Site icon Vistara News

Virat Kohli : ಆರ್​ಸಿಬಿ ನಾಯಕತ್ವ ತ್ಯಜಿಸಿದ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ಏನಂದರು ಅವರು?

Virat Kohli talked about giving up the captaincy of RCB, what did he do?

#image_title

ಬೆಂಗಳೂರು: ವಿರಾಟ್​ ಕೊಹ್ಲಿ 2021ರಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕತ್ವ ತೊರೆದಿದ್ದರು. ಅವರ ನಿರ್ಗಮನದ ಬಳಿಕ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟರ್ ಫಾಪ್​ ಡು ಪ್ಲೆಸಿಸ್​ ತಂಡದ ನಾಯಕರಾಗಿ ಆಯ್ಕೆಯಾದರು. ಯಾಕೆ ನಾಯಕತ್ವವನ್ನು ತ್ಯಜಿಸಿದೆ ಎಂಬುದನ್ನು ವಿರಾಟ್​ ಕೊಹ್ಲಿ (Virat Kohli) ಎಲ್ಲಿಯೂ ಹೇಳಿರಲಿಲ್ಲ. ಆದರೆ, ಆರ್​ಸಿಬಿ ಮಹಿಳೆಯರ ತಂಡಕ್ಕೆ ಉತ್ತೇಜನ ನೀಡಲು ಬಂದ ಅವರು ತಮ್ಮ ನಿಲುವಿಗೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಆರ್​ಸಿಬಿ ಮಹಿಳೆಯರ ತಂಡ ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್​ ಲೀಗ್​ನಲ್ಲಿ ನಿರಾಶಾದಾಯಕ ಆರಂಭ ಕಂಡಿತ್ತು. ಸತತಾಗಿ ಐದು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಕಳಪೆ ಆರಂಭ ಮಾಡಿತ್ತು. ಆದರೆ, ಯುಪಿ ವಾರಿಯರ್ಸ್​ ವಿರುದ್ಧದ ಪಂದ್ಯಕ್ಕೆ ಮೊದಲು ಆರ್​ಸಿಬಿ ಮಹಿಳೆಯರ ಕ್ಯಾಂಪ್​ಗೆ ಭೇಟಿ ನೀಡಿದ್ದ ವಿರಾಟ್ ಕೊಹ್ಲಿ ಆಟಗಾರ್ತಿಯರಿಗೆ ಪ್ರೋತ್ಸಾಹ ನೀಡುವ ಜತೆಗೆ ತಮ್ಮ ಪರಿಶ್ರಮವನ್ನೂ ಹೇಳಿಕೊಂಡರು. ಈ ವೇಳೆ ಅವರು ಯಾಕೆ ನಾಯಕತ್ವವನ್ನು ತ್ಯಜಿಸಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ನನ್ನ ನಾಯಕತ್ವದ ಸಾಮರ್ಥ್ಯದ ಬಗ್ಗೆ ಸಂಪೂರ್ಣವಾಗಿ ನಂಬಿಕೆ ಕಳೆದಕೊಂಡಿದ್ದೆ. ನನ್ನ ವಿಶ್ವಾಸದ ಗಡಿಗೆಯೂ ಖಾಲಿಯಾಗಿತ್ತು. ಮುಂದುರಿಸಲು ಸಾಧ್ಯವೇ ಇಲ್ಲ ಎಂದು ಅನಿಸಿದಾಗ ನಾಯಕತ್ವನ್ನು ಬಿಟ್ಟು ಆಟದ ಕಡೆಗೆ ಗಮನ ಹರಿಸಲು ಮುಂದಾದೆ ಎಂದು ವಿರಾಟ್​ ಕೊಹ್ಲಿ ಹೇಳಿದ್ದಾರೆ.

ನನಗೆ ನನ್ನದೇ ಆದ ಯೋಜನೆಗಳಿದ್ದವು. ಅದರಲ್ಲಿ ನಾನು ಹೆಚ್ಚಿನ ಯಶಸ್ಸನ್ನು ಗಳಿಸಿಕೊಂಡಿರಲಿಲ್ಲ. ಅದನ್ನು ಮುಂದುವರಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಎದುರಾದಾಗ ನಾನು ನಾಯಕತ್ವದ ಜವಾಬ್ದಾರಿಯಿಂದ ಹೊರಕ್ಕೆ ಬಂದೆ ಎಂದು ಅವರು ಹೇಳಿದ್ದಾರೆ.

ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಆಡುತ್ತಿದ್ದ ಆರ್​ಸಿಬಿ ಎರಡೆರಡು ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನವನ್ನು ಪಡೆದುಕೊಂಡಿತ್ತು. ಜತೆಗೆ ಒಂದು ಬಾರಿಯೂ ವಿರಾಟ್​ ಕೊಹ್ಲಿಗೆ ತಂಡವನ್ನು ಚಾಂಪಿಯನ್​ಪಟ್ಟಕ್ಕೆ ಏರಿಸಲು ಸಾಧ್ಯವಾಗಿರಲಿಲ್ಲ. ಅದೇ ರೀತಿ ಅವರು ಕೂಡ ಪ್ರದರ್ಶನ ವೈಫಲ್ಯ ಎದುರಿಸಲು ಆರಂಭಿಸಿದ್ದರು. ಹೀಗಾಗಿ ನಾಯಕತ್ವಕ್ಕೆ ವಿದಾಯ ಹೇಳಿದ್ದರು ವಿರಾಟ್​ ಕೊಹ್ಲಿ.

ಇವೆಲ್ಲದರ ನಡುವೆಯೂ ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ ಎನಿಸಿಕೊಂಡಿದ್ದಾರೆ. 2016ರಲ್ಲಿ ಅವರ ನೇತೃತ್ವದ ಆರ್​ಸಿಬಿ ಎಂಟು ರನ್​ಗಳಿಂದ ಸನ್​ರೈಸರ್ಸ್ ಹೈದರಬಾದ್​ ತಂಡದ ವಿರುದ್ಧ ಸೋಲು ಮೂಲಕ ಟ್ರೋಫಿ ಗೆಲ್ಲುವ ಅವಕಾಶ ನಷ್ಟ ಮಾಡಿಕೊಂಡಿತ್ತು. ಅದೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕು ಶತಕಗಳು ಸೇರಿದಂತೆ 973 ರನ್​ ಬಾರಿಸಿದ್ದರು. ಇದು ಐಪಿಎಲ್​ ಇತಿಹಾಸದಲ್ಲಿ ಆಟಗಾರನೊಬ್ಬ ಬಾರಿಸಿದ ಗರಿಷ್ಠ ರನ್ ಎನಿಸಿಕೊಂಡಿದೆ.

Exit mobile version