ಹೈದರಾಬಾದ್ : ಯುವ ಬ್ಯಾಟರ್ ಶುಬ್ಮನ್ ಗಿಲ್ ಭವಿಷ್ಯದ ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಎಂದೇ ಬಿಂಬಿತರಾಗಿದ್ದಾರೆ. ಶ್ರೀಲಂಕಾ ವಿರುದ್ಧದಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ 70 ರನ್ ಬಾರಿಸಿದ್ದರೆ, ಮೂರನೇ ಪಂದ್ಯದಲ್ಲಿ 116 ರನ್ಗಳನ್ನು ಬಾರಿಸಿದ್ದರು. ಇದೀಗ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲೂ ಶತಕ ಬಾರಿಸದಿ್ದಾರೆ ಈ ಮೂಲಕ ಆಯ್ಕೆಗಾರರ ವಿಶ್ವಾಸ ಉಳಿಸಿಕೊಂಡಿದ್ದಾರೆ. ಇದೇ ವೇಳೆ ಅವರು ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅವರ ದಾಖಲೆ ಮುರಿದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ಮೊದಲು ಶುಬ್ಮನ್ ಒಟ್ಟು 18 ಅಂತಾರಾಷ್ಟ್ರೀಯ ಇನಿಂಗ್ಸ್ಗಳಲ್ಲಿ 894 ರನ್ ಬಾರಿಸಿದ್ದರು. ಇದೀಗ ಅವರು ಶತಕದ ಸಾಧನೆಯ ಜತೆಗೆ ಅಂತಾರಾಷ್ಟ್ರೀಯ 1000 ರನ್ಗಳ ಸರದಾರ ಎನಿಸಿಕೊಂಡಿದ್ದಾರೆ. ಅದಕ್ಕವರು 19 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ಭಾರತ ತಂಡದ ಪರ ಅತಿವೇಗದಲ್ಲಿ ಈ ಸಾಧನೆ ಮಾಡಿದ ಗರಿಮೆ ತಮ್ಮದಾಗಿಸಿಕೊಳ್ಳಲಿದ್ದು, ವಿರಾಟ್ ಕೊಹ್ಲಿ ಹಾಗೂ ಧವನ್ ಹಿಂದಿಕ್ಕಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 1000 ರನ್ ಬಾರಿಸಲು 24 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದರು. ಅವರೀಗ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 23 ವರ್ಷದ ಶುಬ್ಮನ್ ಗಿಲ್ 18 ಏಕ ದಿನ, 13 ಟೆಸ್ಟ್ ಪಂದ್ಯಗಳು ಹಾಗೂ 3 ಟಿ20ಯಲ್ಲಿ ಆಡಿದ್ದಾರೆ. ಏಕ ದಿನ ಮಾದರಿಯಲ್ಲಿ 2 ಶತಕ ಹಾಗೂ 5 ಅರ್ಧ ಶತಕಗಳ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ | Shubman Gill | ಶುಬ್ಮನ್ ಗಿಲ್ಗೆ ಟಿ20 ಮಾದರಿಯಲ್ಲಿ ಆಡಿಸಬೇಡಿ ಎಂದು ಸಲಹೆ ಕೊಟ್ಟಿದ್ದಾರೆ ಮಾಜಿ ಆಟಗಾರ