ಪೋರ್ಟ್ ಆಫ್ ಸ್ಪೇನ್: ಸೋಷಿಯಲ್ ಮೀಡಿಯಾಗಳಲ್ಲಿ ವಿರಾಟ್ ಕೊಹ್ಲಿ ಮತ್ತು ರೊಹಿತ್ ಶರ್ಮಾ ಅಭಿಮಾನಿಗಳದ್ದು ಸದಾ ಜಗಳ. ಕೊಹ್ಲಿ ಮತ್ತು ರೋಹಿತ್ ತಂಡದೊಳಗೆ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದಾರೆ ಎಂದು ಹೇಳುವಷ್ಟು ಮಟ್ಟಿಗೆ ಜಗಳವಿದೆ. ಆದರೆ, ಮೈದಾನದಲ್ಲಿ, ಇಬ್ಬರು ಕ್ರಿಕೆಟ್ ಐಕಾನ್ಗಳು ಬಹಳ ಒಳ್ಳೆಯ ಬಂಧವನ್ನು ಹೊಂದಿದ್ದಾರೆ. ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಗೆ ಮುಂಚಿತವಾಗಿ ಇಬ್ಬರೂ ಗಂಭೀರ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ. ಟೀಮ್ ಇಂಡಿಯಾ ತರಬೇತಿ ಅವಧಿಯ ವೇಳೆ ಅವರಿಬ್ಬರು ಮಾತುಕತೆ ಕಂಡುಬಂತು. ಮಳೆಯಿಂದಾಗಿ ಪಂದ್ಯ ನಿಂತಾಗ ಅವರು ಮಾತನಾಡಿದರು.
ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ತಮ್ಮ ಬ್ಯಾಟಿಂಗ್ ಕಿಟ್ಗಳೊಂದಿಗೆ ಅಭ್ಯಾಸ ಅವಧಿಯಲ್ಲಿ ಕಾಣಿಸಿಕೊಂಡರು. ಈ ಇಬ್ಬರು ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿದ್ದಾರೆ. ಟೀಂ ಇಂಡಿಯಾ ನಾಯಕ ಅದ್ಭುತ ಶತಕ ಬಾರಿಸಿದರೆ, ವಿರಾಟ್ ಕೊಹ್ಲಿ 76 ರನ್ ಗಳಿಸುವಲ್ಲಿ ಯಶಸ್ವಿಯಾದರು.
ಈ ಆಟಗಾರ ಸಮರ್ಥಹೋರಾಟದಿಂದ ಭಾರತ ಇನ್ನಿಂಗ್ಸ್ ಮತ್ತು 141 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಸೋಲದಿರುವ 21 ವರ್ಷಗಳ ದಾಖಲೆಯನ್ನು ಮುಂದುವರಿಸಲು ಭಾರತ ತಂಡವೂ ಸಜ್ಜಾಗಿದೆ.
ಕಳೆದ ಎರಡು ವರ್ಷಗಳಂತೆ, ಭಾರತವು ಮೂರನೇ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಋತುವನ್ನು ಗೆಲುವಿನ ಟಿಪ್ಪಣಿಯೊಂದಿಗೆ ಪ್ರಾರಂಭಿಸಿದೆ. ಭಾರತ ತಂಡ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಎರಡನೇ ಟೆಸ್ಟ್ನಲ್ಲಿ ಗೆದ್ದರೆ ಡಬ್ಲ್ಯುಟಿಸಿ 2023-25ರ ಋತುವಿನಲ್ಲಿ ಮುನ್ನಡೆಯನ್ನು ವಿಸ್ತರಿಸಲಿದೆ. ಮೊದಲ ಟೆಸ್ಟ್ನಲ್ಲಿ ಯಶಸ್ವಿ ಜೈಸ್ವಾಲ್ ಚೊಚ್ಚಲ ಶತಕ, ರವಿಚಂದ್ರನ್ ಅಶ್ವಿನ್ 12 ವಿಕೆಟ್ ಪಡೆಯುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಪ್ಲೇಯಿಂಗ್ ಇಲೆವೆನ್ನಲ್ಲಿ ಸಣ್ಣ ಬದಲಾವಣೆಗಳು ಇರುತ್ತವೆ ಎಂದು ಸುಳಿವು ನೀಡಿದರು. ಡೊಮಿನಿಕಾದಲ್ಲಿ ಸ್ಪಿನ್ನರ್ ಮೇಲುಗೈ ಸಾಧಿಸುತ್ತಿರುವುದರಿಂದ, ರೋಹಿತ್ ಮೂರನೇ ಸ್ಪಿನ್ನರ್ ಆಗಿ ಅಕ್ಷರ್ ಪಟೇಲ್ ಅವರನ್ನು ಆಡಿಸಲು ಮುಂದಾಗಬಹುದು. ಮೋಡ ಕವಿದ ವಾತಾವರಣ ಇದ್ದರೆ ಮೂರು ವೇಗಿಗಳೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ.
ಟೆಸ್ಟ್ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.