Site icon Vistara News

Virat Kohli | ಸಿಡ್ನಿಗೆ ಬಂದಿಳಿದ ಟೀಮ್ ಇಂಡಿಯಾ, ವಿರಾಟ್​ ಕೊಹ್ಲಿ ಜತೆ ಸೆಲ್ಫಿಗಾಗಿ ಮುಗಿಬಿದ್ದ ಜನ

virat

ಸಿಡ್ನಿ: ಟಿ20 ವಿಶ್ವ ಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಟೀಮ್​ ಇಂಡಿಯಾ, ನೆದರ್ಲೆಂಡ್ಸ್​ ವಿರುದ್ಧ ದ್ವಿತೀಯ ಪಂದ್ಯವನ್ನಾಡಲು ಸಿಡ್ನಿಗೆ ಬಂದಿಳಿದಿದೆ. ಆಟಗಾರರು ವಿಮಾನ ಇಳಿಯುತ್ತಿದ್ದಂತೆ ಅಭಿಮಾನಿಗಳು ವಿರಾಟ್​ ಕೊಹ್ಲಿಗೆ (Virat Kohli) ಜೈಕಾರ ಹಾಕಿದ್ದಾರೆ.

ಪಾಕಿಸ್ತಾನ ವಿರುದ್ಧ ಸ್ಫೋಟಕ ಬ್ಯಾಟಿಂಗ್​ ನಡೆಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್​ ಕೊಹ್ಲಿಯ ಪರಾಕ್ರಮದ್ದೇ ಎಲ್ಲೆಡೆ ಸುದ್ದಿ. ಹೀಗಿರುವಾಗ ಮಂಗಳವಾರ ಸಿಡ್ನಿಗೆ ಬಂದಿಳಿದ ಭಾರತ ತಂಡವನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಇದೇ ವೇಳೆ ಕೊಹ್ಲಿಯನ್ನು ಕಂಡ ಅಭಿಮಾನಿಗಳು ವಿರಾಟ್​…ವಿರಾಟ್​​ ಎಂದು ಹರ್ಷೋದ್ಗಾರ ಮಾಡಿದ್ದಾರೆ. ಬಳಿಕ ಕೊಹ್ಲಿ ಜತೆ ಸೆಲ್ಫಿ ಮತ್ತು ಆಟೋಗ್ರಾಫ್​ಗಾಗಿ ಮುಗಿಬಿದ್ದಿದ್ದಾರೆ. ಅಭಿಮಾನಿಗಳ ಆಶಯದಂತೆ ಕೊಹ್ಲಿಯೂ ಸಹಕರಿಸಿದ್ದು ನೆಚ್ಚಿನ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವಿಡಿಯೊ ಎಲ್ಲೆಡೆ ವೈರಲ್​ ಆಗಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆರಂಭಿಕ ಬ್ಯಾಟರ್‌ಗಳ ವೈಫಲ್ಯದಿಂದ ೩೧ ರನ್‌ಗಳಿಗೆ ೪ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಆಡಲು ಬಂದ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋರಾಟ ಸಂಘಟಿಸಿದ್ದರು. ಕೊನೇ ತನಕ ಕ್ರೀಸ್ ಕಾಯ್ದಕೊಂಡ ಅವರು ತಂಡವನ್ನು ಗೆಲ್ಲಿಸಿ, ತಾವು “ಕಿಂಗ್‌’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಕೊಹ್ಲಿ ಈ ಪಂದ್ಯದಲ್ಲಿ 53 ಎಸೆತದಿಂದ ಅಜೇಯ 82 ರನ್​ ಸಿಡಿಸಿದ್ದರು. ಈ ಅಮೋಘ ಇನಿಂಗ್ಸ್​ನಲ್ಲಿ 4 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಯಲ್ಪಟ್ಟಿತ್ತು. ಇದೀಗ ಸಿಡ್ನಿಯಲ್ಲೂ ಕೊಹ್ಲಿ ಸಿಡಿಯಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.

ಇದನ್ನೂ ಓದಿ | T20 World Cup| ಆ್ಯಡಂ ಜಂಪಾಗೆ ಕೊರೊನಾ ಪಾಸಿಟಿವ್​; ಆಸ್ಟ್ರೇಲಿಯಾ ತಂಡಕ್ಕೆ ಬಿಗ್​ ಶಾಕ್

Exit mobile version