Site icon Vistara News

ಒಂದೇ ಚಿತ್ರ ಪ್ರಕಟಿಸಿ ಟೀಕಾಕಾರರಿಗೆ ಉತ್ತರ ಕೊಟ್ಟ Virat Kohli

virat kohli

ಲಂಡನ್‌: ಕಂಡ ಕಂಡವರೆಲ್ಲರೂ ಈಗ ವಿರಾಟ್‌ ಕೊಹ್ಲಿಯನ್ನು (Virat Kohli) ಟೀಕಿಸುವವರು. ಸರಿಯಾಗಿ ೧೦ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದವರೂ ಕೊಹ್ಲಿಯ ಬ್ಯಾಟಿಂಗ್‌ ಸರಿಯಿಲ್ಲ, ಅವರ ಫೂಟ್‌ ವರ್ಕ್‌ ಸರಿಯಿಲ್ಲ. ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದೆಲ್ಲ ಹೇಳಿಕೆ ಕೊಡುತ್ತಿದ್ದಾರೆ. ಸ್ಟಾರ್‌ ಆಟಗಾರ ಈ ಎಲ್ಲ ಪ್ರತಿಕ್ರಿಯೆಗಳಿಗೆ ಒಂದೇ ಒಂದು ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಉತ್ತರ ಕೊಟ್ಟಿದ್ದಾರೆ.

ತಮ್ಮ ಚಿತ್ರಕ್ಕೆ ಅವರು ದೃಷ್ಟಿಕೋನ (perspective) ಎಂಬ ಒಕ್ಕಣೆ ಕೊಟ್ಟಿದ್ದು, ಶೀಘ್ರದಲ್ಲೇ ಫಾರ್ಮ್‌ ಕಂಡುಕೊಂಡು ನಿಮಗೆಲ್ಲರಿಗೂ ಉತ್ತರ ನೀಡುವೆ ಎಂಬ ಛಲವನ್ನು ಪ್ರದರ್ಶಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಲಂಡನ್‌ನಲ್ಲಿರುವ ವಿರಾಟ್‌ ಮೂರನೇ ಪಂದ್ಯದ ನಡುವಿನ ಬಿಡುವಿನಲ್ಲಿ ಹೊರಗಡೆ ಸುತ್ತಾಡಿದ್ದಾರೆ. ಈ ವೇಳೆ ಅವರು ಪೋಸ್ಟರ್‌ ಒಂದರ ಮುಂದೆ ಫೊಟೋ ತೆಗೆಸಿಕೊಂಡಿದ್ದಾರೆ. ಅದು ಸದ್ಯದ ಕೊಹ್ಲಿಯ ಪರಿಸ್ಥಿತಿಗೆ ಪೂರಕವಾಗಿದ್ದು, ಪುಟಿದೇಳುವ ಸಂದೇಶ ರವಾನಿಸಿದ್ದಾರೆ.

ಚಿತ್ರದಲ್ಲಿರುವ ಬರೆಹಗಳು ಇಂತಿದೆ. ವಾಟ್‌ ಇಫ್‌ ಐ ಫಾಲ್‌.. ಓ ಡಾರ್ಲಿಗ್‌, ವಾಟ್‌ ಇಫ್‌ ಐ ಫ್ಲೈ (What if I fall? Oh, but my darling, what if you fly?) ಎರಡು ರೆಕ್ಕೆಗಳ ಚಿತ್ರಗಳ ನಡುವೆ ಬರೆದಿರುವ ಈ ವಾಕ್ಯಗಳಿಗೆ ವಿರಾಟ್‌ ಅಭಿಮಾನಿಗಳು ನಾನಾ ಬಗೆಯ ವ್ಯಾಖ್ಯಾನ ನೀಡುತ್ತಿದ್ದಾರೆ.

“ನಾನೀಗ ಕೆಳಕ್ಕೆ ಬಿದ್ದಿರಬಹುದು. ಆದರೆ, ನನ್ನ ರೆಕ್ಕೆಗಳು ಇನ್ನೂ ಗಟ್ಟಿಯಾಗಿವೆ. ಎದ್ದು ಹಾರಬಲ್ಲೆ,ʼʼ ಎಂಬ ಸಂದೇಶವನ್ನು ಅವರು ಟೀಕೆ ಮಾಡುವವರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Krishan Das: ಕೃಷ್ಣ ದಾಸ್‌ ಕೀರ್ತನೆ ಆಲಿಸಿ ಲೋಕವನ್ನೇ ಮರೆತ ವಿರಾಟ್‌ ಕೊಹ್ಲಿ

Exit mobile version