Site icon Vistara News

Virat Kohli : ಬದುಕು ಬದಲಿಸಿದ ಪತ್ನಿಗೆ ಧನ್ಯವಾದ ಹೇಳಿದ ವಿರಾಟ್ ಕೊಹ್ಲಿ

Virat Kohli thanked his wife for changing his life

#image_title

ಬೆಂಗಳೂರು: ಐಪಿಎಲ್​ ಆರಂಭಕ್ಕೆ ಕೆಲವೇ ದಿನಗಳ ಬಾಕಿ ಇರುವಂತೆಯೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ವಿರಾಟ್​ ಕೊಹ್ಲಿಯ ಪಾಡ್​ಕಾಸ್ಟ್​​ ತಯಾರಿಸಿ ಬಿಡುತ್ತಿದೆ. ಈ ಹಿಂದೆ ಒಂದು ಕಂತಿನ ಮಾತುಕತೆಯನ್ನು ಅಭಿಮಾನಿಗಳಿಗಾಗಿ ಶೇರ್​ ಮಾಡಿತ್ತು. ಇದೀಗ ಎರಡನೇ ಕಂತನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವಿರಾಟ್​ ಕೊಹ್ಲಿ ತಮ್ಮ ಕಷ್ಟದ ದಿನಗಳಲ್ಲಿ ಬದುಕು ಬದಲಿಸಿದ ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಮಾತನಾಡಿದ್ದಾರೆ. ತಂದೆಯ ಅಗಲಿಕೆ ಸೇರಿದಂತೆ ನಾನಾ ಗೊಂದಲದಲ್ಲಿದ್ದ ತಮಗೆ ಅನುಷ್ಕಾ ಜತೆಗಿನ ಸಂಬಂಧ ವಿಶ್ವಾಸ ವೃದ್ಧಿಸುವಂತೆ ಮಾಡಿತು ಎಂಬುದಾಗಿ ಅವರು ಹೇಳಿದ್ದಾರೆ.

ಆರ್​ಸಿಬಿ ಶೇರ್​ ಮಾಡಿದ ವಿಡಿಯೊ ಇಲ್ಲಿದೆ

ತಂದೆ ನಿಧನ ಹೊಂದಿದ ತಕ್ಷಣ ನನ್ನ ಬದುಕಿನ ಪರಿಸ್ಥಿತಿಗಳು ಬದಲಾಗಲು ಆರಂಭಗೊಂಡವು. ಆದರೆ, ನನ್ನ ಬದುಕು ಅದೇ ರೀತಿಯಲ್ಲಿ ಇರಬೇಕಾಯಿತು. ಈ ವೇಳೆ ನನ್ನ ಗುರಿ ಸಾಧನೆಗೆ ಹೆಚ್ಚಿನ ಗಮನ ಕೊಡುವುದು ಅನಿವಾರ್ಯವಾಯಿತು ಎಂದು ಆರ್​ಸಿಬಿ ಬಿಡುಗಡೆ ಮಾಡಿದ ವಿಡಿಯೊದಲ್ಲಿ ವಿರಾಟ್​ ಕೊಹ್ಲಿ ಮಾತನಾಡಿದ್ದಾರೆ.

ನಾನು ಆರಂಭದಲ್ಲಿ ಏನು ಮಾಡುತ್ತಿದ್ದೆನೋ ಅದುವೇ ನಡೆಯುತ್ತಿದೆ. ನಾನೀಗಲೂ ಕ್ರಿಕೆಟ್​ ಆಡುತ್ತಿದ್ದೇನೆ. ನನ್ನ ಪರಿಸ್ಥಿತಿಯೂ ಅದೇ ರೀತಿ ಇದೆ. ಆದರೆ, ಯಾವಾಗ ನಾನು ಅನುಷ್ಕಾ ಶರ್ಮಾಳನ್ನು ಭೇಟಿಯಾದೆನೋ ಅಂದು ನನ್ನ ಬದುಕು ಬದಲಾಯಿತು. ನಾನು ಅದೇ ರೀತಿಯ ಪರಿಸ್ಥಿತಿಯಲ್ಲಿ ಇರಲಿಲ್ಲ. ನಮ್ಮ ಯೋಜನೆಗಳು ಹಾಗೂ ಯೋಚನೆಗಳು ಅದೇ ರೀತಿ ಇದ್ದವು ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ : IND VS AUS: ಅಭ್ಯಾಸ ಆರಂಭಿಸಿದ ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ

ಒಂದು ಬಾರಿ ಪ್ರೀತಿಸಲು ಆರಂಭಿಸಿದಾಗ ನಮ್ಮೊಳಗೆ ಬದಲಾವಣೆ ಮಾಡಲು ಮುಂದಾಗುತ್ತೇವೆ ಅದಕ್ಕಾಗಿ ನೀವು ಹೆಚ್ಚು ಮುಕ್ತವಾಗಬೇಕಾಗುತ್ತದೆ. ನೀವು ಹಲವಾರು ಸಂಗತಿಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹೀಗಾಗಿ ಅದನ್ನೇ ಬದುಕು ಬದಲಿಸುವ ಕ್ಷಣ ಎಂದ ಹೇಳುತ್ತೇನೆ ಎಂದು ವಿರಾಟ್​ ಹೇಳಿದ್ದಾರೆ.

Exit mobile version