Site icon Vistara News

Virat kohli | ಅಡಿಲೇಡ್‌ನ ಮಹಿಳೆಯರ ಹಾಕಿ ತಂಡದೊಂದಿಗೆ ಕಾಣಿಸಿಕೊಂಡ ವಿರಾಟ್‌ ಕೊಹ್ಲಿ

virat kohli

ಅಡಿಲೇಡ್ : ಇಂಗ್ಲೆಂಡ್‌ ವಿರುದ್ಧದ ಸೆಮಿ ಫೈನಲ್‌ ಪಂದ್ಯ ಭಾರತ ತಂಡದ ಆಟಗಾರರಿಗೆ ದುಸ್ವಪ್ನವಾಗಿದೆ. ವಿಶ್ವದ ಅತ್ಯಂತ ಬಲಿಷ್ಠ ತಂಡವೊಂದು ಎದುರಾಳಿಗೆ ೧೦ ವಿಕೆಟ್‌ಗಳಿಂದ ಶರಣಾಗುವುದು ಸಹಿಸಲಾಗದ ಸಂಗತಿ. ಹೀಗಾಗಿ ಭಾರತ ತಂಡದ ಆಟಗಾರರು ಸ್ಟೇಡಿಯಮ್‌ನಲ್ಲೇ ಬೇಸರದಲ್ಲಿ ತಲೆ ತಗ್ಗಿಸಿದ್ದರು. ಆದರೆ, ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್‌ ಆಗಿರುವ ವಿರಾಟ್‌ ಕೊಹ್ಲಿ (Virat kohli) ಸೋಲಿನ ನೋವಿನಿಂದ ತಕ್ಷಣದಲ್ಲೇ ಚೇತರಿಸಿಕೊಂಡಿದ್ದು ಬೇರೆಯವರಿಗೆ ಸ್ಫೂರ್ತಿಯಾಗಲು ಮುಂದಾಗಿದ್ದಾರೆ.

ಸೆಮಿ ಫೈನಲ್‌ ಪಂದ್ಯ ಮುಗಿದ ಹಿನ್ನೆಲೆಯಲ್ಲಿ ಭಾರತ ತಂಡದ ಟಿ೨೦ ಹಾಗೂ ಏಕ ದಿನ ಪಂದ್ಯಗಳ ಸರಣಿಗಾಗಿ ನ್ಯೂಜಿಲೆಂಡ್‌ಗೆ ಪ್ರವಾಸ ಬೆಳೆಸಲಿದೆ. ಅದರೆ, ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮ ಹಾಗೂ ಕೆ. ಎಲ್‌ ರಾಹುಲ್ ಈ ಸರಣಿಯಲ್ಲಿ ಆಡದ ಕಾರಣ ಭಾರತಕ್ಕೆ ವಾಪಸಾಗಲಿದ್ದಾರೆ. ಹೀಗಾಗಿ ಭಾರತಕ್ಕೆ ವಾಪಸ್‌ ಬರುವ ಯೋಜನೆ ರೂಪಿಸುವ ತನಕ ಅವರೆಲ್ಲರಿಗೆ ಬಿಡುವು ಲಭಿಸಿದೆ. ಇದೇ ಅವಧಿಯಲ್ಲಿ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದ ಅಡಿಲೇಡ್‌ನ ಮಹಿಳೆಯರ ಹಾಕಿ ತಂಡದ ಸದಸ್ಯರೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಾಕಷ್ಟು ಲೈಕ್‌ಗಳು ಹಾಗೂ ಕಾಮೆಂಟ್‌ಗಳು ಬಂದಿವೆ.

ನಾನಾ ಮಾದರಿಯ ಕ್ರೀಡಾಪಟುಗಳಿಗೆ ಪ್ರೇರಣೆ ನೀಡುವುದು ವಿರಾಟ್‌ ಕೊಹ್ಲಿಯ ಫ್ಯಾಶನ್‌ ಆಗಿದೆ. ಹೀಗಾಗಿ ಅವರು ಎಲ್ಲೇ ಹೋದರು ಅಲ್ಲಿನ ಬೇರೆಬೇರೆ ಕ್ರೀಡಾಪಟುಗಳ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅಂತೆಯೇ ಅವರು ಹಾಕಿ ತಂಡದ ಆಟಗಾರ ಜತೆಯೂ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.

ಇದನ್ನೂ ಓದಿ | Virat Kohli | ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್​ ಕೊಹ್ಲಿ; ಏನಿದು ನೂತನ ರೆಕಾರ್ಡ್‌?

Exit mobile version