ಮುಂಬಯಿ: ಇಂಗ್ಲೆಂಡ್(india vs england test series) ವಿರುದ್ಧದ ಅಂತಿಮ ಮೂರು ಪಂದ್ಯಗಳಿಗೆ ಭಾರತ ತಂಡ ಇನ್ನೂ ಪ್ರಕಟಗೊಂಡಿಲ್ಲ. ಇಂದು ಅಥವಾ ನಾಳೆ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದರೆ, ವಿರಾಟ್ ಕೊಹ್ಲಿ(Virat Kohli) 3ನೇ ಮತ್ತು ನಾಲ್ಕನೇ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ(BCCI) ಮೂಲವೊಂದು ತಿಳಿಸಿದೆ.
ಭಾರತ ತನ್ನ ಕೊನೆಯ ಪಂದ್ಯವನ್ನು ಧರ್ಮಶಾಲಾದಲ್ಲಿ ಮಾರ್ಚ್ 7ರಿಂದ 11ರ ತನಕ ಆಡಲಿದೆ. ಈ ಪಂದ್ಯಕ್ಕೆ ಇನ್ನೂ ಒಂದು ತಿಂಗಳುಗಳ ಕಾಲಾವಕಾಶವಿದೆ. ಆದರೂ ಕೂಡ ಈ ಪಂದ್ಯಕ್ಕೆ ಕೊಹ್ಲಿ ಲಭ್ಯತೆ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ ಎಂದು ಬಿಸಿಸಿಐ ಮಂಡಳಿ ಮೂಲಗಳು ತಿಳಿಸಿದೆ. ಈ ಹೇಳಿಕೆ ಗಮನಿಸುವಾಗ ಕೊಹ್ಲಿ ಇಡೀ ಸರಣಿಯನ್ನೇ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬುದನ್ನು ಬಿಟ್ಟು ಬೇರೆ ಯಾವ ಕಾರಣಕ್ಕೆ ಕೊಹ್ಲಿ ಸರಣಿಗೆ ಗೈರಾಗಿದ್ದಾರೆ ಎಂಬುದು ಈವರೆಗೆ ಅಧಿಕೃತವಾಗಿ ತಿಳಿದು ಬಂದಿಲ್ಲ. ಕೆಲ ದಿನಗಳ ಹಿಂದೆ ಪಾಕಿಸ್ತಾನದ ಕೆಲ ಮಾಧ್ಯಮಗಳು ವಿರಾಟ್ ಕೊಹ್ಲಿ ತಾಯಿ ಅಸೌಖ್ಯದಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿತ್ತು. ಆದರೆ ಕೊಹ್ಲಿಯ ಸಹೋದರ ಈ ವದಂತಿಯನ್ನು ತಳ್ಳಿ ಹಾಕಿದ್ದರು. ತಾಯಿ ಆರೋಗ್ಯವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದರು.
ವಿರಾಟ್ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರ ಆಗಮನ ಆ ತಂಡದ ಬಲವನ್ನು ಸುಧಾರಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಭಾರತೀಯ ಕ್ರಿಕೆಟ್ನಲ್ಲಿ ಆಳದಲ್ಲಿ ಹಲವಾರು ಪ್ರತಿಭೆಗಳಿವೆ. ಆದ್ದರಿಂದ ನಾವು ಎದುರಾಳಿ ತಂಡದ ಪ್ರತಿಯೊಬ್ಬ ಆಟಗಾರನನ್ನು ಗೌರವಿಸುತ್ತೇವೆ ಎಂದು ಮೆಕಲಮ್ ಹೇಳಿದ್ದರು.
ಇದನ್ನೂ ಓದಿ ICC Test Rankings: ಮೊದಲ ಬಾರಿಗೆ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಬುಮ್ರಾ
ಪೂಮಾ ನಂಟು ಕೊನೆಗೊಳಿಸಲಿದ್ದಾರಾ ಕೊಹ್ಲಿ?
ಮೂಲವೊಂದರ ಪ್ರಕಾರ ವಿರಾಟ್ ಕೊಹ್ಲಿ, ಜನಪ್ರಿಯ ಕ್ರೀಡಾ ಆಕ್ಸೆಸರೀಸ್ ಬ್ರಾಂಡ್ ಪೂಮಾ ಇಂಡಿಯಾದೊಂದಿಗಿನ ದೀರ್ಘಕಾಲದ ಪಾಲುದಾರಿಕೆ ಕೊನೆಗೊಳಿಸುವ ಸಾಧ್ಯತೆಯಿದೆ. ಬ್ರಾಂಡ್ ನೊಂದಿಗೆ ಎಂಟು ವರ್ಷಗಳ ಒಡನಾಟದ ನಂತರ ಅವರು ನಿರ್ಗಮಿಸುವುದು ಅನೇಕರಿಗೆ ಆಶ್ಚರ್ಯದ ವಿಚಾರ. ಯಾಕೆಂದರೆ 2017 ರಲ್ಲಿ 110 ಕೋಟಿ ರೂ.ಗಳ ಒಪ್ಪಂದದೊಂದಿಗೆ ವಿರಾಟ್ ಕೊಹ್ಲಿಯ ಬ್ರಾಂಡ್ ನೊಂದಿಗಿನ ಸಂಬಂಧ ಪ್ರಾರಂಭವಾಗಿತತ್ತು. ಇದು ಭಾರತೀಯ ಕ್ರೀಡೆಗಳಲ್ಲಿ ಹೆಚ್ಚು ಚರ್ಚೆಗ ಒಳಗಾದ ದೊಡ್ಡ ಮೊತ್ತದ ಒಪ್ಪಂದವಾಗಿತ್ತು. ಅದನ್ನೂ ಈಗ ಕೊನೆಗೊಳಿಸುವ ಮೂಲಕ ಅವರು 110 ಕೋಟಿ ರೂಪಾಯಿ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಮತ್ತೆ ಅದು ಚರ್ಚೆಗೆ ಕಾರಣವಾಗಿದೆ.
ಕ್ರೀಡಾ ಪಾದರಕ್ಷೆಗಳ ತಯಾರಿಕೆಯ ಬ್ರಾಂಡ್ ಆಗಿರುವ ಅಗಿಲಿಟಾಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ನ ಅಂಬಾಸಿಡರ್ ಆಗಿ ವಿರಾಟ್ ಕೊಹ್ಲಿ ಹೊಸ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅಧಿಕೃತ ಹೇಳಿಕೆಗಳನ್ನು ಪೂಮಾ ಮತ್ತು ಅಗಿಲಿಟಾಸ್ ಸ್ಪೋರ್ಟ್ಸ್ ಎರಡೂ ಪ್ರಕಟಿಸಿಲ್ಲ ಎಂದು ವರದಿ ಹೇಳಿದೆ.