Site icon Vistara News

Virat Kohli | ದಕ್ಷಿಣ ಆಫ್ರಿಕಾ ವಿರುದ್ಧ 12 ರನ್​ ಗಳಿಸಿದರೂ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್​ ಕೊಹ್ಲಿ

t20

ಪರ್ತ್​: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಕೇವಲ 12 ರನ್​ಗಳಿಸಿ ಔಟಾದರೂ ಟಿ20 ವಿಶ್ವ ಕಪ್​ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಟಿ20 ವಿಶ್ವ ಕಪ್​ನಲ್ಲಿ ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಕಿಂಗ್ ಕೊಹ್ಲಿ ಬರೆದಿದ್ದಾರೆ.

ಈ ದಾಖಲೆಯ ಹೊರತಾಗಿಯೂ ಮತ್ತೊಂದು ದಾಖಲೆಯನ್ನು ಕೊಹ್ಲಿ ತಮ್ಮ ಹೆಸರಿಗೆ ಸೇರಿಸಿಕೊಂಡಿರುವುದು ವಿಶೇಷ. ಟಿ20 ವಿಶ್ವ ಕಪ್​ ಇತಿಹಾಸದಲ್ಲಿ ಸಾವಿರ ರನ್ ಪೂರೈಸಿದ ದ್ವಿತೀಯ ಆಟಗಾರನಾಗಿ ಮೂಡಿಬಂದರು. ಇದಕ್ಕೂ ಮುನ್ನ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಈ ಸಾಧನೆ ಮಾಡಿದ್ದರು. ಜಯವರ್ಧನೆ ಟಿ20 ವಿಶ್ವ ಕಪ್​ನಲ್ಲಿ 31 ಇನಿಂಗ್ಸ್ ಮೂಲಕ ಒಟ್ಟು 1016 ರನ್​ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ 22 ಟಿ20 ವಿಶ್ವ ಕಪ್ ಇನಿಂಗ್ಸ್​ ಮೂಲಕ ವಿರಾಟ್ ಕೊಹ್ಲಿ ಒಟ್ಟು 1001 ರನ್​ ಕಲೆಹಾಕಿದ್ದಾರೆ. ಆದರೆ ಅತ್ಯಂತ ವೇಗವಾಗಿ ಸಾವಿರ ರನ್ ಪೂರೈಸಿದ ವಿಶ್ವ ದಾಖಲೆ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಿದೆ. ಜಯವರ್ಧನೆ 31 ಇನಿಂಗ್ಸ್​ ಆಡಿದರೆ, ಕೊಹ್ಲಿ ಕೇವಲ 22 ಇನಿಂಗ್ಸ್ ಮೂಲಕ ಈ ವಿಶ್ವ ದಾಖಲೆ ಬರೆದಿರುವುದು ವಿಶೇಷ.

ಕೊಹ್ಲಿಗಿದೆ ಜಯವರ್ಧನೆ ದಾಖಲೆ ಮುರಿಯುವ ಅವಕಾಶ

ಮುಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 16 ರನ್​ ಬಾರಿಸಿದರೆ ಮಹೇಲ ಜಯವರ್ಧನೆ ಹೆಸರಿನಲ್ಲಿರುವ ವಿಶ್ವ ದಾಖಲೆ ಮುರಿಯುವ ಅವಕಾಶವಿದೆ. ಒಂದೊಮ್ಮೆ ಕೊಹ್ಲಿ ಈ ರನ್​ ಬಾರಿಸಿದರೆ ಟಿ20 ವಿಶ್ವ ಕಪ್​ನ ಟಾಪ್ ರನ್ ಸರದಾರನಾಗಿ ಹೊರಹೊಮ್ಮಲಿದ್ದಾರೆ.

ಇದನ್ನೂ ಓದಿ | IND VS SA | ರಿಷಭ್‌ ಪಂತ್‌ಗೆ ಗುಡ್‌ ನ್ಯೂಸ್‌, ಭಾರತ ತಂಡಕ್ಕೆ ಬ್ಯಾಡ್‌ ನ್ಯೂಸ್‌; ಏನಾಯಿತು?

Exit mobile version