ಮುಂಬಯಿ: ವಿರಾಟ್ ಕೊಹ್ಲಿಯ (Virat Kohli) ಬ್ಯಾಟಿಂಗ್ ಪ್ರದರ್ಶನಕ್ಕೆ ಮನಸೋಲದವರೇ ಇಲ್ಲ. ಇದೇ ಕಾರಣಕ್ಕೆ ಅವರಿಗೆ ಕಿಂಗ್ ಕೊಹ್ಲಿ ಎಂಬ ಬಿರುದು ನೀಡಲಾಗಿದೆ. ಒಮ್ಮೆ ಕ್ರೀಸ್ ಕಚ್ಚಿ ನಿಂತರೆ ಎದುರಾಳಿ ಬೌಲರ್ಗಳಿಗೆ ಬೌಂಡರಿ, ಸಿಕ್ಸರ್ ರುಚಿ ಗ್ಯಾರಂಟಿ. ಅವರ ಆಟ ನೋಡುವುದೇ ಅಭಿಮಾನಿಗಳಿಗೆ ಹಬ್ಬ. ಭಾರತದ ಬದ್ಧ ವೈರಿ ದೇಶಗಳು ತಮ್ಮ ವೈರತ್ವ ಮರೆತು ವಿರಾಟ್ ಆಟ ನೋಡಲು ಬರುತ್ತಾರೆ. ಅಷ್ಟರ ಮಟ್ಟಿಗೆ ವಿರಾಟ್ಗೆ ಅಭಿಮಾನಿಗಳಿದ್ದಾರೆ. ಇದೀಗ ಬಲೂಚಿಸ್ತಾನದ ಅಭಿಮಾನಿಯೊಬ್ಬ ಮರಳಿನಲ್ಲಿ ಕೊಹ್ಲಿಯ ಶಿಲ್ಪವೊಂದನ್ನು ರಚಿಸಿ ತನ್ನ ಅಭಿಮಾನ ತೋರಿದ್ದಾನೆ.
ಟಿ20 ವಿಶ್ವ ಕಪ್ ಸೂಪರ್-12 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಅದ್ಭುತ ಬ್ಯಾಟಿಂಗ್ ನಡೆಸಿ ಎಲ್ಲರ ಗಮನ ಸೆಳೆದಿದ್ದರು. ಕೊಹ್ಲಿಯ ಈ ಪ್ರದರ್ಶನಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ದೂರದ ಬಲೂಚಿಸ್ತಾನದ ಆರ್.ಎ. ಗದ್ದಾನಿ ಎಂಬ ಕೊಹ್ಲಿ ಅಭಿಮಾನಿ ವಿರಾಟ್ ಕೊಹ್ಲಿಯ ಕಲಾಕೃತಿಯನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಜತೆಗೆ ಈ ಕಲಾಕೃತಿಯನ್ನು ರಚಿಸಲು ಕಿರಿಯ ಕಲಾವಿದನನ್ನೂ ಬಳಸಿಕೊಂಡಿದ್ದಾನೆ.
ಆರ್.ಎ. ಗದ್ದಾನಿ ಮರಳಿನಲ್ಲಿ ಕೊಹ್ಲಿಯ ಶಿಲ್ಪವನ್ನು ಮಾಡುವ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ತಾನು ಕೊಹ್ಲಿಯ ಅಪ್ಟಟ ಅಭಿಮಾನಿ ಎಂದು ಹೇಳಿದ್ದಾನೆ. ಈ ವಿಡಿಯೊ ಕಂಡ ಕೊಹ್ಲಿ ಅಭಿಮಾನಿಗಳು ನಿಮ್ಮ ಪ್ರಯತ್ನಕ್ಕೆ ಹ್ಯಾಅಟ್ಸ್ಅಪ್, ನಿಮ್ಮ ಈ ಕಲೆ ಅದ್ಭುತವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | T20 World Cup | ಗ್ಲೆನ್ ಫಿಲಿಪ್ಸ್ ಶತಕ; ಲಂಕಾ ವಿರುದ್ಧ ನ್ಯೂಜಿಲೆಂಡ್‌ಗೆ 65 ರನ್ ಗೆಲುವು