Site icon Vistara News

Virat Kohli: ಅಭಿಮಾನಿಯ ಕಲಾಕೃತಿಗೆ ಮನಸೋತ ವಿರಾಟ್​ ಕೊಹ್ಲಿ

Virat Kohli: Virat Kohli is heartbroken by a fan's artwork

Virat Kohli: Virat Kohli is heartbroken by a fan's artwork

ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿಗೆ(Virat Kohli) ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದೀಗ ಅವರ ಅಭಿಮಾನಿಯೊಬ್ಬ ಮಾಡಿದ ಪೇಂಟಿಂಗ್​ ಎಲ್ಲರ ಗಮನ ಸೆಳೆದಿದೆ. ಜತೆಗೆ ವಿರಾಟ್​ ಕೊಹ್ಲಿಯೂ ಅಭಿಮಾನಿಯ ಈ ಕಲಾಕೃತಿಯನ್ನು ತಮ್ಮ ಮೊಬೈಲ್​ನಲ್ಲಿ ಪ್ರದರ್ಶಿಸಿದ್ದಾರೆ.

ಈ ಕಲಾಕೃತಿಯಲ್ಲಿ ವಿರಾಟ್ ಕೊಹ್ಲಿ ಬಿಳಿ ಶರ್ಟ್ ಧರಿಸಿದ್ದಾರೆ. ಈ ಕಲಾಕೃತಿಯನ್ನು ರಂಬಲ್​ ಪ್ಯಾಂಟ್ಸ್​ ಟ್ವಿಟರ್​ ಖಾತೆಯಿಂದ ಶೆರ್​ ಮಾಡಲಾಗಿದೆ. ಸದ್ಯ ಈ ಪೋಸ್ಟ್​ 1.9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಎರಡು ಸಾವಿರ ಲೈಕ್ಸ್​ ಪಡೆದಿದೆ.

ಇದನ್ನೂ ಓದಿ Virat Kohli: ಧೋನಿ ನನ್ನ ಫೋನ್ ಕರೆಯನ್ನು ಸ್ವೀಕರಿಸಲ್ಲ; ಕೊಹ್ಲಿ ಹೀಗೆ ಹೇಳಲು ಕಾರಣ ಏನು?

ಈ ಕಲಾಕೃತಿಯನ್ನು ವಿರಾಟ್​ ಕೊಹ್ಲಿ ಅವರೂ ಶೇರ್​ ಮಾಡಿಕೊಂಡಿದ್ದು ಅಭಿಮಾನಿಯ ಈ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯ ಮೂರನೇ ಪಂದ್ಯಕ್ಕಾಗಿ ಇಂದೋರ್​ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯ ಮಾರ್ಚ್​ 1ರಿಂದ ಹೋಳ್ಕರ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ.

Exit mobile version