Site icon Vistara News

Virat kohli: ನೆಚ್ಚಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ

virat kohli practice

ಬೆಂಗಳೂರು: ಅಫಘಾನಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ನಾಳೆ ನಡೆಯುವ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ(India vs Afghanistan, 3rd T20I) ವಿರಾಟ್​ ಕೊಹ್ಲಿ(Virat kohli) ದಾಖಲೆಯೊಂದನ್ನು ಬರೆಯುವ ಇರಾದೆಯಲ್ಲಿದ್ದಾರೆ. ಈ ದಾಖಲೆ ನಿರ್ಮಿಸಲು ಕೊಹ್ಲಿಗೆ ಕೇವಲ 12 ಎಸೆತಗಳ ಅವಶ್ಯಕತೆ ಇದೆ.

ಹೌದು, ಕೊಹ್ಲಿ ನಾಳಿನ ಪಂದ್ಯದಲ್ಲಿ 12 ಎಸೆತಗಳನ್ನು ಎದುರಿಸಿದರೆ, ಟಿ20 ಕ್ರಿಕೆಟ್​ನಲ್ಲಿ 9 ಸಾವಿರ ಎಸೆತಗಳನ್ನು ಎದುರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜತೆಗೆ ಈ ದಾಖಲೆ ಮಾಡಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 8972 ಎಸೆತಗಳನ್ನು ಎದುರಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆ ಪಾಕಿಸ್ತಾನ ಮಾಜಿ ಆಟಗಾರ ಶೋಯೆಬ್​ ಮಲಿಕ್​ ಹೆಸರಿನಲ್ಲಿದೆ. ಮಲಿಕ್​ 10168 ಎಸೆತಗಳನ್ನು ಎದುರಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ವೆಸ್ಟ್​ ಇಂಡೀಸ್​ನ ಕ್ರೀಸ್​ ಗೇಲ್ ಕಾಣಿಸಿಕೊಂಡಿದ್ದಾರೆ. ಅವರು 10060 ಎಸೆತಗಳನ್ನು ಎದುರಿಸಿದ್ದಾರೆ.

6 ರನ್​ ಗಳಿಸಿದರೂ ದಾಖಲೆ


ಎಸೆತಗಳ ದಾಖಲೆ ಮಾತ್ರವಲ್ಲದೆ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಕೇವಲ 6 ರನ್​ ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳನ್ನು ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಹಾಗೂ ವಿಶ್ವದ 4ನೇ ಬ್ಯಾಟರ್​ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 11994* ರನ್​ ಗಳಿಸಿದ್ದಾರೆ. ಇದರಲ್ಲಿ 4037* ರನ್​ ಅಂತಾರಾಷ್ಟ್ರೀಯ ಟಿ20ಯಲ್ಲಿ ದಾಖಲಾಗಿದೆ. ಉಳಿದ ರನ್​ ಐಪಿಎಲ್​ನಲ್ಲಿ ಗಳಿಸಿದ್ದಾಗಿದೆ.

ಇದನ್ನೂ ಓದಿ IND vs AFG 3rd T20: ಮೂರನೇ ಟಿ20ಗೆ ಟೀಮ್​ ಇಂಡಿಯಾದಲ್ಲಿ ಮೂರು ಬದಲಾವಣೆ

ಅರ್ಧಶತಕ ಬಾರಿಸಿದರೂ ದಾಖಲೆ…


ಆಫ್ಘನ್​ ಎದುರು ಕೊಹ್ಲಿ ಅರ್ಧಶತಕ ಬಾರಿಸಿದರೆ ಟಿ20 ಕ್ರಿಕೆಟ್​ನಲ್ಲಿ ಟಿ20 ಕ್ರಿಕೆಟ್​ನಲ್ಲಿ 100 ಬಾರಿ 50+ ಸ್ಕೋರ್​ಗಳಿಸಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ದಾಖಲೆ ವೆಸ್ಟ್​ ಇಂಡೀಸ್​ ತಂಡದ ಮಾಜಿ ಆಟಗಾರ, ಯುನಿವರ್ಸ್​ ಬಾಸ್​ ಖ್ಯಾತಿಯ ಕ್ರಿಸ್​ ಗೇಲ್​ ಹೆಸರಿನಲ್ಲಿದೆ. ಗೇಲ್​ 110 ಬಾರಿ ಈ ಸಾಧನೆ ಮಾಡಿದ್ದಾರೆ. ಗೇಲ್​ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಕಾಣಿಸಿಕೊಂಡಿದ್ದಾರೆ. ವಾರ್ನರ್​ 107 ಬಾರಿ 50+ ಸ್ಕೋರ್​ಗಳಿದ್ದಾರೆ.

ವಿರಾಟ್​ ಕೊಹ್ಲಿ ಸದ್ಯ ಬೆಂಗಳೂರಿನಲ್ಲಿದ್ದು ನಾಳೆ (ಬುಧವಾರ) ನಡೆಯುವ ಅಫಘಾನಿಸ್ತಾನ ಎದುರಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇಂದೋರ್​ನಲ್ಲಿ ನಡೆದಿದ್ದ ದ್ವಿತೀಯ ಪಂದ್ಯದಲ್ಲಿ ಆಡುವ ಮೂಲಕ ಕೊಹ್ಲಿ 14 ತಿಂಗಳ ಬಳಿಕ ಟಿ20 ಕ್ರಿಕೆಟ್​ಗೆ ಮರಳಿದ್ದರು. ಈ ಪಂದ್ಯದಲ್ಲಿ ಕೊಹ್ಲಿ 16 ಎಸೆತಗಳಿಂದ 29 ರನ್​ ಬಾರಿಸಿದ್ದರು. ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವ ಕೊಹ್ಲಿಗೆ ಚಿನ್ನಸ್ವಾಮಿ ಮೈದಾನ ಹೋಮ್​ ಗ್ರೌಂಡ್​ ಆಗಿದೆ. ಹೀಗಾಗಿ ಅವರು ಮೂರನೇ ಪಂದ್ಯದಲ್ಲಿ ಸಿಡಿಯುವ ಸಾಧ್ಯತೆ ಇದೆ. ಜತೆಗೆ ಅವರಿಗೆ ಈ ಪಂದ್ಯದಲ್ಲಿ ಹಲವು ದಾಖಲೆಯನ್ನು ಬರೆಯುವ ಅವಕಾಶವಿದೆ.

ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ವಿರಾಟ್ ಕೊಹ್ಲಿಗೆ ಆಹ್ವಾನ


ವಿರಾಟ್​ ಕೊಹ್ಲಿ(Virat Kohli) ಮತ್ತು ಅವರ ಪತ್ನಿ ಬಾಲಿವುಡ್​ ನಟಿ ಅನುಷ್ಕಾ ಶರ್ಮ ಅವರಿಗೂ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ನೀಡಲಾಗಿದೆ. ವಿರುಷ್ಕಾ ದಂಪತಿ ಈ ಆಹ್ವಾನವನ್ನು ಸಂತಸದಿಂದಲೇ ಸ್ವೀಕರಿಸಿದ್ದು ಜನವರಿ 22ರಂದು ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

Exit mobile version