Site icon Vistara News

IND vs SA: ಹರಿಣ ಪಡೆಯ ಬೌಲಿಂಗ್​ ಎದುರಿಸಲು ವಿಶೇಷ ಅಭ್ಯಾಸ ನಡೆಸಿದ ಕೊಹ್ಲಿ

virat kohli net practice

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ(South Africa vs India, 2nd Test) ನಾಳೆ(ಬುಧವಾರ)ಯಿಂದ ಆರಂಭಗೊಳ್ಳಲಿದೆ. ಈಗಾಗಲೇ ಮೊದಲ ಪಂದ್ಯ ಸೋತಿರುವ ಭಾರತ ಅಂತಿಮ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಡ್ರಾ ಮಾಡಿಕೊಳ್ಳಲು ನೆಟ್ಸ್​ನಲ್ಲಿ ಬಾರಿ ಕಸರತ್ತು ಮಾಡುತ್ತಿದೆ. ವೇಗಿ ನಾಂಡ್ರೆ ಬರ್ಗರ್‌ ಅವರನ್ನು ಎದುರಿಸುವ ನಿಟ್ಟಿನಲ್ಲಿ ವಿರಾಟ್‌ ಕೊಹ್ಲಿ ಅವರು ‘ನೆಟ್ ಪ್ರ್ಯಾಕ್ಟಿಸ್​’ ವೇಳೆ ಹೆಚ್ಚಿನ ಗಮನಹರಿಸಿದ್ದಾರೆ. ಎಡಗೈ ಬೌಲರ್​ ಎದುರಿಸುವ ನಿಟ್ಟಿನಲ್ಲಿ ಆಫ್ರಿಕಾದ ಸ್ಥಳೀಯ ನೆಟ್ ಬೌಲರ್​ಗಳನ್ನು ಅಭ್ಯಾಸದ ಅವಧಿಯಲ್ಲಿ ಬಳಸಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ ನೆಟ್ಸ್‌ನಲ್ಲಿ ಹೆಚ್ಚಿನ ಬ್ಯಾಟಿಂಗ್​ ಅಭ್ಯಾಸ ನಡೆಸುವ ಮೂಲಕ ಹರಿಣ ಪಡೆಯ ಬೌಲರ್​ಗಳನ್ನು ಕಟ್ಟಿಹಾಕುವ ಪಣ ತೊಟ್ಟಿದ್ದಾರೆ. ಕೊಹ್ಲಿ ಜತೆ ಶ್ರೇಯಸ್ ಅಯ್ಯರ್​ ಕೂಡ ಹೆಚ್ಚುವರಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಉಭಯ ಆಟಗಾರರು ಒಂದು ಗಂಟೆಗೂ ಹೆಚ್ಚಿನ ಸಮಯ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಮೊದಲು ಬೌಲರ್‌ಗಳನ್ನು ಎದುರಿಸಿದರು. ಬಳಿಕ ಸುಮಾರು 25 ನಿಮಿಷಗಳ ಕಾಲ ತೀವ್ರ ಗತಿಯ ಥ್ರೊ ಡೌನ್‌ಗಳನ್ನು ಎದುರಿಸಿದ್ದಾರೆ.

ಸ್ಥಳೀಯ ನೆಟ್​ ಬೌಲರ್​ಗಳೊಂದಿಗೆ ಅಭ್ಯಾಸ ನಡೆಸಿದ ಬಳಿಕ ವಿರಾಟ್​ ಕೊಹ್ಲಿ ಈ ಬೌಲರ್​ಗಳೊಂದಿಗೆ ಫೋಟೊ ತೆಗಿಸಿಕೊಂಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸೆಂಚುರಿಯನ್​ನಲ್ಲಿ ನಡೆದಿದ್ದ ಮೊದಲ ಟೆಸ್ಟ್​ನಲ್ಲಿ ಭಾರತೀಯ ಬ್ಯಾಟರ್​ಗಳು ಬೌನ್ಸಿ ಎಸೆತಗಳನ್ನು ಎದುರಿಸಿ ನಿಲ್ಲುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು. ದ್ವಿತೀಯ ಪಂದ್ಯದಲ್ಲಿ ಹೀಗಾಗ ಬಾರದು ಎನ್ನುವು ನಿಟ್ಟಿನಲ್ಲಿ ಎಲ್ಲ ಬ್ಯಾಟರ್​ಗಳು ಬೌನ್ಸಿ ಎಸೆತಗಳ ಅಭ್ಯಾಸ ನಡೆಸಿದ್ದಾರೆ.

ಇದನ್ನೂ ಓದಿ Team India : ಬೌಲಿಂಗ್ ಬಲ ಹೆಚ್ಚಳಕ್ಕೆ ತಂತ್ರ ಹೇಳಿಕೊಟ್ಟ ಮಾಜಿ ಕೋಚ್​

ಜಡೇಜಾ ಫಿಟ್​

ರವೀಂದ್ರ ಜಡೇಜಾ ಸಂಪೂರ್ಣವಾಗಿ ಫಿಟ್​ ಆಗಿದ್ದು ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯುವು ಬಹುತೇಕ ಖಚಿತ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಲ್ಲದೆ ಅವರು ನೆಟ್ಸ್​ನಲ್ಲಿಯೂ ಅಭ್ಯಾಸ ನಡೆಸಿದ್ದಾರೆ. ಮೊದಲ ಪಂದ್ಯದಲ್ಲಿ ಜಡೇಜಾ ಅನುಪಸ್ಥಿತಿಯಲ್ಲಿ ರವಿಚಂದ್ರ ಅಶ್ವಿನ್​ ಅವಕಾಶ ಪಡೆದಿದ್ದರು. ಆದರೆ ಅವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. 2 ಇನಿಂಗ್ಸ್​ ಸೇರಿ ಕಢವಲ ಒಂದು ವಿಕೆಟ್​ ಮಾತ್ರ ಕಬಳಿಸಿದ್ದರು. ಬ್ಯಾಟಿಂಗ್​ನಲ್ಲಿಯೂ ಶೂನ್ಯ ಮತ್ತು 8 ರನ್​ ಗಳಿಸಿದ್ದರು.

ಜಡೇಜಾ ದ್ವಿತೀಯ ಪಂದ್ಯಕ್ಕೆ ಮರಳಿದರೆ ಆಗ ಅಶ್ವಿನ್​ ಆಡುವ ಬಳಗದಿಂದ ಹೊರಬೀಳಲಿದ್ದಾರೆ. ಜಡೇಜಾ ಸ್ಪಿನ್​ ಜತೆಗೆ ಬ್ಯಾಟಿಂಗ್​ ಕೂಡ ಮಾಡಬಲ್ಲರು. ಇದು ತಂಡಕ್ಕೆ ಹೆಚ್ಚು ಪ್ಲಸ್​ ಪಾಯಿಂಟ್​ ಆಗಲಿದೆ. ಈ ವರ್ಷದಲ್ಲಿ ಜಡೇಜಾ ಭಾರತ ತಂಡದ ಪರ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾದಲ್ಲಿಯೂ ಶ್ರೇಷ್ಠ ನಿರ್ವಹಣೆ ತೋರಿದ್ದರು.

Exit mobile version