ಮುಂಬಯಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ 5ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ವಿಭಿನ್ನ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಈ ಸಂಭ್ರಮವನ್ನು ಆಚರಿಸಿದ್ದಾರೆ.
2017 ಡಿಸೆಂಬರ್ 11 ರಂದು ವಿರಾಟ್ ಮತ್ತು ಅನುಷ್ಕಾ ಭಾರತೀಯ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಇದೀಗ ವಿರುಷ್ಕಾ ಜೋಡಿ ತಮ್ಮ ಐದನೇ ವಿವಾಹ ವಾರ್ಷಿಕೋತ್ಸವದಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ರೋಮ್ಯಾಂಟಿಕ್ ರೀತಿಯಲ್ಲಿ ಪರಸ್ಪರ ವಿಶ್ ಮಾಡಿಕೊಂಡಿದ್ದಾರೆ. ಅನುಷ್ಕಾ ತನ್ನ ಪೋಸ್ಟ್ನಲ್ಲಿ ವಿರಾಟ್ ಅವರ ಹಾಸ್ಯಭರಿತ ಫೋಟೊಗಳನ್ನು ಶೇರ್ ಮಾಡಿದ್ದರೆ ಆದರೆ ವಿರಾಟ್ ಪೋಸ್ಟ್ ಮಾತ್ರ ಸಖತ್ ರೋಮ್ಯಾಂಟಿಕ್ ಆಗಿದೆ.
ಅನುಷ್ಕಾ ಶರ್ಮಾ ವಿಭಿನ್ನ ಕಥೆಗಳನ್ನು ಹೇಳುವ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಮೊದಲ ಫೋಟೋ ಅನುಷ್ಕಾ ಅವರ ಹಾರರ್ ಚಿತ್ರ ‘ಪರಿ’ ಯ ಫೋಟೋಶಾಪ್ ಮಾಡಿದ ಪೋಸ್ಟರ್ ಆಗಿದ್ದು, ಇದರಲ್ಲಿ ಅನುಷ್ಕಾ ಹಿಂದೆ ವಿರಾಟ್ ನಿಂತಿದ್ದಾರೆ. “ವಿರಾಟ್ ಯಾವಾಗಲೂ ತಮ್ಮ ಪಕ್ಕದಲ್ಲಿ ನಿಲ್ಲುತ್ತಾರೆ ಎಂದು ನನಗೆ ತಿಳಿದಿದೆ” ಎಂದು ಬರೆದಿದ್ದಾರೆ. ಎರಡನೇ ಫೋಟೊ ಒಂದು ಮುದ್ದಾದ ಸೆಲ್ಫಿಯಾಗಿದ್ದು, ಇಬ್ಬರೂ ಪರಸ್ಪರರ ಬಾಂಧವ್ಯವನ್ನು ಇಷ್ಟಪಡುತ್ತೇವೆ. ಇಬ್ಬರೂ ತಮ್ಮನ್ನು ತಾವು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇವೆ” ಎಂದು ಅನುಷ್ಕಾ ಬರೆದಿದ್ದಾರೆ.
ಮೂರನೇ ಫೋಟೋದಲ್ಲಿ, ವಿರಾಟ್ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದು ಅನುಷ್ಕಾ ಹೆರಿಗೆಯ ಸಂದರ್ಭದಲ್ಲಿ ತೆಗೆದ ಫೋಟೋ. ನಾಲ್ಕನೇ ಫೋಟೋದಲ್ಲಿ ಇಬ್ಬರ ಚಿತ್ರ ಪ್ರಿಂಟ್ ಮಾಡಿರುವ ಮಗ್ ಇದೆ. ಐದನೇ ಫೋಟೋದಲ್ಲಿ ವಿರಾಟ್ ಗಡ್ಡ ಬಿಟ್ಟು ಫೋಟೋಗೆ ಫೋಸ್ ನೀಡಿದ್ದಾರೆ. ಕೊನೆಯ ಫೋಟೋದಲ್ಲಿ ಅನುಷ್ಕಾ ಮತ್ತು ವಿರಾಟ್ ಇದ್ದು, “ನಮ್ಮ ಪ್ರೀತಿ ಇಂದು, ನಾಳೆ ಮತ್ತು ಎಂದೆಂದಿಗೂ ಉಳಿಯಲಿ” ಎಂದು ಬರೆದುಕೊಂಡಿದ್ದಾರೆ.
ಇನ್ನೊಂದೆಡೆ ವಿರಾಟ್ ಈ ಪೋಸ್ಟ್ಗೆ ‘ನನ್ನ ಪ್ರೀತಿ’ ಎಂದು ಕಾಮೆಂಟ್ ಮಾಡಿದ್ದಾರೆ. ಜತೆಗೆ ‘ಅನುಷ್ಕಾ ನೀನು ನಿಜವಾಗಿಯೂ ನನ್ನ ಅತ್ಯಂತ ಸುಂದರವಾದ ಚಿತ್ರಗಳನ್ನು ಸಂಗ್ರಹಿಸಿ ಇಟ್ಟಿದ್ದೀಯ!” ಎಂದು ವಿರಾಟ್ ಹೇಳಿದ್ದಾರೆ.
ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಅತ್ಯಂತ ಸುಂದರವಾದ ಪೋಸ್ಟ್ ಮಾಡುವ ಮೂಲಕ, “ಈ ಐದು ವರ್ಷಗಳ ಪ್ರಯಾಣವು ಸುಂದರ ದಿನದಂತೆ ಪೂರ್ಣಗೊಂಡಿದೆ. ನಿನ್ನನ್ನು ಪಡೆದ ನಾನೇ ಅದೃಷ್ಟಶಾಲಿ, ನಾನು ನಿನ್ನನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತೇನೆ” ಎಂದು ಅನುಷ್ಕಾಗೆ ವಿಶ್ ಮಾಡಿದ್ದಾರೆ. ಅಭಿಮಾನಿಗಳು ಈ ಜೋಡಿಗೆ ಶುಭಕೋರಿದ್ದಾರೆ.
ಇದನ್ನೂ ಓದಿ | Virat Kohli | ಬಾಂಗ್ಲಾ ವಿರುದ್ಧ ಶತಕ ಸಿಡಿಸಿ ರಿಕಿ ಪಾಂಟಿಂಗ್ ದಾಖಲೆ ಮುರಿದ ಕಿಂಗ್ ಕೊಹ್ಲಿ