Site icon Vistara News

Virat Kohli: ವಿರಾಟ್​ ಕೊಹ್ಲಿಗೆ ಲಿಪ್​ ಕಿಸ್​ ನೀಡಿದ ಯುವತಿ; ವಿಡಿಯೊ ವೈರಲ್​

Virat Kohli: The young woman gave a lip kiss to Virat Kohli; The video is viral

Virat Kohli: The young woman gave a lip kiss to Virat Kohli; The video is viral

ಮುಂಬಯಿ: ಟೀಮ್​ ಇಂಡಿಯಾ ಆಟಗಾರ ವಿರಾಟ್​ ಕೊಹ್ಲಿಗೆ(Virat Kohli) ಅಭಿಮಾನಿ ಯುವತಿಯೊಬ್ಬಳು ಲಿಪ್​ ಕಿಸ್​ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ವಿರಾಟ್ ಕೊಹ್ಲಿ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲಿಯೂ ಕೊಹ್ಲಿಯನ್ನು ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಇತ್ತೀಚೆಗಷ್ಟೇ ಯುವತಿಯೊಬ್ಬಳು ಕೊಹ್ಲಿಗೆ ಲಿಪ್ ಕಿಸ್ ನೀಡಿ ಭಾರಿ ಸುದ್ದಿಯಾಗಿದ್ದಾಳೆ. ಆದರೆ ಅಸಲಿಗೆ ಈ ಯುವತಿ ಕಿಸ್​ ನೀಡಿದ್ದು ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಗೆ.

ದೆಹಲಿಯ ಮೇಡಮ್ ಟುಸ್ಸಾಡ್ಸ್‌ನಲ್ಲಿರುವ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಗೆ ಯುವತಿ ಲಿಪ್ ಕಿಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜತೆಗೆ ಮೇಣದ ಪ್ರತಿಮೆಯೊಂದಿಗೆ ಯುವತಿ ಪೋಸ್ ನೀಡಿರುವ ಫೋಟೋಗಳು ಕೂಡ ವೈರಲ್ ಆಗಿದೆ.

ಇದನ್ನೂ ಓದಿ IND VS AUS: ನೂರನೇ ಟೆಸ್ಟ್​ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದ ಚೇತೇಶ್ವರ್ ಪೂಜಾರ

ವಿರಾಟ್​ ಕೊಹ್ಲಿ ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾಗಿಯಾಗಿದ್ದಾರೆ. ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ನೂತನ ವಿಶ್ವ ದಾಖಲೆಯೊಂದನ್ನು ಬರೆದಿದ್ದರು. ಅತಿ ವೇಗವಾಗಿ ಮೂರು ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಸಾವಿರ ರನ್​ ಗಳಿಸಿದ ಆಟಗಾರ ಎಂಬ ಹಿರಿಮೆ ಪಾತ್ರರಾಗಿದ್ದರು. ಈ ಸಾಧನೆಯೊಂದಿಗೆ ಅವರು ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ದಾಖಲೆಯನ್ನು ಮುರಿದಿದ್ದರು.​

Exit mobile version