ಟ್ರಿನಿಡಾಡ್: ವೆಸ್ಟ್ ಇಂಡೀಸ್(India vs west Indies) ವಿರುದ್ಧದ ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲಿ ವಾಟರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ(Virat Kohli) ಅಂತಿಮ ಪಂದ್ಯಲ್ಲಿ ಬದಲಿ ಆಟಗಾರನಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಅವರನ್ನು ಈ ರೀತಿ ನಡೆಸಿಕೊಂಡ ಟೀಮ್ ಮ್ಯಾನೆಜ್ಮೆಂಟ್ ವಿರುದ್ಧ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಕೊಹ್ಲಿ ಅವರು ಬ್ಯಾಟಿಂಗ್ ಕ್ರಮಾಂಕದ ಪ್ರಯೋಗದಿಂದಾಗಿ ತಂಡಲ್ಲಿದ್ದರೂ ಬ್ಯಾಟಿಂಗ್ ನಡೆಸುವ ಅವಕಾಶ ಲಭಿಸಿರಲಿಲ್ಲ. ದ್ವಿತೀಯ ಪಂದ್ಯದಲ್ಲಿ ವಿಶ್ರಾಂತಿ ನೆಪದಲ್ಲಿ ಅವರನ್ನು ಕೈಬಿಡಲಾಗಿತ್ತು. ಇಲ್ಲಿ ಕೊಹ್ಲಿಗೆ ವಾಟರ್ ಬಾಯ್ ಕೆಲಸ ನೀಡಲಾಗಿದೆ. ಅಂತಿಮ ಪಂದ್ಯದಲ್ಲಿ ಬದಲಿ ಆಟಾರನಾಗಿ ಫೀಲ್ಡಿಂಗ್ ನಡೆಸಲಾಗಿದೆ. ಇದು ಸ್ಟಾರ್ ಆಟಗಾರನಿಗೆ ಮಾಡಿದ ಅವಮಾನ ಎಂದು ಕೆಲ ನೆಟ್ಟಿಗರು ಟ್ವಿಟರ್ನಲ್ಲಿ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಆಡದ ಬಗ್ಗೆ ಮಾಹಿತಿ ನೀಡಿದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ, “ನಿಸ್ಸಂಶಯವಾಗಿ ಕೊಹ್ಲಿ ಮತ್ತು ರೋಹಿತ್ ಭಾರತ ತಂಡದ ಅವಿಭಾಜ್ಯ ಅಂಗ. ಆದರೆ ವಿಶ್ವ ಕಪ್ ಟೂರ್ನಿಯ ದೃಷ್ಟಿಯಲ್ಲಿ ಯುವ ಆಟಗಾರರ ಪ್ರದರ್ಶನವನ್ನು ಪರಿಶೀಲಿಸಲು ಈ ಸರಣಿಯಲ್ಲಿ ಗಾಯಕ್ವಾಡ್ ಸೇರಿ ಕೆಲ ಆಟಗಾರರಿಗೆ ಅವಕಾಶ ನೀಡಲಾಯಿತು. ಹೀಗಾಗಿ ಹಿರಿಯ ಆಟಗಾರರು ಅವರಿಗೆ ಜಾಗ ಬಿಟ್ಟುಕೊಟ್ಟರು” ಎಂದರು.
ಇದನ್ನೂ ಓದಿ Virat Kohli : ಕೊಹ್ಲಿಗೆ ಹ್ಯಾಂಡ್ಮೇಡ್ ಬ್ರೇಸ್ಲೆಟ್ ನೀಡಿದ ಪುಟ್ಟ ಬಾಲಕಿ, ಕೊಹ್ಲಿ ರಿಯಾಕ್ಷನ್ ಹೀಗಿತ್ತು ನೋಡಿ
Glimpses of Virat Kohli on field First and Last time this month. Will have to wait for one month to see him playing 🥲 pic.twitter.com/o5KhccskGu
— Pari (@BluntIndianGal) August 1, 2023
“ವಿರಾಟ್ ಕೊಹ್ಲಿ ಅವರು ಬದಲಿ ಆಟಗಾರನಾಗಿ ಬಂದು ನನಗೆ ಕೆಲವು ಸಲಹೆಗಳನ್ನು ನೀಡಿದರು. ಈ ಸರಣಿಯಲ್ಲಿ ಯುವ ಆಟಗಾರರಿಗೆ ಕೋಚ್ ಜತೆ ರೋಹಿತ್ ಮತ್ತು ವಿರಾಟ್ ಅವರು ಎಲ್ಲ ಯುವ ಆಟಗಾರರಿಗೆ ಬ್ಯಾಟಿಂಗ್ ಸಲಹೆ ನೀಡಿದ್ದಾರೆ. ಇದಕ್ಕಾಗಿ ನಾನು ವಿರಾಟ್ ಮತ್ತು ರೋಹಿತ್ಗೆ ಧನ್ಯವಾದ ಹೇಳುತ್ತೇನೆ,” ಎಂದು ಹಾರ್ದಿಕ್ ತಿಳಿಸಿದರು.