Site icon Vistara News

Windis Tour | ಕೆರಿಬಿಯನ್‌ ನಾಡಿಗೂ ಹೋಗಲ್ಲ ವಿರಾಟ್‌ ಕೊಹ್ಲಿ, ಬುಮ್ರಾಗೂ ರೆಸ್ಟ್

windis tour

ಮುಂಬಯಿ: ತೊಡೆ ಸಂದು ನೋವಿಗೆ ಒಳಗಾಗಿರುವ ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಮುಂಬರುವ ಕೆರಿಬಿಯನ್‌ ನಾಡಿನ (windis tour) ಪ್ರವಾಸದ ಟಿ೨೦ ಸರಣಿಗೆ ಅಲಭ್ಯರಾಗಿದ್ದಾರೆ.

ಇದೇ ವೇಳೆ ವೇಗದ ಬೌಲರ್‌ ಜಸ್‌ಪ್ರಿತ್‌ ಬುಮ್ರಾ ಅವರಿಗೂ ವಿಶ್ರಾಂತಿ ಕಲ್ಪಿಸಲಾಗಿದೆ. ಜುಲೈ ೨೯ರಿಂದ ವೆಸ್ಟ್‌ ಇಂಡೀಸ್‌ ವಿರುದ್ಧದ ಐದು ಪಂದ್ಯಗಳ ಸರಣಿ ನಡೆಯಲಿದೆ. ಈ ತಂಡದಲ್ಲಿ ವಿರಾಟ್‌ ಕೊಹ್ಲಿ ಇರದಿರುವುದು ಸದ್ಯದ ಅಚ್ಚರಿಯ ವಿಷಯವಾಗಿದೆ. ಅಂತೆಯೇ ಏಷ್ಯಾ ಕಪ್‌ ಹಾಗೂ ಟಿ೨೦ ವಿಶ್ವ ಕಪ್‌ ಇರುವ ಹೊರತಾಗಿಯೂ ವಿರಾಟ್‌ ಕೊಹ್ಲಿ ಮತ್ತೊಂದು ಬಾರಿ ಸರಣಿಯೊಂದರಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ.

ರಾಹುಲ್‌ ಎಂಟ್ರಿ

ತೊಡೆ ಸಂದು ನೋವಿನ ಗಾಯಕ್ಕೆ ಸರ್ಜರಿ ಮಾಡಿಕೊಂಡಿರುವ ಕನ್ನಡಿಗ ಕೆ. ಎಲ್‌ ರಾಹುಲ್‌ ಗುಣಮುಖರಾಗಿದ್ದಾರೆ. ಅವರು ಬೆಂಗಳೂರಿನ ಎನ್‌ಸಿಎನಲ್ಲಿ ಪುನಶ್ವೇತನಕ್ಕೆ ಒಳಗಾಗಿದ್ದಾರೆ. ಅವರು ಮುಂದಿನ ಸರಣಿಯಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಏತನ್ಮಧ್ಯೆ ೧೮ ಸದಸ್ಯರ ತಂಡದಲ್ಲಿ ವೇಗಿ ಉಮ್ರಾನ್‌ ಮಲಿಕ್‌ ಅವಕಾಶ ಪಡೆದುಕೊಂಡಿಲ್ಲ. ಅರ್ಶ್‌ದೀಪ್‌ ಸಿಂಗ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಂತೆಯೇ ಸ್ಪಿನ್ನರ್‌ಗಳಾದ ಆರ್‌. ಅಶ್ವಿನ್‌ ಹಾಗೂ ಕುಲ್ದೀಪ್‌ ಯಾದವ್‌ ೧೮ರ ನಿಯೋಗ ಸೇರಿಕೊಂಡಿದ್ದಾರೆ.

ಟಿ೨೦ ತಂಡ

ರೋಹಿರ್‌ ಶರ್ಮ (ನಾಯಕ), ಇಶಾನ್‌ ಕಿಶನ್‌, ಕೆ.ಎಲ್‌ ರಾಹುಲ್‌, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ಶ್ರೇಯಸ್‌ ಅಯ್ಯರ್‌, ದಿನೇಶ್‌ ಕಾರ್ತಿಕ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ರವಿಚಂದ್ರನ್‌ ಅಶ್ವಿನ್‌, ರವಿ ಬಿಷ್ಣೋಯಿ, ಕುಲ್ದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಆವೇಶ್‌ ಖಾನ್‌, ಹರ್ಷಲ್‌ ಪಟೇಲ್‌, ಅರ್ಶ್‌ದೀಪ್‌ ಸಿಂಗ್‌.

ಇದನ್ನೂ ಓದಿ: IND vs ENG ODI | ಕೊಹ್ಲಿ ಅಲಭ್ಯತೆಗೆ ಗಾಯ ಕಾರಣವೇ? ಜಾಲತಾಣದಲ್ಲಿ ಚರ್ಚೆ ಜೋರು

Exit mobile version