Site icon Vistara News

Virat Kohli: ​ಕೊಹ್ಲಿಯ ಟೆಸ್ಟ್​ ಗೈರಿನ ಹಿಂದಿರುವ ರಹಸ್ಯ ಬಯಲು ಮಾಡಿದ ಗೆಳೆಯ ಎಬಿಡಿ

ab de villiers and kohli

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಇಂಗ್ಲೆಂಡ್​ ವಿರುದ್ಧದ(England test series) ಮೊದಲ 2 ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ಕಾರಣ ಏನೆಂಬುವುದು ಬಹಿರಂಗಗೊಂಡಿದೆ. ಅವರ ಕುಚಿಕು ಗೆಳೆಯ ಎಬಿ ಡಿ ವಿಲಿಯರ್ಸ್(AB de Villiers)​ ಅವರು ಈ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯ ವೇಳೆಯೇ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ(Anushka Sharma) 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಮಾತು ಎಲ್ಲೆಡೆ ಕೇಳಿಬಂದಿತ್ತು. ತುಂಬು ಗರ್ಭಿಣಿಯಾಗಿದ್ದು ಶೀಘ್ರದಲ್ಲೇ ಅವರ ಹೆರಿಗೆಯಾಗಲಿದ್ದು ಇದೇ ಕಾರಣಕ್ಕೆ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಉಳಿದಿರುವ​ ಮೂರು ಟೆಸ್ಟ್​ ಪಂದ್ಯಗಳಿಂದಲೂ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದೀಗ ಡಿವಿಲಿಯರ್ಸ್ ಅವರು ಕೊಹ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿರುವು ಖಚಿತ ಎಂದು ಹೇಳಿದ್ದಾರೆ.

ಆನ್​ಲೈನ್​ ಸಂದರ್ಶನದಲ್ಲಿ ಮಾತನಾಡಿದ ಡಿ ವಿಲಿಯರ್ಸ್​, ‘ನನಗೆ ತಿಳಿದಿರುವಂತೆ ವಿರಾಟ್ ಕೊಹ್ಲಿ ಕುಟುಂಬದ ಜತೆ ಸಮಯ ಕಳೆಯಲು ಬಯಸಿದ್ದಾರೆ. ಇದರಿಂದ ಕೊಹ್ಲಿ ಆರಂಭಿಕ 2 ಪಂದ್ಯದಿಂದ ಹೊರಗುಳಿದಿದ್ದಾರೆ. ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕೊಹ್ಲಿಯ ನಿರ್ಧಾರವನ್ನು ಗೌರವಿಸಲೇ ಬೇಕು” ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.

“ಕುಟುಂಬಕ್ಕೆ ಸಮಯ ನೀಡುವುದು ಕೊಹ್ಲಿಗೆ ಬಿಟ್ಟ ವಿಚಾರ. ಈ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ತಂಡಕ್ಕಿಂತ ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ ಎಂದು ಅವರ ಬದ್ಧತೆ, ಕ್ರಿಕೆಟ್ ಕುರಿತು ಪ್ರಶ್ನಿಸುವುದು ಸರಿಯಲ್ಲ. ಕೊಹ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದು ವಿಲಿಯರ್ಸ್ ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್​ ಕುಚಿಕು ಗೆಳೆಯರು. ಕೊಹ್ಲಿಯ ಯಾವುದೇ ಸಾಧನೆ ಇರಲಿ ಮೊದಲು ಹಾರೈಸುವುದು ವಿಲಿಯರ್ಸ್​. ಕೊಹ್ಲಿ ಬ್ಯಾಟಿಂಗ್​ ಫಾರ್ಮ್​ ಕಳೆದುಕೊಂಡಾಗ ಅವರ ಬಗೆಗಿನ ಟೀಕೆಯನ್ನು ಎಬಿಡಿ ಖಂಡಿಸುವ ಮೂಲಕ ಕೊಹ್ಲಿಗೆ ಬೆಂಬಲ ಸೂಚಿಸುತ್ತಿದ್ದರು.

ಇದನ್ನೂ ಓದಿ IND vs ENG 2nd Test: 6 ವಿಕೆಟ್ ಕೆಡವಿ ಹಲವು ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ

ಅದ್ಭುತ ವ್ಯಕ್ತಿ


“ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ, ಆತ ಕೊಂಚ ಕೋಪಿಷ್ಟ ಹಾಗೂ ಅಹಂಕಾರಿ ಎಂದುಕೊಂಡಿದ್ದೆ. ಏಕೆಂದರೆ ಅವರು ಆಡುವ ಬೇಳೆ ಹಲವು ಬಾರಿ ಇತರ ತಂಡದ ಆಟಗಾರರೊಂದಿಗೆ ಕಿರಿಕ್​ ಮಾಡಿದ್ದರು. ಆದರೆ ದಿನಕಳೆದಂತೆ ಕೊಹ್ಲಿ ಜತೆ ಬೆರೆಯುತ್ತಿದ್ದಂತೆಯೇ, ಅವರ ಕುರಿತಾದ ತಮ್ಮ ನಿಲುವು ಬದಲಾಯಿತು. ಅವರ ಮೇಲೆ ನನಗೆ ಸಾಕಷ್ಟು ಗೌರವ ಮೂಡಿತು. ಅವರೊಬ್ಬ ಅದ್ಭುತ ವ್ಯಕ್ತಿ ಜತೆಗೆ ಉತ್ತಮ ಕ್ರಿಕೆಟಿಗ” ಎಂದು ಎಬಿಡಿ ಹಿಂದೊಮ್ಮೆ ಅನ್​ಬಾಕ್ಸ್​ ಆರ್​ಸಿಬಿ ಕಾರ್ಯಕ್ರಮದಲ್ಲಿ ಹೇಳಿದ್ದರು.

Exit mobile version