ಅಡಿಲೇಡ್: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಅಜೇಯ 64 ರನ್ ಗಳಿಸಿ ಟಿ20 ವಿಶ್ವ ಕಪ್ನಲ್ಲಿ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಬಾಂಗ್ಲಾ ವಿರುದ್ಧ 16 ರನ್ ಗಳಿಸಿದ ವೇಳೆ ಈ ದಾಖಲೆ ನಿರ್ಮಾಣವಾಯಿತು. ಇದರೊಂದಿಗೆ ಟಿ20 ವಿಶ್ವ ಕಪ್ನ ಟಾಪ್ ರನ್ ಸರದಾರನಾಗಿ ಕೊಹ್ಲಿ ಹೊರಹೊಮ್ಮಿದ್ದಾರೆ.
ಟಿ20 ವಿಶ್ವ ಕಪ್ ಇತಿಹಾಸದಲ್ಲಿ ಸಾವಿರ ರನ್ ಪೂರೈಸಿ ಮೊದಲ ಸ್ಥಾನದಲ್ಲಿದ್ದ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ದಾಖಲೆಯನ್ನು ಕೊಹ್ಲಿ ಮುರಿದರು. ಜಯವರ್ಧನೆ ಟಿ20 ವಿಶ್ವ ಕಪ್ನಲ್ಲಿ 31 ಇನಿಂಗ್ಸ್ ಮೂಲಕ ಒಟ್ಟು 1016 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ 23 ಟಿ20 ವಿಶ್ವ ಕಪ್ ಇನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ ಒಟ್ಟು 1065 ರನ್ ಕಲೆಹಾಕಿ ಜಯವರ್ಧನೆ ದಾಕಲೆ ಅಳಿಸಿದ್ದಾರೆ. ಜತೆಗೆ ಅತ್ಯಂತ ವೇಗವಾಗಿ ಸಾವಿರ ರನ್ ಪೂರೈಸಿದ ವಿಶ್ವ ದಾಖಲೆ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಿದೆ. ಜಯವರ್ಧನೆ 31 ಇನಿಂಗ್ಸ್ ಆಡಿದರೆ, ಕೊಹ್ಲಿ ಕೇವಲ 23 ಇನಿಂಗ್ಸ್ ಮೂಲಕ ಈ ವಿಶ್ವ ದಾಖಲೆ ಬರೆದಿರುವುದು ವಿಶೇಷ.
ಇದನ್ನೂ ಓದಿ |IND VS BANGLA | ಕೊಹ್ಲಿ, ರಾಹುಲ್ ಅರ್ಧಶತಕ; ಬಾಂಗ್ಲಾ ಗೆಲುವಿಗೆ 185 ರನ್ ಸವಾಲು