ತಿರುವನಂತಪುರ: ಶ್ರೀಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ 5ನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ತಿರುವನಂತಪುರದ ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 63 ರನ್ಗಳಿಸಿದ ವೇಳೆ ಈ ಸಾಧನೆ ಮಾಡಿದರು. ಇದರೊಂದಿಗೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ(12,650) ಅವರ ದಾಖಲೆಯನ್ನು ಮುರಿದರು.
ಈ ಯಾದಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಆ ನಂತರದ ನಾಲ್ಕು ಸ್ಥಾನದಲ್ಲಿರುವ ಆಟಗಾರರೆಂದರೆ ಕುಮಾರ ಸಂಗಕ್ಕರ, ರಿಕಿ ಪಾಂಟಿಂಗ್, ಸನತ್ ಜಯಸೂರ್ಯ ಕಾಣಿಸಿಕೊಂಡಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ(100) ಅಜೇಯ ಶತಕ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇದು ವಿರಾಟ್ ಕೊಹ್ಲಿಯ 46ನೇ ಏಕದಿನ ಶತಕವಾಗಿದೆ. ಒಟ್ಟಾರೆ ಇದು ಅವರ 74ನೇ ಅಂತಾರಾಷ್ಟ್ರೀಯ ಶತಕವಾಗಿದೆ.
ಅತಿ ಹೆಚ್ಚು ಏಕದಿನ ರನ್ ಗಳಿಸಿದ 5 ಆಟಗಾರರು
ಆಟಗಾರ | ಇನಿಂಗ್ಸ್ | ರನ್ |
ಸಚಿನ್ ತೆಂಡೂಲ್ಕರ್ | 452 | 18426 |
ಕುಮಾರ ಸಂಗಕ್ಕರ | 380 | 14234 |
ರಿಕಿ ಪಾಂಟಿಂಗ್ | 365 | 13704 |
ಸನತ್ ಜಯಸೂರ್ಯ | 433 | 13430 |
ವಿರಾಟ್ ಕೊಹ್ಲಿ | 259 | 12652* |
ಇದನ್ನೂ ಓದಿ | Ravindra Jadeja | ಫಿಟ್ನೆಸ್ಗಾಗಿ ರಣಜಿ ಆಡಲು ಮುಂದಾದ ಆಲ್ರೌಂಡರ್ ರವೀಂದ್ರ ಜಡೇಜಾ!