ಬೆಂಗಳೂರು: ವಿಶ್ವಕಪ್(icc world cup 2023) ಟೂರ್ನಿಯಲ್ಲಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯೊಂದನ್ನು ಮುರಿಯಲು ಕಿಂಗ್ ವಿರಾಟ್ ಕೊಹ್ಲಿ(Virat Kohli) ಮತ್ತು ಕಿವೀಸ್ನ ಯುವ ಆಟಗಾರ ರಚಿನ್ ರವೀಂದ್ರ(Rachin Ravindra) ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಉಭಯ ಆಟಗಾರರಲ್ಲಿ ಯಾರು ಈ ದಾಖಲೆಯನ್ನು ಮುರಿಯಲಿದ್ದಾರೆ? ಇವರಿಗೆ ಇದು ಸಾಧ್ಯವಾದಿತೇ? ಹೀಗೊಂದು ಚರ್ಚೆ ಕ್ರಿಕೆಟ್ ವಲಯದಲ್ಲಿ ಕೇಳಿಬಂದಿದೆ.
ಹೌದು, ರಚಿನ್ ರವೀಂದ್ರ ಮತ್ತು ವಿರಾಟ್ ಕೊಹ್ಲಿ ಅವರು ಚಿತ್ತ ನೆಟ್ಟಿರುವ ಸಚಿನ್ ಅವರ ದಾಖಲೆ ಯಾವುದೆಂದರೆ, ವಿಶ್ವಕಪ್ನ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ. ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಸಚಿನ್ ಅವರು ವಿಶ್ವಕಪ್ ಆವೃತ್ತಿಯೊಂದರಲ್ಲಿ 11 ಪಂದ್ಯಗಳನ್ನು ಆಡಿ 673 ರನ್ ಬಾರಿಸಿದ್ದರು. ಸದ್ಯ ಇದು ಈವರೆಗೆ ವಿಶ್ವಕಪ್ನ ದಾಖಲೆಯಾಗಿಯೇ ಉಳಿದುಕೊಂಡಿದೆ. ಈ ದಾಖಲೆಯನ್ನು ಮುರಿಯುವ ಅವಕಾಶ ರಚಿನ್ ಮತ್ತು ಕೊಹ್ಲಿಗೆ ಇದೆ.
ಅಗ್ರಸ್ಥಾನದಲ್ಲಿ ರಚಿನ್
ಪ್ರಸಕ್ತ ಸಾಗುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಚಿನ್ ರವೀಂದ್ರ ಅಗ್ರಸ್ಥಾನದಲ್ಲಿದ್ದಾರೆ. ಅವರು 565*ರನ್ ಬಾರಿಸಿದ್ದಾರೆ. ಕಿವೀಸ್ ಸೆಮಿ ಮತ್ತು ಫೈನಲ್ ತಲುಪಿದರೆ ಇವರಿಗೆ ಇನ್ನು ಎರಡು ಪಂದ್ಯಗಳು ಸಿಗಲಿದೆ. ಹೀಗಾಗಿ ಇವರಿಗೆ ಸಚಿನ್ ದಾಖಲೆ ಮುರಿಯುವ ಅವಕಾಶವಿದೆ. ಸಚಿನ್ ದಾಖಲೆ ಮುರಿಯಲು ರಚಿನ್ಗೆ ಇನ್ನು 109 ರನ್ಗಳ ಅವಶ್ಯವಿದೆ.
ಇದನ್ನೂ ಓದಿ ಬೆಂಗಳೂರಿನಲ್ಲಿ ಮೊಮ್ಮಗ ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ; ವಿಡಿಯೊ ವೈರಲ್
ಕೊಹ್ಲಿಗೆ ಬೇಕಿದೆ 131 ರನ್
ಸದ್ಯ 543* ರನ್ ಗಳಿಸಿರುವ ವಿರಾಟ್ ಕೊಹ್ಲಿ ಅವರು ಗರಿಷ್ಠ ರನ್ ಬಾರಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸಚಿನ್ ಅವರ ಸಾರ್ವಕಾಲಿಕ ದಾಖಲೆ ಮುರಿಯಲು ಇನ್ನು 131 ರನ್ಗಳ ಅಗತ್ಯವಿದೆ. ಭಾರತಕ್ಕೆ ನೆರ್ಲೆಂಡ್ಸ್ ಮತ್ತು ಸೆಮಿ ಫೈನಲ್ ಸೇರಿ ಎರಡು ಪಂದ್ಯಗಳಿವೆ. ಹೀಗಾಗಿ ಕೊಹ್ಲಿಗೆ ಈ ಮೊತ್ತವನ್ನು ಬಾರಿಸುವುದು ಕಷ್ಟದ ಮಾತಲ್ಲ. ಸಚಿನ್ ಅವರ ದಾಖಲೆ ಮುರಿಯಲು ಹೆಚ್ಚಿನ ಅವಕಾಶ ಇರುವುದು ವಿರಾಟ್ ಕೊಹ್ಲಿಗೆ.
ಇದನ್ನೂ ಓದಿ Yuvraj Singh: ಕೊಹ್ಲಿ ಜತೆ ನಾನು ಮಾತನಾಡುವುದಿಲ್ಲ; ಯುವಿ ತರ್ಕಕ್ಕೆ ಕಾರಣವೇನು?
ಡಿ ಕಾಕ್ಗೂ ಅವಕಾಶವಿದೆ
ದಕ್ಷಿಣ ಆಫ್ರಿಕಾ ತಂಡದ ಎಡಗೈ ಆಟಗಾರ, ಹಾಲಿ ಆವೃತ್ತಿಯಲ್ಲಿ ನಾಲ್ಕು ಶತಕ ಬಾರಿಸಿದ ಕ್ವಿಂಟನ್ ಡಿ ಕಾಕ್ ಅವರಿಗೂ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಅವಕಾಶವಿದೆ. ಡಿ ಕಾಕ್ 550 ರನ್ ಗಳಿಸಿ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. 123 ರನ್ಗಳ ಅಗತ್ಯವಿದೆ. ಇವರಿಗೂ ಸೆಮಿ ಮತ್ತು ಒಂದು ಲೀಗ್ ಪಂದ್ಯಗಳು ಆಡುವ ಅವಕಾಶವಿದೆ. ಹೀಗಾಗಿ ಇವರು ಕೂಡ ರೇಸ್ನಲ್ಲಿದ್ದಾರೆ.
ಒಂದೇ ಆವೃತ್ತಿಯ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಅಗ್ರ 5 ಆಟಗಾರರು
ಆಟಗಾರರು | ಪಂದ್ಯ | ಇನಿಂಗ್ಸ್ | ರನ್ |
ಸಚಿನ್ ತೆಂಡೂಲ್ಕರ್ | 11 | 11 | 673 |
ಮ್ಯಾಥ್ಯೂ ಹೇಡನ್ | 11 | 10 | 659 |
ರೋಹಿತ್ ಶರ್ಮ | 9 | 9 | 648 |
ಡೇವಿಡ್ ವಾರ್ನರ್ | 10 | 10 | 647 |
ಶಕೀಬ್ ಅಲ್ ಹಸನ್ | 8 | 8 | 606 |