ದುಬೈ: ಸ್ಟಾರ್ ಭಾರತೀಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ(Virat Kohli) ಮತ್ತು ರವೀಂದ್ರ ಜಡೇಜಾ(Ravindra Jadeja) ಅವರು ಐಸಿಸಿ 2023ರ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಗೆ(ICC Men’s Cricketer of the Year 2023) ನಾಮನಿರ್ದೇಶನಗೊಂಡಿದ್ದಾರೆ. ಇವರ ಜತೆ ಆಸೀಸ್ ತಂಡದ ಪ್ಯಾಟ್ ಕಮಿನ್ಸ್(Pat Cummins) ಮತ್ತು ಟ್ರಾವಿಸ್ ಹೆಡ್(Travis Head) ಕೂಡ ಕಾಣಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ
2022ರ ದ್ವಿತೀಯಾರ್ಧದಲ್ಲಿ ಮತ್ತೆ ಹಳೆಯ ಬ್ಯಾಟಿಂಗ್ ಫಾರ್ಮ್ಗೆ ಮರಳಿದ ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಏಕದಿನ ಕ್ರಿಕೆಟ್ನಲ್ಲಿ ರನ್ಗಳ ಮಳೆಯನ್ನೇ ಸುರಿಸಿದ್ದರು. ಅಲ್ಲದೆ ಹಲವು ವಿಶ್ವ ದಾಖಲೆಯನ್ನು ಕೂಡ ತಮ್ಮ ಹೆಸೆರಿಗೆ ಬರೆದಿದ್ದರು. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಸರಣಿಯ ಅಂತಿಮ ಪಂದ್ಯದಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೊಹ್ಲಿ 186 ರನ್ ಸಿಡಿಸಿದ್ದರು. ಇದು 2019 ರ ನಂತರ ಅವರ ಮೊದಲ ಟೆಸ್ಟ್ ಶತಕವಾಗಿತ್ತು.
ಆಸೀಸ್ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ನಲ್ಲಿ 121 ರನ್ ಗಳಿಸುವ ತಮ್ಮ ಶತಕದ ಸಂಖ್ಯೆಯನ್ನು ಮತ್ತೆ ಹೆಚ್ಚಿಸಿದರು. ಏಕದಿನ ಮಾದರಿಯಲ್ಲಿ ಹಲವಾರು ದಾಖಲೆಗಳನ್ನು ಪುಡಿಮಾಡಿ ಕಳೆದ ವರ್ಷ ಆರು ಶತಕಗಳನ್ನು ಬಾರಿಸಿದ್ದಾರೆ. ಜತೆಗೆ ಏಕದಿನ ಕ್ರಿಕೆಟ್ನಲ್ಲಿ ಸಚಿನ್ ಬಾರಿಸಿದ್ದ 49 ಶತಕದ ವಿಶ್ವ ದಾಖಲೆಯನ್ನು ಹಿಂದಿಕ್ಕಿ 50 ಶತಕ ಪೂರ್ತಿಗೊಳಿಸಿದ್ದರು. ವಿಶ್ವಕಪ್ ಟೂರ್ನಿಯಲ್ಲೂ 765 ರನ್ ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.
ICC Cricketer of The Year! pic.twitter.com/isPSFmSQyv
— RVCJ Media (@RVCJ_FB) January 5, 2024
ರವೀಂದ್ರ ಜಡೇಜಾ
ಗಾಯದಿಂದಾಗಿ ಕೆಲ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ಆಲ್ರೌಂಡ್ ರವೀಂದ್ರ ಜಡೇಜಾ ಕಳೆದ ವರ್ಷ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 22 ವಿಕೆಟ್‌ಗಳನ್ನು ಪಡೆದು ಭಾರತ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 31 ಏಕದಿನ ವಿಕೆಟ್‌ಗಳೊಂದಿಗೆ ಜಡೇಜಾ ವೈಟ್-ಬಾಲ್ ಕ್ರಿಕೆಟ್‌ನಲ್ಲಿಯೂ ಮಿಂಚಿದ್ದರು. ಅವರು ವಿಶ್ವಕಪ್‌ನಲ್ಲಿ 24.87 ಸರಾಸರಿಯಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದರು. ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 33 ರನ್ಗೆ 5 ವಿಕೆಟ್ ಕಿತ್ತು ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ತೋರಿದ್ದರು.
ಇದನ್ನೂ ಓದಿ ICC t20 World Cup : ಟಿ20 ವಿಶ್ವ ಕಪ್ನಲ್ಲಿ ಭಾರತ ತಂಡದ ವೇಳಾಪಟ್ಟಿ ಈ ರೀತಿ ಇದೆ
ಟ್ರಾವಿಸ್ ಹೆಡ್
ಕಳೆದ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪೈನಲ್ ಮತ್ತು ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಪ್ರದರ್ಶನ ಟ್ರಾವಿಸ್ ಹೆಡರ್ ಅವರನ್ನು ಕ್ರಿಕೆಟ್ ಲೋಕಕ್ಕೆ ಹೆಚ್ಚು ಪರಿಚಯವಾಗುವಂತೆ ಮಾಡಿತ್ತು. ಈ 2 ಟೂರ್ನಿಯ ಫೈನಲ್ನಲ್ಲಿಯೂ ಶತಕ ಬಾರಿಸಿ ಭಾರತದ ಸೋಲಿಗೆ ಕಾರಣರಾಗಿದ್ದರು. ಟೆಸ್ಟ್ ಫೈನಲ್‌ನಲ್ಲಿ 163 ರನ್, ಏಕದಿನ ವಿಶ್ವಕಪ್ ಫೈನಲ್‌ನಲ್ಲಿ 137 ರನ್ ಬಾರಿಸಿದ್ದರು. 570 ಏಕದಿನ ರನ್‌ಗಳಲ್ಲಿ 329 ರನ್ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾಯಿತು.
ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್ಗೆ 2023 ಮರೆಯಲಾಗದ ವರ್ಷ. ಏಕೆಂದರೆ ಅವರ ನಾಯಕತ್ವದಲ್ಲಿ ಏಕದಿನ ಮತ್ತು ಟೆಸ್ಟ್ ವಿಶ್ವಕಪ್ ಗೆದ್ದ ವರ್ಷ್ ಇದಾಗಿದೆ. ದಿ ಓವಲ್‌ನಲ್ಲಿ ನಡೆದ WTC ಫೈನಲ್‌ನಲ್ಲಿ ಭಾರತದ ವಿರುದ್ಧ ವೀರೋಚಿತ ಗೆಲುವಿನೊಂದಿಗೆ ಆರಂಭವಾದ ಕಮಿನ್ಸ್ ಜರ್ನಿ ನಂತರ ಇಂಗ್ಲೆಂಡ್‌ನಲ್ಲಿ ಯಶಸ್ವಿ ಆ್ಯಶಸ್, ಏಕದಿನ ವಿಶ್ವಕಪ್ ಹೀಗೆ ಹಲವು ಟೂರ್ನಿಯಲ್ಲಿ ಅವರಿಗೆ ಯಶಸ್ಸು ಸಿಕ್ಕಿತ್ತು. ಒಟ್ಟಾರೆ ಕಮಿನ್ಸ್ 2023ರಲ್ಲಿ ಹಲವು ಸಾಧನೆ ಮಾಡಿದ್ದಾರೆ.