Site icon Vistara News

Virat kohli : ತಂಡದಲ್ಲಿ ಚಾನ್ಸ್ ಇಲ್ಲ ಎಂದು ಬ್ಯಾಟ್​ ಹಿಡಿದು ಹೊರ ನಡೆದ ವಿರಾಟ್ ಕೊಹ್ಲಿ!

Virat Kohli

ಕೊಲೊಂಬೊ: ಬದ್ದತೆ ವಿಚಾರಕ್ಕೆ ಬಂದಾಗ ವಿರಾಟ್ ಕೊಹ್ಲಿಯನ್ನು ಯಾರೂ ಮೀರಿಸಲು ಸಾಧ್ಯವಿಲ್ಲ. ಫಿಟ್ನೆಸ್​ ಹಾಗೂ ಅಭ್ಯಾಸದ ವಿಚಾರಕ್ಕೆ ಬಂದಾಗ ಸದಾ ಮುಂಚೂಣಿಯಲ್ಲಿರುವ ಅವರು ತಂಡದಲ್ಲಿ ಇರಲಿ, ಇಲ್ಲದೇ ಇರಲಿ ನೆಟ್​ ಪ್ರಾಕ್ಟೀಸ್ ಮಾಡುವುದನ್ನು ಬಿಡುವುದಿಲ್ಲ. ಅಂತೆಯೇ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಷ್ಯಾ ಕಪ್ ಸೂಪರ್​4 ಪಂದ್ಯದಲ್ಲಿ ಅವರು ಆಡದಿದ್ದರೂ, ಸಕ್ರಿಯವಾಗಿರಲು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತ ಬೌಲಿಂಗ್ ಮಾಡುತ್ತಿದ್ದಾಗ, ಕೊಹ್ಲಿ 12 ನೇ ಆಟಗಾರನಾಗಿದ್ದರು. ಅಲ್ಲದೆ, ತಂಡದ ಆಟಗಾರರಿಗೆ ನೀರು ತಂದುಕೊಡುವ ಕೆಲಸ ಮಾಡಿದ್ದರು.

ಭಾರತದ ಬೌಲಿಂಗ್ ಇನ್ನಿಂಗ್ಸ್ ಮುಗಿದ ನಂತರ, ಕೊಹ್ಲಿ ಒಂದು ಸೆಕೆಂಡು ವ್ಯರ್ಥ ಮಾಡಲಿಲ್ಲ. ಅವರು ತಕ್ಷಣ ನೆಟ್ ಅಭ್ಯಾಸಕ್ಕೆ ಮುಂದಾದರು. ಇದಕ್ಕೂ ಮುನ್ನ ಕೊಹ್ಲಿಗಿಂತ ಮೊದಲು ಶ್ರೇಯಸ್ ಅಯ್ಯರ್ ನೆಟ್ಸ್​​ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟರ್​ ಬೆನ್ನುನೋವಿನಿಂದ ಇನ್ನೂ ಸಂಪೂರ್ಣವಾಗಿ ಫಿಟ್ ಆಗದ ಕಾರಣ ಪಂದ್ಯವನ್ನು ಬಾಂಗ್ಲಾ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.

ಏಷ್ಯಾಕಪ್​ ಫೈನಲ್​ಗೆ ಭಾರತ ಪ್ರವೇಶಿಸಿದೆ. ಲಂಕಾ ತಂಡ ಅಲ್ಲಿ ಎದುರಾಳಿದೆ. ಹೀಗಾಗಿ ಈ ಆಟಕ್ಕೆ ಯಾವುದೇ ಪ್ರಾಮುಖ್ಯತೆಯಿಲ್ಲದ ಕಾರಣ, ಮೆನ್ ಇನ್ ಬ್ಲೂ ತಮ್ಮ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿತು. ಇವರಲ್ಲಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಇತರರು ಸೇರಿದ್ದಾರೆ. ಆದರೆ ಕೊಹ್ಲಿ ಎಂದಿನಂತೆ ಚುರುಕಿನಿಂದ ಓಡಾಡಿದ್ದರು.

ವಿರಾಟ್ ಕೊಹ್ಲಿಯನ್ನು ಬೆಂಚ್ ಕಾಯಿಸಿದ್ದು ಯಾಕೆ?

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಅಷ್ಟೊಂದು ಪ್ರಾಮುಖ್ಯತೆ ಇಲ್ಲದ್ದು. ಹೀಗಾಗಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಭಾರತ ಈಗಾಗಲೇ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಆದ್ದರಿಂದ, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರಂತವರನ್ನು ತಂಡಕ್ಕೆ ಸೇರಿಸಲು ಇದು ಏಕೈಕ ಅವಕಾಶವಾಗಿತ್ತು.

ಇದನ್ನೂ ಓದಿ: Ravindra Jadeja : ಏಕ ದಿನ ಕ್ರಿಕೆಟ್​ ಮಾದರಿಯಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ

ವಿರಾಟ್ ಕೊಹ್ಲಿ ವಿಶ್ವಕಪ್ ಜೊತೆಗೆ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಆಡಲಿದ್ದಾರೆ. ಆದ್ದರಿಂದ, ಅವನನ್ನು ಹೆಚ್ಚು ಫ್ರೆಶ್ ಆಗಿ ಇಡುವುದು ಮುಖ್ಯ. . ಇನ್ನು 48 ಗಂಟೆಗಳಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಏಷ್ಯಾಕಪ್ ಫೈನಲ್ ಪಂದ್ಯವನ್ನಾಡಲಿದ್ದು ಅವರಿಗೆ ವಿಶ್ರಾಂತಿ ಪಡೆಯುವುದು ಮುಖ್ಯವಾಗಿತ್ತು.

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್ (ವಿಕೆ), ಇಶಾನ್ ಕಿಶನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ.

Exit mobile version