣೀಯವಾಗಬಹುದು.
ಸರಣಿ ಕ್ಲೀನ್ ಸ್ವೀಪ್ಗೆ ಯೋಜನೆ
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 141 ರನ್ಗಳ ಭರ್ಜರಿ ಜಯ ದಾಖಲಿಸಿದೆ. ರವಿಚಂದ್ರನ್ ಅಶ್ವಿನ್ 12 ವಿಕೆಟ್ ಕಬಳಿಸಿದರೆ, ಯುವ ಪ್ರತಿಭೆ ಯಶಸ್ವಿ ಜೈಸ್ವಾಲ್ 171 ರನ್ ಗಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಭರ್ಜರಿಯಾಗಿ ಪದಾರ್ಪಣೆ ಮಾಡಿದ್ದಾರೆ.
ಆರಂಭಿಕ ಟೆಸ್ಟ್ನ ಈ ಗೆಲುವು ಭಾರತಕ್ಕೆ ನಿರ್ಣಾಯಕವಾಗಿತ್ತು ಎಂದು ಸಾಬೀತಾಗಿದೆ. ಏಕೆಂದರೆ ಇದು ಹೊಸ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಋತುವಿನಲ್ಲಿ ಮೌಲ್ಯಯುತ ಅಂಕಗಳನ್ನು ನೀಡಿದೆ. ಸ್ಪಿನ್ ಸ್ನೇಹಿ ಪಿಚ್ನಲ್ಲಿ ಭಾರತದ ಬೌಲಿಂಗ್ ದಾಳಿಯನ್ನು ಮುನ್ನಡೆಸಿದ ಅಶ್ವಿನ್ ಮತ್ತು ರವೀಂದ್ರ ಜಡೇಜಾ ನಾಯಕ ರೋಹಿತ್ ಶರ್ಮಾ ಅವರ ನಂಬಿಕೆಯನ್ನು ಉಳಿಸಿಕೊಂಡರ . ಇಬ್ಬರೂ ಆಫ್-ಸ್ಪಿನ್ನರ್ಗಳು ನಿರೀಕ್ಷೆಯಂತೆ ಬೌಲಿಂಗ್ ಮಾಡಿದರು ಹಾಗೂ ವೆಸ್ಟ್ ಇಂಡೀಸ್ ತಂಡದ ಒಟ್ಟು 20 ವಿಕೆಟ್ಗಳಲ್ಲಿ 17 ವಿಕೆಟ್ಗಳನ್ನು ಉರುಳಿಸಿದ್ದರು.
ಜೈಸ್ವಾಲ್ ಭರ್ಜರಿ ಆಟ
ಮೊದಲ ಇನ್ನಿಂಗ್ಸ್ನಲ್ಲಿ 21 ವರ್ಷದ ಜೈಸ್ವಾಲ್ ನಾಯಕ ಶರ್ಮಾ ಅವರೊಂದಿಗೆ 229 ರನ್ಗಳ ಅಸಾಧಾರಣ ಜೊತೆಯಾಟ ನೀಡಿದ್ದರು. ಇಬ್ಬರೂ ಬ್ಯಾಟರ್ಗಳು ಶತಕಗಳನ್ನು ಗಳಿಸಿದ್ದಾರೆ. ಜೈಸ್ವಾಲ್ ಅವರ 171 ರನ್ಗಳ ಗಮನಾರ್ಹ ಇನ್ನಿಂಗ್ಸ್ ಜತೆಗೆ ಅನುಭವಿ ವಿರಾಟ್ ಕೊಹ್ಲಿಯ 76 ರನ್ಗಳು ಗಮನ ಸೆಳೆದವು.
ಇದನ್ನೂ ಓದಿ : Virat kohli : ವಿರಾಟ್ ಕೊಹ್ಲಿಯನ್ನು ಮೂರ್ಖ ಎಂದು ಕರೆದ ನವಿನ್ ಉಲ್ ಹಕ್!
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಐದು ವಿಕೆಟ್ ಪಡೆದ ಟಾಪ್ 5 ಬೌಲರ್ಗಳ ಪಟ್ಟಿಯಲ್ಲಿ ಅಶ್ವಿನ್ ತಮ್ಮ 34ನೇ ಐದು ವಿಕೆಟ್ ಸಾಧನೆ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದ್ದಾರೆ. ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ಎದುರು ನೋಡುತ್ತಿರುವ ಭಾರತ ತನ್ನ ಅದೇ ಉತ್ಸಾಹವನ್ನು ಉಳಿಸಿಕೊಳ್ಳುವುದಕ್ಕೆ ಮುಂದಾಗಿದೆ. ಆದರೆ, ಆತಿಥೇಯ ವಿಂಡೀಸ್ ತಂಡ ಸುಧಾರಿತ ಪ್ರದರ್ಶನವನ್ನು ನೀಡಲು ಮತ್ತು ಸರಣಿಯನ್ನು ಸಮಬಲಗೊಳಿಸಲು ಹೊಂಚು ಹಾಕಿದೆ.