ಧರ್ಮಶಾಲಾ: ಭಾನುವಾರ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಹಲವು ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನು ಮುರಿದಿದ್ದಾರೆ. ಈ ಪಂದ್ಯದಲ್ಲಿ ಅವರು ಬಾರಿಸಿದ 95 ರನ್ ನೆರವಿನಿಂದ ಭಾರತ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಅತ್ಯುತ್ತಮ ಬ್ಯಾಟಿಂಗ್ ಮೂಲಕ ಗಮನಸೆಳೆದ ಕೊಹ್ಲಿ ಶ್ರೀಲಂಕಾ ದಿಗ್ಗಜ ಆಟಗಾರ ಸನತ್ ಜಯಸೂರ್ಯ(Sanath Jayasuriya) ಅವರ ದಾಖಲೆಯೊಂದನ್ನು ಪುಡಿಗಟ್ಟಿದ್ದಾರೆ.
ಕೊಹ್ಲಿ ಅವರು 95 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್(Most runs in ODIs) ಸಿಡಿಸಿದ ವಿಶ್ವದ 4ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಸನತ್ ಜಯಸೂರ್ಯ ಇದೀಗ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಯಸೂರ್ಯ 13430 ರನ್ ಸಿಡಿಸಿದ್ದರು. ಇದೀಗ ಕೊಹ್ಲಿ ಸದ್ಯ 13437* ರನ್ ಸಿಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಈ ಸಾಧಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ 18426 ರನ್ ಸಿಡಿಸಿದ್ದಾರೆ. 14234 ರನ್ ಬಾರಿಸಿರುವ ಲಂಕಾದ ಕುಮಾರ ಸಂಗಕ್ಕಾರ ದ್ವಿತೀಯ ಸ್ಥಾನದಲ್ಲಿದ್ದಾರೆ. 13704 ರನ್ ಬಾರಿಸಿರುವ ಆಸ್ಟ್ರೇಲಿಯಾದ 2 ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IND vs NZ: 2 ಕ್ಯಾಚ್ ಹಿಡಿದು ದಾಖಲೆ ಬರೆದ ಕಿಂಗ್ ಕೊಹ್ಲಿ; ದಿಗ್ಗಜ ಆಟಗಾರನ ದಾಖಲೆ ಉಡೀಸ್
WHAT. A. KNOCK 🫡👑
— BCCI (@BCCI) October 22, 2023
Virat Kohli departs after a marvellous 95(104) 👏👏#TeamIndia | #CWC23 | #MenInBlue | #INDvNZ pic.twitter.com/RxXFNTnGKE
ಪಾಂಟಿಂಗ್ ದಾಖಲೆ ಮೇಲೆ ಕಣ್ಣು
ವಿರಾಟ್ ಕೊಹ್ಲಿ ಅವರು ಇನ್ನು 267 ರನ್ ಬಾರಿಸಿದರೆ ರಿಕಿ ಪಾಂಟಿಂಗ್ ದಾಖಲೆ ಪತನಗೊಳ್ಳಲಿದೆ. 797 ರನ್ ಬಾರಿಸಿದರೆ ದ್ವಿತೀಯ ಸ್ಥಾನದಲ್ಲಿರುವ ಕುಮಾರ ಸಂಗಕ್ಕಾರ ದಾಖಲೆ ಮುರಿಯಲಿದ್ದಾರೆ. ಕೊಹ್ಲಿ ಅವರು ಕಿವೀಸ್ ವಿರುದ್ಧ 104 ಎಸೆತ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 95 ರನ್ ಗಳಿಸಿ ಮ್ಯಾಟ್ ಹೆನ್ರಿಗೆ ವಿಕೆಟ್ ಒಪ್ಪಿಸಿದರು. ಕೇವಲ 5 ರನ್ ಅಂತರದಲ್ಲಿ ಶತಕ ವಂಚಿತರಾದರು. ಒಂದೊಮ್ಮೆ ಕೊಹ್ಲಿ ಅವರು ಶತಕ ಬಾರಿಸುತ್ತಿದ್ದರೆ, ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಸರಿಗಟ್ಟುತ್ತಿದ್ದರು.
ಇದನ್ನೂ ಓದಿ Jasprit Bumrah: ವಿಶ್ವಕಪ್ನಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ
ಏಕದಿನದಲ್ಲಿ ಗರಿಷ್ಠ ರನ್ ಸಾಧಕರು
ಸಚಿನ್ ತೆಂಡೂಲ್ಕರ್ | 18426 ರನ್ |
ಕುಮಾರ ಸಂಗಕ್ಕಾರ | 14234 ರನ್ |
ರಿಕಿ ಪಾಂಟಿಂಗ್ | 13704 ರನ್ |
ವಿರಾಟ್ ಕೊಹ್ಲಿ | 13437* ರನ್ |
ಸನತ್ ಜಯಸೂರ್ಯ | 13430 ರನ್ |
ಕ್ಯಾಚ್ ಮೂಲಕವೂ ದಾಖಲೆ ಬರೆದ ಕೊಹ್ಲಿ
ಬ್ಯಾಟಿಂಗ್ ಮಾತ್ರವಲ್ಲದೆ ಕ್ಯಾಚ್ ಪಡೆಯುವುದರಲ್ಲಿಯೂ ಕೊಹ್ಲಿ ದಾಖಲೆ ಬರೆದಿದ್ದಾರೆ. ಸಾರಸ್ಯವೆಂದರೆ ಎರಡೂ ದಾಖಲೆಗಳನ್ನು ಬರೆದದ್ದು ಜಯಸೂರ್ಯ ಅವರ ದಾಖಲೆಯನ್ನು ಹಿಂದಿಕ್ಕಿಯೇ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಕಿವೀಸ್ ಆಟಗಾರ ಡೇರಿಯಲ್ ಮಿಚೆಲ್ ಮತ್ತು ಮಾರ್ಕ್ ಚಾಪ್ಮನ್ ಅವರ ಕ್ಯಾಚ್ ಹಿಡಿಯುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್(Most catches in World Cup) ಪಡೆದ ಸಾಧಕರ ಪಟ್ಟಿಯಲ್ಲಿ ಮೂರನೇ ಆಟಗಾರ ಎನಿಸಿಸಿದರು.
ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಮಾಜಿ ದಿಗ್ಗಜ ಸನತ್ ಜಯಸೂರ್ಯ ಅವರು ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಯಸೂರ್ಯ ಅವರು 18 ಕ್ಯಾಚ್ಗಳನ್ನು ಹಿಡಿದಿದ್ದರು. ಸದ್ಯ ಕೊಹ್ಲಿ 19* ಕ್ಯಾಚ್ಗಳನ್ನು ಪಡೆದಿದ್ದಾರೆ.