Site icon Vistara News

Virat kohli | ವಿಶ್ವ ಕಪ್‌ ನೆಟ್‌ ಪ್ರಾಕ್ಟೀಸ್‌ ವೇಳೆ ಡಾನ್ಸ್‌ ಮಾಡಿದ ವಿರಾಟ್‌ ಕೊಹ್ಲಿ, ವಿಡಿಯೊ ವೈರಲ್‌

ಬ್ರಿಸ್ಬೇನ್‌ : ಮೈದಾನದಲ್ಲಿ ಆಕ್ರಮಣಕಾರಿ ಭಾವ ತೋರುವ ವಿರಾಟ್‌ ಕೊಹ್ಲಿ (Virat kohli) ಬಿಡುವಿನ ವೇಳೆಯಲ್ಲಿ ಅಷ್ಟೇ ನಿರಾಳವಾಗಿ ಇರುತ್ತಾರೆ. ಅದರಲ್ಲೂ ನೆಟ್ ಪ್ರಾಕ್ಟೀಸ್‌ ಟೈಮ್‌ನಲ್ಲಿ ಅವರ ಈ ರೀತಿಯ ಚಟುವಟಿಕೆಗಳು ಹೆಚ್ಚಾಗಿ ಕಾಣುತ್ತಿರುತ್ತವೆ. ಅಂತೆಯೇ ವಿಶ್ವ ಕಪ್‌ಗಾಗಿ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಅವರು ಡಾನ್ಸ್‌ ಮಾಡಿರುವ ವಿಡಿಯೊವೊಂದು ವೈರಲ್‌ ಆಗಿದೆ.

ಸೋಮವಾರ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಆಡಲಿದೆ. ಹೀಗಾಗಿ ಭಾನುವಾರ ಆಟಗಾರರು ನೆಟ್‌ನಲ್ಲಿ ಪ್ರಾಕ್ಟೀಸ್‌ ಮಾಡಿದ್ದಾರೆ. ಈ ಅವಧಿಯಲ್ಲಿ ವಿರಾಟ್‌ ಕೊಹ್ಲಿ ಸಹ ಆಟಗಾರರಾದ ಕೆ. ಎಲ್‌ ರಾಹುಲ್‌ ಹಾಗೂ ಭುವನೇಶ್ವರ್‌ ಕುಮಾರ್‌ ಅವರ ಜತೆಗೆ ಮಾತನಾಡುತ್ತಾ ಡಾನ್ಸ್‌ ಮಾಡಿದ್ದಾರೆ.

ಅಭ್ಯಾಸದ ನಡುವೆ ಕೆ. ಎಲ್‌ ರಾಹುಲ್‌, ಅರ್ಶ್‌ದೀಪ್‌ ಸಿಂಗ್‌ ಕುಳಿತಿದ್ದರೆ ಭುವನೇಶ್ವರ್‌ ಕುಮಾರ್‌ ನಿಂತುಕೊಂಡು ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ವಿರಾಟ್‌ ಕೊಹ್ಲಿ ಭುವನೇಶ್ವರ್‌ ಕುಮಾರ್ ಜತೆ ಏನೂ ಸಂಭಾಷಣೆ ನಡೆಸುತ್ತಾರೆ. ಬಳಿಕ ಅವರು ಡಾನ್ಸ್‌ ಮಾಡುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ಭುವನೇಶ್ವರ್ ಅವರೂ ಏನೂ ಹೇಳಲು ಮುಂದಾಗುತ್ತಾರೆ. ಆ ವೇಳೆ ಮತ್ತೊಮ್ಮೆ ಅವರು ಇನ್ನೊಂದು ಸ್ಟೆಪ್‌ ತೋರಿಸುತ್ತಾರೆ.

ಇದನ್ನೂ ಓದಿ | Team India | ಸಾಕು ಅಂದರೂ ಅಭ್ಯಾಸ ನಿಲ್ಲಿಸದ ವಿರಾಟ್‌ ಕೊಹ್ಲಿ, ವಿಶ್ವ ಕಪ್‌ಗೆ ಭರ್ಜರಿ ಪ್ರಾಕ್ಟೀಸ್‌

Exit mobile version