Site icon Vistara News

Virat Kohli | ಆರ್‌ಸಿಬಿ ಅಲ್ರೊ, ಟೀಮ್‌ ಇಂಡಿಯಾ ಎಂದು ಪ್ರೇಕ್ಷಕರಿಗೆ ಸನ್ನೆ ಮಾಡಿದ ವಿರಾಟ್‌ ಕೊಹ್ಲಿ

virat kohli

ನಾಗ್ಪುರ : ಟೀಮ್‌ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟಗಾರ. ಅವರು ಐಪಿಎಲ್‌ ಆಡುವಾಗಲೂ ಆ ಅಭಿಮಾನಿಗಳು ಆರ್‌ಸಿಬಿಯ ಫ್ಯಾನ್ಸ್‌ಗಳಾಗುತ್ತಾರೆ. ಅಂತೆಯೇ ಶುಕ್ರವಾರ ನಾಗ್ಪುರದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ ಕೊಹ್ಲಿಯನ್ನು ನೋಡಿದ ಆ ಎಲ್ಲ ಅಭಿಮಾನಿಗಳು ಆರ್‌ಸಿಬಿ, ಆರ್‌ಸಿಬಿ ಎಂದು ಕೂಗಿದ ಘಟನೆ ನಡೆಯಿತು. ತಕ್ಷಣ ವಿರಾಟ್‌ ಕೊಹ್ಲಿ ನಾನು ಟೀಮ್‌ ಇಂಡಿಯಾಗೆ ಆಡುತ್ತಿದ್ದೇನೆ, ಆರ್‌ಸಿಬಿಗೆ ಅಲ್ಲ ಎಂದು ಹೇಳಿದರು.

ವಿರಾಟ್‌ ಕೊಹ್ಲಿಯನ್ನು ಆಟಗಾರರ ಗ್ಯಾಲರಿಯಲ್ಲಿ ನೋಡಿದ ಅಭಿಮಾನಿಗಳು ಆರ್‌ಸಿಬಿ, ಆರ್‌ಸಿಬಿ ಎಂದು ಕೂಗಿದರು. ತಕ್ಷಣ ವಿರಾಟ್‌ ಕೊಹ್ಲಿ, ತಮ್ಮ ಜರ್ಸಿ ಮೇಲಿರುವ ಬಿಸಿಸಿಐ ಲೋಗೋ ತೋರಿಸಿ ನಾನು ಆರ್‌ಸಿಬಿಗೆ ಆಡುತ್ತಿಲ್ಲ ಟೀಮ್‌ ಇಂಡಿಯಾ ಪರ ಕಣಕ್ಕಿಳಿದಿದ್ದೇನೆ ಎಂಬುದಾಗಿ ಸಂಜ್ಞೆ ಮಾಡಿದರು ಈ ವೇಳೆ ಅವರೆಲ್ಲರೂ ಇಂಡಿಯಾ, ಇಂಡಿಯಾ ಎಂದು ಕೂಗಲು ಆರಂಭಿಸಿದರು. ಈ ವೇಳೆ ಕೊಹ್ಲಿ ಪಕ್ಕದಲ್ಲಿದ್ದ ಆರ್‌ಸಿಬಿ ತಂಡದ ಇನ್ನೊಬ್ಬ ಆಟಗಾರ ಹರ್ಷಲ್‌ ಪಟೇಲ್‌ ನಗಾಡಿದರು.

ಇದನ್ನೂ ಓದಿ | Virat kohli | ಫೆಡರರ್‌- ರಾಫೆಲ್ ನಡಾಲ್‌ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ವಿರಾಟ್‌ ಕೊಹ್ಲಿ

Exit mobile version