Site icon Vistara News

Virat Kohli | ಟಿ20 ವಿಶ್ವ ಕಪ್​ ವಿರಾಟ್​ ಕೊಹ್ಲಿಗೆ ಹೇಳಿ ಮಾಡಿಸಿದಂತಿದೆ; ಅಖ್ತರ್​​ ಹೀಗೆ ಹೇಳಿದ್ದು ಯಾಕೆ?

akthar

ಲಾಹೋರ್​: ಟೀಮ್​ ಇಂಡಿಯಾ ಆಟಗಾರ ವಿರಾಟ್‌ ಕೊಹ್ಲಿ(Virat Kohli) ಅವರ ಭರ್ಜರಿ ಪ್ರದರ್ಶನದ ಬಗ್ಗೆ ಮಾತನಾಡಿರುವ ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್​ ಅಖ್ತರ್, ಆಸ್ಟ್ರೇಲಿಯಾದಲ್ಲಿ ವಿರಾಟ್‌ ಕೊಹ್ಲಿ ಅಬ್ಬರಿಸುತ್ತಿರುವುದು ವಿಧಿ ಲಿಖಿತ ಎಂದು ಹೇಳಿದ್ದಾರೆ.

“ಈ ಬಾರಿಯ ಟಿ20 ವಿಶ್ವ ಕಪ್‌ ಕೂಟ ಸಂಪೂರ್ಣ ವಿರಾಟ್‌ ಕೊಹ್ಲಿ ಅವರದ್ದಾಗಿದೆ. ವಿಶ್ವ ಕಪ್‌ ಆರಂಭದಿಂದಲೂ ಕೊಹ್ಲಿ ಅದ್ಭುತ ಆಟವಾಡಿ ರನ್‌ಗಳ ಹೊಳೆಯನ್ನೇ ಹರಿಸಿದ್ದಾರೆ. ನಾಳೆ ಎಂಬುದು ಇಲ್ಲವೇ ಇಲ್ಲ ಎನ್ನುವ ರೀತಿ ಎದುರಾಳಿ ಬೌಲರ್​ಗಳನ್ನು ದಂಡಿಸಿ ಬ್ಯಾಟಿಂಗ್​ ನಡೆಸುತ್ತಿದ್ದಾರೆ” ಎಂದು ಅಖ್ತರ್​ ಹೇಳಿದ್ದಾರೆ.

“ಆಸ್ಟ್ರೇಲಿಯಾದಲ್ಲಿ ಈ ಬಾರಿ ವಿರಾಟ್‌ ಕೊಹ್ಲಿ ಅಬ್ಬರಿಸುವುದು ವಿಧಿ ಲಿಖಿತ. ಸರಿ ಸುಮಾರು 2 ವರ್ಷಗಳ ಕಾಲ ಕಳಪೆ ಬ್ಯಾಟಿಂಗ್​ ಪ್ರದರ್ಶಿಸಿದ ಕೊಹ್ಲಿ ಈಗ ಟಿ20 ವಿಶ್ವ ಕಪ್‌ ಟೂರ್ನಿಯ ಟಾಪ್‌ ಸ್ಕೋರರ್‌ ಆಗಿ ಮೆರೆದಿದ್ದಾರೆ. ಅವರ ಬ್ಯಾಟಿಂಗ್​ ಪ್ರದರ್ಶನವನ್ನು ಗಮನಿಸುವಾಗ ಈ ಟಿ20 ವಿಶ್ವ ಕಪ್‌ ಟೂರ್ನಿಯನ್ನು ಆಸ್ಟ್ರೇಲಿಯಾದಲ್ಲಿ ಅವರ ಸಲುವಾಗಿಯೇ ಆಯೋಜಿಸಿದಂತಿದೆ. ಟೂರ್ನಿಯಲ್ಲಿ ಅವರು ಭಾರತ ತಂಡದ ಪರ ಇದೇ ರೀತಿಯ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನಗಳನ್ನು ತೋರುತ್ತಾರೆಂಬ ವಿಶ್ವಾಸ ನನ್ನಲ್ಲಿದೆ” ಎಂದು ಅಖ್ತರ್​ ತಿಳಿಸಿದರು.

ಇದನ್ನೂ ಓದಿ | Virat Kohli | ಕೊಹ್ಲಿ ಮೋಸದಾಟದಿಂದ ಪಂದ್ಯ ಸೋಲುವಂತಾಯಿತು; ನೂರುಲ್​ ಹಸನ್​ ಆರೋಪ

Exit mobile version