Site icon Vistara News

Virat Kohli: ಅಲಿಬಾಗ್​ನಲ್ಲಿ ವಿಲ್ಲಾ ಖರೀದಿಸಿದ ವಿರಾಟ್​ ಕೊಹ್ಲಿ; ಇದರ ಬೆಲೆ ಎಷ್ಟು?

Virat Kohli: Virat Kohli bought a villa in Alibaug; How much does it cost?

Virat Kohli: Virat Kohli bought a villa in Alibaug; How much does it cost?

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಮುಂಬಯಿಯ ಅಲಿಬಾಗ್​ನಲ್ಲಿ ಐಶಾರಾಮಿ ವಿಲ್ಲಾವೊಂದನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಈಗಾಗಲೇ ಮುಂಬೈಯಲ್ಲಿ ಪತ್ನಿ ಅನುಷ್ಕಾ ಶರ್ಮ ಮತ್ತು ಪುತ್ರಿಯೊಂದಿಗೆ ವಾಸವಿರುವ ವಿರಾಟ್​ ಕೊಹ್ಲಿ ಇದೀಗ ಮತ್ತೊಂದು ವಿಲ್ಲಾವನ್ನು ಖರೀದಿ ಮಾಡಿದ್ದಾರೆ. ಈ ವಿಲ್ಲಾದ ಬೆಲೆ 6 ಕೋಟಿ. ರೂ ಎಂದು ವರದಿಯಾಗಿದೆ.

ಅವಾಸ್ ಲಿವಿಂಗ್‌ನಲ್ಲಿರುವ ಈ ವಿಲ್ಲಾ 2 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದ್ದು, 400 ಚದರ ಅಡಿ ಅಳತೆಯ ದೊಡ್ಡ ಈಜುಕೊಳವನ್ನು ಒಳಗೊಂಡಿದೆ. ಇನ್ನು ಈ ಹೊಸ ವಿಲ್ಲಾದ ನೋಂದಣಿ ಶುಲ್ಕಕ್ಕಾಗಿ ಕೊಹ್ಲಿ 36 ಲಕ್ಷ ರೂ. ಪಾವತಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ Virat Kohli: ವಿರಾಟ್​ ಕೊಹ್ಲಿಗೆ ಲಿಪ್​ ಕಿಸ್​ ನೀಡಿದ ಯುವತಿ; ವಿಡಿಯೊ ವೈರಲ್​

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಲಿಬಾಗ್‌ನಲ್ಲಿಯೇ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸುಮಾರು 19.24 ಕೋಟಿ ರೂಪಾಯಿ ಖರ್ಚು ಮಾಡಿ ಫಾರ್ಮ್ ಹೌಸ್ ಖರೀದಿಸಿದ್ದರು. ಇದೀಗ ಇದೇ ಪ್ರದೇಶದಲ್ಲಿ ಐಶಾರಾಮಿ ವಿಲ್ಲಾವನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

Exit mobile version