ಮುಂಬಯಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ಬಳಗ ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ನ (WPL 2023) ಉದ್ಘಾಟನಾ ಆವೃತ್ತಿಯಲ್ಲಿ ಮೊದಲ ವಿಜಯ ದಾಖಲಿಸಿದೆ. ಯುಪಿ ವಾರಿಯರ್ಸ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿದೆ. ಈ ಗೆಲುವಿಗೆ ವಿರಾಟ್ಕೊಹ್ಲಿ ಕೊಟ್ಟ ಸಲಹೆಯೇ ಕಾರಣ ಎಂಬುದಾಗಿ ಪಂದ್ಯದ ಬಳಿಕ ನಾಯಕಿ ಸ್ಮೃತಿ ಮಂಧಾನಾ ಹೇಳಿದ್ದಾರೆ. ಅವರು ಹಾಗೆ ಹೇಳುವುದಕ್ಕೆ ಕಾರಣವಿದೆ. ಯಾಕೆಂದರೆ ಪಂದ್ಯಕ್ಕೆ ಮೊದಲು ಆರ್ಸಿಬಿ ಪುರುಷರ ತಂಡದ ಮಾಜಿ ನಾಯಕ ಹಾಗೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆರ್ಸಿಬಿ ಡ್ರೆಸಿಂಗ್ ರೂಮ್ಗೆ ಹೋಗಿ ಮಾತನಾಡಿರುವುದು.
ಸತತವಾಗಿ ಐದು ಪಂದ್ಯಗಳಲ್ಲಿ ಸೋತಿದ್ದ ಆರ್ಸಿಬಿ ತಂಡ ಸಂಪೂರ್ಣವಾಗಿ ಕಂಗೆಟ್ಟು ಹೋಗಿತ್ತು. ಆದರೆ, ಯುಪಿ ವಿರುದ್ಧದ ಗೆಲುವು ತಂಡದ ವಿಶ್ವಾಸ ಹೆಚ್ಚಿಸಿದೆ. ಅಂತೆಯೇ ಪಂದ್ಯಕ್ಕೆ ಮೊದಲು ಆಟಗಾರರ ಜತೆ ಮಾತನಾಡಿದ ವಿರಾಟ್ ಕೊಹ್ಲಿ, ಗೆಲುವಿನ ಟಿಪ್ಸ್ ಕೊಟ್ಟಿದ್ದಾರೆ. ಇದೇ ವೇಳೆ ಅವರು ಸೋಲಿನಿಂದ ಹೊರಗೆ ಬರಲು ಹೇಗೆ ವಿಶ್ವಾಸ ಮೂಡಿಸಿಕೊಳ್ಳಬಹುದು ಎಂಬುದಾಗಿಯೂ ಹೇಳಿದ್ದಾರೆ.
ಆರ್ಸಿಬಿ ಟ್ವೀಟ್ ಮಾಡಿದ ವಿಡಿಯೊ ಇಲ್ಲಿದೆ
ತಮ್ಮ ಕ್ಯಾಂಪ್ಗೆ ಕೊಹ್ಲಿಗೆ ಆರ್ಸಿಬಿ ಕ್ಯಾಂಪ್ಗೆ ಬಂದು ವಿಶ್ವಾಸ ತುಂಬಿರುವ ವಿಡಿಯೊವನ್ನು ಆರ್ಸಿಬಿ ಟ್ವೀಟ್ ಮಾಡಿದೆ. ನಾವು ಯಾವಾಗಲೂ ನಮಗೆ ಸಿಕ್ಕಿರುವ ಅವಕಾಶಗಳ ಬಗ್ಗೆ ಯೋಜನೆ ಮಾಡಬೇಕು. ಎಲ್ಲದರಲ್ಲೂ ಕೆಟ್ಟದು ಹಾಗೂ ಒಳ್ಳೆಯದು ಎಂಬ ಎರಡು ಮುಖಗಳಿರುತ್ತವೆ. ಆದರೂ ನೀವೆಲ್ಲರೂ ಉತ್ತಮ ತಂಡದಲ್ಲಿ ಇದ್ದೀರಿ ಎಂಬ ನಂಬಿಕೆ ನನ್ನದು. ನೂರಕ್ಕೆ ನೂರರಷ್ಟು ಪರಿಶ್ರಮ ಪಡುತ್ತೇವೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದ್ದಾರೆ.