Site icon Vistara News

Virat Kohli | ವಿಶ್ರಾಂತಿಯ ಅವಧಿಯನ್ನು ಚಾರಿಟಿ ಕೆಲಸಕ್ಕೆ ಮೀಸಲಿಟ್ಟ ವಿರಾಟ್​ ಕೊಹ್ಲಿ

virat

ಮುಂಬಯಿ: ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿರುವ ವಿರಾಟ್​ ಕೊಹ್ಲಿ(Virat Kohli) ತಮ್ಮ ಬಿಡುವಿನ ಸಮಯವನ್ನು ಸಮಾಜಸೇವೆಗೆ ಮುಡಿಪಾಗಿರಿಸಿದ್ದಾರೆ. ಚಾರಿಟಿ ಉದ್ದೇಶಕ್ಕಾಗಿ ಹರಾಜಾಗುವ ತನ್ನ ವಸ್ತುಗಳ ಮೇಲೆ ಸಹಿ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.

ವಿರಾಟ್​ ಕೊಹ್ಲಿ ಮುಂಬರುವ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಸಜ್ಜಾಗುತ್ತಿದ್ದು. ಜತೆಗೆ ಚಾರಿಟಿಗಾಗಿ ತನ್ನ ವಸ್ತುಗಳ ಮೇಲೆ ಸಹಿ ಹಾಕುವ ಮೂಲಕ ಚಾರಿಟಿ ಉದ್ದೇಶಕ್ಕಾಗಿ ಹರಾಜಿಗೆ ಕಳುಹಿಸಿಕೊಡುತ್ತಿದ್ದಾರೆ. ಇಲ್ಲಿ ಹರಾಜಾದ ವಸ್ತುಗಳ ಮೊತ್ತವನ್ನು ಹಲವು ಬಡ ಮಕ್ಕಳ ಚಿಕಿತ್ಸೆ ಹಾಗೂ ಇನ್ನಿತರ ಸಮಾಜಪರ ಕಾರ್ಯಕ್ಕೆ ಬಳಸಲಾಗುತ್ತದೆ.

ಬೇರೆ ಆಟಗಾರರಂತೆ ಕೇವಲ ವಿಶ್ರಾಂತಿ ಪಡೆದು ಸಮಯ ಕಳೆಯದ ವಿರಾಟ್ ಕೊಹ್ಲಿ, ಸಾಮಾಜಿಕ ಕೆಲಸ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತನ್ನ ವಸ್ತುಗಳನ್ನು ಹರಾಜಿಗೆ ಕಳುಹಿಸಿಕೊಡಲು ವಿರಾಟ್ ತನ್ನ ಹಸ್ತಾಕ್ಷರ ನೀಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಿಂಗ್ ಕೊಹ್ಲಿ ಅನೇಕ ಜನರ ಹೃದಯ ಗೆದ್ದಿದ್ದಾರೆ. ಕೇವಲ ಮೈದಾನದ ಒಳಗಷ್ಟೇ ನೆರವಾಗದ ವಿರಾಟ್, ಆಫ್‌ ದಿ ಫೀಲ್ಡ್‌ನಲ್ಲೂ ಕೂಡ ತನ್ನ ಕೊಡುಗೆ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಕೊಹ್ಲಿಯ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | IND VS NZ | ವಾಷಿಂಗ್ಟನ್‌ ಸುಂದರ್‌ ಹೊಡೆತಕ್ಕೆ ಮನಸೋತ ಪ್ರೈಮ್‌ ವಿಡಿಯೊ

Exit mobile version