ಕೊಲಂಬೋ: ಟೀಮ್ ಇಂಡಿಯಾದ(Team India) ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಅನೇಕ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಕೊಹ್ಲಿಯಂತೆಯೇ ಕ್ರಿಕೆಟ್ ಆಡಬೇಕೆನ್ನುವುದು ಹಲವು ಕ್ರಿಕೆಟಿಗರ ಕನಸಾಗಿದೆ. ಕ್ರಿಕೆಟ್ನಲ್ಲಿ ಏನಾದರು ಸಾಧಿಸಬೇಕೆಂದು ಹಂಬಲಿಸುತ್ತಿರುವ ಶ್ರೀಲಂಕಾದ ಉದಯೋನ್ಮುಖ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ(Virat Kohli) ಅವರು ತಮ್ಮ ಕ್ರಿಕೆಟ್ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಕೊಲಂಬೋದಲ್ಲಿ ಅಭ್ಯಾಸ ನಡೆಸುತ್ತಿದ್ದ ಕೊಹ್ಲಿ ಲಂಕಾದ ಯುವ ಆಟಗಾರರಿಗೆ ಕ್ರಿಕೆಟ್ ಕುರಿತು ಕೆಲಕಾಲ ಪಾಠ ಮಾಡಿದ್ದಾರೆ. ಇದೇ ವೇಳೆ ಯುವ ಆಟಗಾರರು ಕೊಹ್ಲಿಗೆ ಹಲವು ಪ್ರಶ್ನೆಗಳನ್ನು ಕೇಳಿ ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಕೊಹ್ಲಿ ಈ ಗುಣವನ್ನು ಮೆಚ್ಚಿದ ಯುವ ಆಟಗಾರರು ಬ್ಯಾಟ್ ಒಂದನ್ನು ಸ್ಮರಣಿಕೆಯಾಗಿ ನೀಡಿದ್ದಾರೆ.
ಕೊಹ್ಲಿ ಅವರು ಲಂಕಾದ ಯುವ ಆಟಗಾರರಿಗೆ ಕ್ರಿಕೆಟ್ ಸಲಹೆ ನೀಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿರುವ ಬಿಸಿಸಿಐ, ‘ಸ್ಫೂರ್ತಿದಾಯಕ ಸಂವಾದದೊಂದಿಗೆ ನಿಮ್ಮ ವಾರಾಂತ್ಯವನ್ನು ಪ್ರಾರಂಭಿಸಿ, ವಿರಾಟ್ ಕೊಹ್ಲಿ ತಮ್ಮ ಅನುಭವವನ್ನು ಉದಯೋನ್ಮುಖ ಕ್ರಿಕೆಟಿಗರೊಂದಿಗೆ ಹಂಚಿಕೊಂಡಿದ್ದಾರೆ’ ಎಂದು ಬರೆದುಕೊಂಡಿದೆ.
ಇದನ್ನೂ ಓದಿ IND vs PAK: ಸೂಪರ್-4 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ, ಪಿಚ್ ರಿಪೋರ್ಟ್
ನಾಯಿ ಮರಿಯೊಂದಿಗೆ ಆಟವಾಡಿದ ಕೊಹ್ಲಿ
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಶುಕ್ರವಾರ ಟೀಮ್ ಇಂಡಿಯಾ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದರು. ಎಲ್ಲ ಆಟಗಾರರು ಫುಟ್ಬಾಲ್ ಆಡುತ್ತಿರುವಾಗ ನಾಯಿ ಮರಿಯೊಂದು ಮೈದಾನಕ್ಕೆ ನುಗ್ಗಿತು. ಇದೇ ವೇಳೆ ಮುದ್ದಾದ ನಾಯಿ ಮರಿಯನ್ನು ಕಂಡ ವಿರಾಟ್ ಕೊಹ್ಲಿ ಮತ್ತು ಕೆಲ ಆಟಗಾರರು ಅದನ್ನು ಮುದ್ದು ಮಾಡಿದ್ದಾರೆ. ಕೈಯಲ್ಲಿ ಎತ್ತಿಕೊಂಡು ಬೆನ್ನು ಸವರಿದ್ದಾರೆ. ಅಲ್ಲದೆ ಈ ನಾಯಿ ಮರಿಯು ಫುಟ್ಬಾಲ್ ಹಿಂದೆ ಓಡುತ್ತಾ ಆಟವಾಡಿದೆ. ಈ ವಿಡಿಯೊ ಕಂಡ ಅನೇಕರು ಪ್ರಾಣಿ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಈವರೆಗೆ ಕೇವಲ 12 ಪಂದ್ಯಗಳನ್ನು ಆಡಿದ್ದು ಒಟ್ಟು 617 ರನ್ ಬಾರಿಸಿದ್ದಾರೆ. ಒಂದೊಮ್ಮೆ ಕೊಹ್ಲಿ ಅವರು ಒಂದೊಮ್ಮೆ ವಿರಾಟ್ ಅವರು ಈ ಟೂರ್ನಿಯಲ್ಲಿ 354 ರನ್ ಬಾರಿಸಿದರೆ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಸರ್ವಕಾಲಿಕ 971 ರನ್ ದಾಖಲೆ ಪತನಗೊಳ್ಳಲಿದೆ. ಹೀಗೆ ಕೊಹ್ಲಿಗೆ ಎರಡು ದಿಗ್ಗಜ ಆಟಗಾರರ ದಾಖಲೆಯನ್ನು ಮುರಿಯುವ ಅವಕಾಶವಿದೆ.
ಪಾಕ್ ವಿರುದ್ಧ ಕೊಹ್ಲಿ ಸಾಧನೆ
ಏಷ್ಯಾಕಪ್ ಟೂರ್ನಿಯಲ್ಲಿ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಸಾರಸ್ಯವೆಂದರೆ ಕಿಂಗ್ ಕೊಹ್ಲಿ 2012ರಲ್ಲಿ ಪಾಕಿಸ್ತಾನ ವಿರುದ್ಧವೇ 183ರನ್ ಬಾರಿಸಿದ್ದರು. ಈ ಸಾಧನೆಯ ಪಟ್ಟಿಯಲ್ಲಿ ಬಾಬರ್ಗೆ(151) ದ್ವಿತೀಯ ಸ್ಥಾನ. ಮೂರನೇ ಸ್ಥಾನ ಯೂನಿಸ್ ಖಾನ್(144), ನಾಲ್ಕನೇ ಸ್ಥಾನ ಬಾಂಗ್ಲಾದ ಮುಸ್ಫಿಕರ್ ರಹಿಂ(144) ಪಡೆದಿದ್ದಾರೆ.