ಲಾಹೋರ್: ಟಿ20 ವಿಶ್ವ ಕಪ್ನಲ್ಲಿ ಭಾನುವಾರ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ(Virat Kohli) ತೋರಿದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಇಡೀ ಜಗತ್ತೇ ಬೆರಗಾಗಿದೆ. ಅಸಾಧ್ಯವಾದುದನ್ನು ತಮ್ಮ ಬ್ಯಾಟಿಂಗ್ ಮೂಲಕ ಸಾಧ್ಯ ಎಂದು ತೋರಿಸಿಕೊಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ. ಕೊಹ್ಲಿಯ ಈ ಬ್ಯಾಟಿಂಗ್ ಸಾಹಸಕ್ಕೆ ಹಲವು ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಈ ಸಾಲಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಸೇರಿದ್ದಾರೆ.
ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಅಖ್ತರ್, ಪಾಕಿಸ್ತಾನ ವಿರುದ್ಧ ಕಿಂಗ್ ಕೊಹ್ಲಿ ಆಡಿದ ಇನಿಂಗ್ಸ್ ಅವರ ಕ್ರಿಕೆಟ್ ವೃತ್ತಿಜೀವನದ ದೊಡ್ಡ ಇನಿಂಗ್ಸ್ ಇದಾಗಿದೆ. ಕಿರಿಯ ಆಟಗಾರರು ನಾಚುವಂತೆ ಕೊಹ್ಲಿ ಬ್ಯಾಟ್ ಬೀಸಿದ್ದಾರೆ. ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ, ಕಳೆದ ಕೆಲ ವರ್ಷಗಳಲ್ಲಿ ಬ್ಯಾಟಿಂಗ್ ಬರ ಅನುಭವಿಸಿದ್ದರೂ ಇದೀಗ ಮತ್ತೆ ಬ್ಯಾಟಿಂಗ್ ಲಯ ಕಂಡುಕೊಂಡಿರುವುದು ಸಂತಸದ ಸಂಗತಿ ಎಂದು ಅಖ್ತರ್ ಹೇಳಿದ್ದಾರೆ.
ಕೊಹ್ಲಿ ನಿವೃತ್ತಿಯಾಗಲಿ
ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಗುಣಗಾಣ ಮಾಡಿದ ಅಖ್ತರ್ ಬಳಿಕ ಕೊಹ್ಲಿ 20 ಕ್ರಿಕೆಟ್ನಿಂದ ನಿವೃತ್ತಿಯಾಗಬೇಕೆಂದು ಹೇಳಿದ್ದಾರೆ. ಕೊಹ್ಲಿ 20 ಕ್ರಿಕೆಟ್ನಲ್ಲಿ ಬಳಸುವ ಶಕ್ತಿಯನ್ನು ಏಕದಿನ ಮಾದರಿಯಲ್ಲಿ ಬಳಸಬೇಕು. ಆ ಮೂಲಕ ಅವರ ಬ್ಯಾಟ್ನಿಂದ ಹಲವು ಶತಕಗಳು ಹರಿದು ಬರಲಿ ಎಂದು ತಿಳಿಸಿದ್ದಾರೆ. ಜತೆಗೆ ಪಾಕಿಸ್ತಾನ ಮತ್ತು ಭಾರತ ಪಂದ್ಯದಿಂದಲೇ ನಿಜವಾದ ಟಿ20 ವಿಶ್ವ ಕಪ್ ಹಬ್ಬ ಆರಂಭವಾಗಿದೆ. ಅದರಂತೆ ಮುಂದೆಯೂ ಭಾರತ ಮತ್ತು ಪಾಕ್ ಮತ್ತೊಮ್ಮೆ ಎದುರಾಗಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ | virat kohli | ಕೊಹ್ಲಿ ಇನಿಂಗ್ಸ್ನಿಂದ ಜೀವನ ಪಾಠ ಕಲಿಯಬೇಕು; ಐಎಎಸ್ ಅಧಿಕಾರಿ ಅವನೀಶ್ ಕಿವಿಮಾತು