ದುಬೈ: ಭಾರತ ಹಾಗೂ ಪಾಕಿಸ್ತಾನ ತಂಡಗಳ (IND vs PAK ) ನಡುವೆ ಭಾನುವಾರ ಏಷ್ಯಾ ಕಪ್ ಗುಂಪು ಹಂತದ ಹಣಾಹಣಿ ನಡೆಯಲಿದೆ. ಇತ್ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕ್ಷಣಗಣನೆ ಮಾಡುತ್ತಿದ್ದಾರೆ. ಅಂತೆಯೇ ಈ ಪಂದ್ಯವನ್ನು ವಿಶ್ವದ ಇಬ್ಬರು ಸ್ಟಾರ್ ಬ್ಯಾಟ್ಸ್‌ಮನ್‌ಗಳ ನಡುವಿನ ಹಣಾಹಣಿ ಎಂದೇ ಬಣ್ಣಿಸಲಾಗುತ್ತಿದೆ. ಅವರೇ ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಮ್. ಹಾಗಾದರೆ ಟಿ೨೦ ಮಾದರಿಯಲ್ಲಿ ಸದ್ಯ ಯಾರು ಬೆಸ್ಟ್ ಎಂದು ನೋಡೋಣ.
ಕಳೆದ ಎರಡು ವರ್ಷಗಳ ಪ್ರದರ್ಶನವನ್ನು ವಿಶ್ಲೇಷಣೆ ಮಾಡಿದರೆ ಪಾಕಿಸ್ತಾನ ತಂಡದ ಬಾಬರ್ ಅಜಮ್ ಅವರು ವಿರಾಟ್ ಕೊಹ್ಲಿಗಿಂತ ಪ್ರದರ್ಶನದಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ. ಅಜಮ್ ಟಿ೨೦ Rank ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಪ್ರದರ್ಶನ ವೈಫಲ್ಯ ಎದುರಿಸುತ್ತಿದ್ದಾರೆ. ಅವರೀಗ rank ಪಟ್ಟಿಯಲ್ಲಿ ಅವರೀಗ ೩೩ನೇ ಸ್ಥಾನ ಪಡೆದುಕೊಂಡಿದ್ದಾರೆ. ಆದಾಗ್ಯೂ ವಿರಾಟ್ ಕೊಹ್ಲಿಗೆ ಶನಿವಾರದ ಪಂದ್ಯ ೧೦೦ನೇ ಪಂದ್ಯ. ಈಗಲೂ ಅವರು ೫೦ಕ್ಕಿಂತ ಹೆಚ್ಚು ರನ್ ಸರಾಸರಿಯನ್ನು ಹೊಂದಿದ್ದಾರೆ.
ಟಿ೨೦ ರನ್‌ಗಳು
ವಿರಾಟ್ ಕೊಹ್ಲಿ : 3308
ಬಾಬರ್ ಅಜಮ್: 2686
ವಿರಾಟ್ ಕೊಹ್ಲಿ ಬಾಬರ್ ಅಜಮ್‌ಗಿಂತ ೨೫ ಪಂದ್ಯ ಹೆಚ್ಚು ಆಡಿದ್ದಾರೆ. ಹೀಗಾಗಿ 622 ರನ್ ಕಡಿಮೆ ಬಾರಿಸಿದ್ದಾರೆ. ಅದರೆ, ಬಾಬರ್ ಅವರು ಇತ್ತೀಚಿನ ಪ್ರದರ್ಶನ ಗಮನಿಸಿದರೆ ಅವರು ಕೊಹ್ಲಿಯನ್ನು ಮೀರಿಸಲು ಹೆಚ್ಚು ದಿನ ತೆಗೆದುಕೊಳ್ಳಲಾರರು.
ಕಳೆದ ಎರಡು ವರ್ಷಗಳಲ್ಲಿ ಟಿ೨೦ ರನ್‌ಗಳು
ಬಾಬರ್ ಅಜಮ್
2022 – 482
2021 – 474
ವಿರಾಟ್ ಕೊಹ್ಲಿ
2022 – 81
2021 – 299
ಬಾಬರ್ ಅಜಮ್ ಅವರು ಕಳೆದ ಎರಡು ವರ್ಷದಲ್ಲಿ ವಿರಾಟ್ ಕೊಹ್ಲಿಗಿಂತ ೫೭೬ ರನ್ ಹೆಚ್ಚು ಬಾರಿಸಿದ್ದಾರೆ. ಆದರೆ, ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಕಳೆದ ಎರಡು ವರ್ಷಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಸಾಕಷ್ಟು ಸರಣಿಗಳಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ.
ಟಿ೨೦ ಸರಾಸರಿ ಎಷ್ಟು?
ವಿರಾಟ್ ಕೊಹ್ಲಿ- 50.12
ಬಾಬರ್ ಅಜಮ್ – 45.53
ಕಳೆದ ಎರಡು ವರ್ಷದ ಪ್ರದರ್ಶನ ಗಮನಿಸಿದರೆ ಬಾಬರ್ ಅಜಮ್ ಹೆಚ್ಚುಗಾರಿಕೆಯನ್ನು ಹೊಂದಿದ್ದಾರೆ. ಆದರೆ, ೯೯ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಹೊಂದಿರುವ ಸರಾಸರಿ ರನ್ ಅವರ ಸಾಧನೆಯನ್ನು ಎತ್ತಿ ತೋರಿಸುತ್ತದೆ.
ಸ್ಟ್ರೈಕ್ ರೇಟ್
ವಿರಾಟ್ ಕೊಹ್ಲಿ- 137.66
ಬಾಬರ್ ಅಜಮ್- 129.45
ಮೊದಲು ಬ್ಯಾಟಿಂಗ್ ಆಗಲಿ ಚೇಸಿಂಗ್ ಆಗಲಿ ವಿರಾಟ್ ಕೊಹ್ಲಿ ಟಿ೨೦ ಮಾದರಿಯಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಬಾಬರ್ ಅಜಮ್ ಡೆತ್ ಓವರ್‌ಗಳನ್ನು ಸದ್ಬಳಕೆ ಮಾಡುವಲ್ಲಿ ಸಾಕಷ್ಟು ಬಾರಿ ವೈಫಲ್ಯ ಕಂಡಿದ್ದಾರೆ. ಬಾಬರ್ ಸಾಕಷ್ಟು ಬಾರಿ ಹೆಚ್ಚು ರನ್ ಗಳಿಸಿ ಔಟಾಗದೇ ಉಳಿಯುತ್ತಾರೆ. ಆದರೆ ತಂಡ ಸೋಲುತ್ತದೆ. ಕೊಹ್ಲಿ ತಾವು ರನ್ ಗಳಿಸುವ ಜತೆಗೆ ತಂಡವನ್ನೂ ಗೆಲ್ಲಿಸಿದ ಪ್ರಸಂಗಗಳೇ ಹೆಚ್ಚು.
ಟಿ೨೦ ಗರಿಷ್ಠ ರನ್‌ಗಳು
ವಿರಾಟ್ ಕೊಹ್ಲಿ- ೯೪
ಬಾಬರ್ ಅಜಮ್- ೧೨೨
ಶತಕ ಹಾಗೂ ಅರ್ಧ ಶತಕಗಳು
ವಿರಾಟ್ ಕೊಹ್ಲಿ: ೦, ೩೦
ಬಾಬರ್ ಅಜಮ್- ೧, ೨೬
ಇದನ್ನೂ ಓದಿ | Asia Cup- 2022 | ಮ್ಯಾಕ್ಸ್‌ವೆಲ್ ರೀತಿ ರಿವರ್ಸ್ ಸ್ವೀಪ್ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ ವಿರಾಟ್ ಕೊಹ್ಲಿ