Site icon Vistara News

Virat Kohli | ಮಂಜ್ರೇಕರ್​ ಭವಿಷ್ಯ ನುಡಿದ ಕೆಲವೇ ಗಂಟೆಗಳಲ್ಲಿ ಶತಕ ಬಾರಿಸಿ ಮಿಂಚಿದ ವಿರಾಟ್​ ಕೊಹ್ಲಿ!

sanjay manjrekar

ಗುವಾಹಟಿ: ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ವಿರಾಟ್ ಕೊಹ್ಲಿ ಬಗ್ಗೆ ನುಡಿದ ಭವಿಷ್ಯವೊಂದು ಇದೀಗ ನಿಜವಾದಂತಿದೆ. 2023ರಲ್ಲಿ ವಿರಾಟ್​ ಕೊಹ್ಲಿ ಶ್ರೇಷ್ಠ ಪ್ರದರ್ಶನ ತೋರಲಿದ್ದಾರೆ. ಈ ವರ್ಷ ಕೊಹ್ಲಿ ಅವರದ್ದಾಗಲಿದೆ ಎಂದು ಭವಿಷ್ಯ ನುಡಿದಿದ್ದರು.

ಇದೀಗ ಮಂಜ್ರೇಕರ್​ ಅವರು ಭವಿಷ್ಯ ನುಡಿದ ಕೆಲವೇ ಗಂಟೆಗಳಲ್ಲಿ ವಿರಾಟ್​ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಪಂದ್ಯಕ್ಕೂ ಮುನ್ನ ಮಂಜ್ರೇಕರ್​ ಹೇಳಿದ ಮಾತು ಇದೀಗ ಎಲ್ಲಡೆ ವೈರಲ್​ ಆಗಿದೆ. ಕೊಹ್ಲಿ ಅಭಿಮಾನಿಗಳು ನಿಮ್ಮ ಭವಿಷ್ಯ ನಿಜವಾಗಿದೆ ಎಂದು ಮಂಜ್ರೇಕರ್ ಅವರನ್ನು ಹಾಡಿ ಹೊಗಳಿದ್ದಾರೆ.

ಪಂದ್ಯಕ್ಕೂ ಮುನ್ನ ಮಂಜ್ರೇಕರ್​ ಅವರು ಈ ವರ್ಷ ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ ಯಾವುದೇ ಒತ್ತಡವಿಲ್ಲದೆ ಆಡಲಿದ್ದಾರೆ. ಇದರಿಂದಾಗಿ ಅವರು ತಮ್ಮ ಅತ್ಯುನ್ನತ ಫಾರ್ಮ್ ಪ್ರದರ್ಶಿಸಲಿದ್ದಾರೆ. ಕಳೆದ ಕೆಲ ವರ್ಷ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದ ಕೊಹ್ಲಿ ಈ ವರ್ಷ ಎಲ್ಲ ದಾಖಲೆಯನ್ನು ಮರಿಯುವ ವಿಶ್ವಾಸವಿದೆ ಎಂದು ಹೇಳಿದ್ದರು.

ಮಂಜ್ರೇಕರ್​ ಭವಿಷ್ಯದಂತೆ ವಿರಾಟ್​ ವರ್ಷಾರಂಭದ ಮೊದಲ ಏಕದಿನ ಪಂದ್ಯದಲ್ಲೇ ಶತಕ ಬಾರಿಸುವ ಜತೆಗೆ ಹಲವು ದಾಖಲೆಯನ್ನು ಬರೆದಿದ್ದಾರೆ. ಮಂಜ್ರೇಕರ್​ ಭವಿಷ್ಯದಂತೆ ವಿರಾಟ್​ ಕೊಹ್ಲಿ ಮುಂದಿನ ಪಂದ್ಯಗಳಲ್ಲಿಯೂ ಶ್ರೇಷ್ಠ ಪ್ರದರ್ಶ ತೋರುವಂತಾಗಲಿ ಎನ್ನುವುದು ಕೊಹ್ಲಿ ಅಭಿಮಾನಿಗಳ ಆಶಯವಾಗಿದೆ. ಇನ್ನು ಕೊಹ್ಲಿ ಈ ಪಂದ್ಯದಲ್ಲಿ 87 ಎಸೆತ ಎದುರಿಸಿ 1 ಸಿಕ್ಸರ್​ ಮತ್ತು 12 ಬೌಂಡರಿ ನೆರವಿನಿಂದ 113 ರನ್​ ಬಾರಿಸಿದರು.

ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಶತಕ ಬಾರಿಸಿ ಸಚಿನ್​ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್​ ಕೊಹ್ಲಿ!

Exit mobile version