ತಿರುವನಂತಪುರ: ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಶತಕ ಸಿಡಿಸುವ ಮೂಲಕ ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.
ತಿರುವನಂತಪುರದ ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಭರ್ಜರಿ ಶತಕ ಬಾರಿಸಿ ಮಿಂಚಿದರು. ಇದೇ ವೇಳೆ ಅವರು ಸಚಿನ್ ತೆಂಡೂಲ್ಕರ್(ತವರಿನಲ್ಲಿ 20 ಶತಕ) ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ತವರಿನಲ್ಲಿ ಅತ್ಯಧಿಕ ಶತಕ ಬಾರಿಸಿದ ಟೀಮ್ ಇಂಡಿಯಾದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಕೊಹ್ಲಿ ಈ ಶತಕದೊಂದಿಗೆ ತವರಿನಲ್ಲಿ 21 ಶತಕ ಬಾರಿಸಿದ ಸಾಧನೆ ಮಾಡಿದರು.
ಈ ಪಂದ್ಯದಲ್ಲಿ ಕೊಹ್ಲಿ ಒಟ್ಟು 110 ಎಸೆತ ಎದುರಿಸಿ ಅಜೇಯ 166 ರನ್ ಸಿಡಿಸಿದರು. ಈ ಮನಮೋಹಕ ಇನಿಂಗ್ಸ್ ವೇಳೆ 8 ಸಿಕ್ಸರ್ ಮತ್ತು 13 ಬೌಂಡರಿ ಸಿಡಿಸಿದರು. ಜತೆಗೆ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 46ನೇ ಶತಕ ಪೂರೈಸಿದರು. ಒಟ್ಟಾರೆ ಇದು ಕೊಹ್ಲಿ 74ನೇ ಅಂತಾರಾಷ್ಟ್ರೀಯ ಶತಕವಾಗಿದೆ.
ಇದನ್ನೂ ಓದಿ | Virat Kohli | ಮಹೇಲ ಜಯವರ್ಧನೆ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ!