Site icon Vistara News

Virat Kohli: ಪಠಾಣ್‌ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್

Virat Kohli has made a special achievement on Indian soil

#image_title

ನಾಗ್ಪುರ: ಬಾರ್ಡರ್-ಗವಾಸ್ಕರ್ ಟ್ರೋಫಿ(border gavaskar trophy) ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ರೋಹಿತ್ ಶರ್ಮಾ ಬಳಗವು ಇನಿಂಗ್ಸ್​ ಮತ್ತು 132 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಆದರೆ ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಪಠಾಣ್‌(Pathaan) ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೂರನೇ ದಿನ(ಶನಿವಾರ ಫೆ. 11) ಭಾರತ 400 ರನ್​ಗಳಿಗೆ ಆಲೌಟ್​ ಆಗಿ ಮೊದಲ ಇನಿಂಗ್ಸ್​ ಆಟ ಕೊನೆಗೊಳಿಸಿತು. ಬಳಿಕ ಆಸ್ಟ್ರೇಲಿಯಾ ತಂಡ ಎರಡನೇ ಇನಿಂಗ್ಸ್​ ಆರಂಭಿಸಲು ಮುಂದಾದಾಗ ಭಾರತ ತಂಡ ಬೌಂಡರಿ ಲೈನ್ ಬಳಿ ಮೈದಾನ ಪ್ರವೇಶಿಸಲು ಕಾದು ನಿಂತಿತ್ತು. ಇದೇ ವೇಳೆ ವಿರಾಟ್​ ಕೊಹ್ಲಿ ಸಹ ಆಟಗಾರರೊಂದಿಗೆ ಮಾತನಾಡುತ್ತ ಶಾರೂಖ್​ ಖಾನ್​ ಅವರ ಪಠಾಣ್​ ಸಿನಿಮಾದ ಹಾಡಿಗೆ ಕುಣಿದಿದ್ದಾರೆ.

ಕೊಹ್ಲಿ ‘ಜುಮೆ ಜೋ ಪಠಾಣ್’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ತಾನು ಏನು ಕಮ್ಮಿಯಿಲ್ಲ ಎಂದು ಎರಡು ಸ್ಟೆಪ್ಸ್​ ಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ IND VS AUS: ಅಶ್ವಿನ್​ ಸ್ಪಿನ್​ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ​; ಭಾರತಕ್ಕೆ ಇನಿಂಗ್ಸ್​ ಹಾಗೂ 132 ರನ್​​ ಗೆಲುವು

ಕೊಹ್ಲಿ ನೃತ್ಯ ಮಾಡುತ್ತಿರುವ ಈ ವಿಡಿಯೊವನ್ನು ಅವರ ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಇದು ಕೊಹ್ಲಿ ಎಂದರೆ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರದಿದ್ದರೂ ಅವರ ಅಭಿಮಾನಿಗಳಿಗೆ ಏನಾದರೂ ವಿಶೇಷ ಶೈಲಿಯಲ್ಲಿ ಮನರಂಜಿಸುವುದರಲ್ಲಿ ಕಿಂಗ್​ ಕೊಹ್ಲಿ ಸಾದಾ ಮುಂದಿರುತ್ತಾರೆ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಕೊಹ್ಲಿಯ ಡ್ಯಾನ್ಸ್​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

Exit mobile version